02/08/2025 5:03 PM

Translate Language

Home » ಲೈವ್ ನ್ಯೂಸ್ » ಇಬ್ಬರು ಪ್ರಾಧ್ಯಾಪಕರು ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ವಿದ್ಯಾರ್ಥಿನಿ ಆತ್ಮಹತ್ಯೆ

ಇಬ್ಬರು ಪ್ರಾಧ್ಯಾಪಕರು ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ವಿದ್ಯಾರ್ಥಿನಿ ಆತ್ಮಹತ್ಯೆ

Facebook
X
WhatsApp
Telegram

ಈ  ಘಟನೆ ಗ್ರೇಟರ್‌ ನೊಯಿಡಾದ ಶಾರದಾ ವಿಶ್ವವಿದ್ಯಾಲಯದಲ್ಲಿ ನಡೆದಿದೆ.ದಂತ ವೈದ್ಯಕೀಯ ಪದವಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಹಾಸ್ಟೆಲ್‌ ಕೊಠಡಿಯಲ್ಲಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರು ಶಿಕ್ಷಕರು ತನಗೆ ಕಿರುಕುಳ ನೀಡಿದ್ದಾರೆ ಎಂದು ಆಕೆ ಮರಣಪತ್ರದಲ್ಲಿ ಬರೆದಿದ್ದಾರೆ. ಗ್ರೇಟರ್‌ ನೊಯಿಡಾದಲ್ಲಿ ಈ ಖಾಸಗಿ ವಿಶ್ವವಿದ್ಯಾಲಯವಿದೆ.

‘ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಪ್ರಕರಣದ ತನಿಖೆಗೆ ವಿಶ್ವವಿದ್ಯಾಲಯವು ಉನ್ನತ ಮಟ್ಟದ ಸಮಿತಿಯೊಂದನ್ನೂ ರಚಿಸಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಶಿಕ್ಷಕರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಸಂತ್ರಸ್ತೆಯ ಪೋಷಕರೊಂದಿಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಶನಿವಾರ ಮಾತುಕತೆ ನಡೆಸಿತ್ತು. ಪ್ರಕರಣದ ಸಂಬಂಧ ಕ್ರಮ ಕೈಗೊಳ್ಳಲು ಐದು ದಿನಗಳವರೆಗೆ ಅವಕಾಶ ನೀಡಿ ಎಂದು ಪೋಷಕರಲ್ಲಿ ಮಂಡಳಿ ಮನವಿ ಮಾಡಿಕೊಂಡಿತ್ತು ಎನ್ನಲಾಗಿದೆ. ಪ್ರಕರಣದ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಸಂತ್ರಸ್ತೆ ಹೇಳಿದ್ದೇನು?

‘ಇಬ್ಬರು ಪ್ರಾಧ್ಯಾಪಕರು ಮಾನಸಿಕವಾಗಿ ನನಗೆ ಹಿಂಸೆ ನೀಡಿದ್ದಾರೆ. ನನ್ನನ್ನು ಅವಮಾನಿಸಿದ್ದಾರೆ. ಅವಮಾನ ತಾಳಲಾರದೆ ಬಹಳ ದಿನಗಳಿಂದ ನಾನು ಖಿನ್ನತೆಗೆ ಒಳಗಾಗಿದ್ದೇನೆ. ನನಗಾದ ಹಿಂಸೆಯೇ ಆ ಇಬ್ಬರಿಗೂ ಆಗಬೇಕು. ಇನ್ನಷ್ಟು ದಿನ ನಾನು ಬದುಕಲಾರೆ’ ಎಂದು ವಿದ್ಯಾರ್ಥಿನಿಯು
ಮರಣಪತ್ರದಲ್ಲಿ ಬರೆದಿದ್ದಾರೆ.

ಮೃತ ವಿದ್ಯಾರ್ಥಿನಿಯ ತಾಯಿಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸುವುದಾಗಿ ನನ್ನ ಮಗಳಿಗೆ ಆ ಪ್ರಾಧ್ಯಾಪಕರು ಬೆದರಿಕೆ ಒಡ್ಡಿದ್ದರು

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!