ಹೊಸ ದೆಹಲಿ.13.ಜುಲೈ.25:- ಯುಕೇಂದ್ರ ಆಯುಷ್ ಸಚಿವ ಪ್ರತಾಪ್ ರಾವ್ ಜಾಧವ್ ಮಾತನಾಡಿ, ಆಯುರ್ವೇದವನ್ನು ಇಂದು ಇಡೀ ಜಗತ್ತು ಅಳವಡಿಸಿಕೊಳ್ಳುತ್ತಿದೆ. ಗುಜರಾತ್‌ನ ಜಾಮ್‌ನಗರದಲ್ಲಿರುವ ಆಯುರ್ವೇದ ಬೋಧನೆ ಮತ್ತು ಸಂಶೋಧನಾ ಸಂಸ್ಥೆ-ಐಟಿಆರ್‌ಎಯ ಮೊದಲ ಘಟಿಕೋತ್ಸವ ಸಮಾರಂಭದಲ್ಲಿ ಶ್ರೀ ಜಾಧವ್ ಈ ವಿಷಯ ತಿಳಿಸಿದರು. ಪ್ರಪಂಚದಾದ್ಯಂತ ನಮ್ಮ ಪ್ರಾಚೀನ ವೈದ್ಯಕೀಯ ವ್ಯವಸ್ಥೆಯ ಪ್ರಚಾರದಲ್ಲಿ ಐಟಿಆರ್‌ಎ ಪ್ರಮುಖ ಕೊಡುಗೆ ನೀಡಿದೆ ಎಂದು ಅವರು ಹೇಳಿದರು.
ಈ ಸಮಾರಂಭದಲ್ಲಿ ಎಂಡಿ/ಎಂಎಸ್‌ನ 143 ವೈದ್ಯಕೀಯ ವಿದ್ಯಾರ್ಥಿಗಳು, ಎಂ. ಫಾರ್ಮ್ ಆಯುರ್ವೇದದ 35 ವಿದ್ಯಾರ್ಥಿಗಳು, ಡಿಪ್ಲೊಮಾ ಆಯುರ್ವೇದ ಫಾರ್ಮಸಿಯ 33 ವಿದ್ಯಾರ್ಥಿಗಳು, ಡಿಪ್ಲೊಮಾ ಪ್ರಕೃತಿ ಚಿಕಿತ್ಸೆಯ 18 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 234 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಐಟಿಆರ್‌ಎಗೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀ ಜಾಧವ್ ವಿವಿಧ ವಿಭಾಗಗಳು ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡಿದರು.