ಬೆಂಗಳೂರು.07.ಆಗಸ್ಟ್.25:- ಸಿಎಂ ನೇತೃತ್ವದ ಸಚಿವ ಸಂಪುಟ ಸಭೆ ಮುಕ್ತಾಯವಾಗಿದ್ದು, ಸಚಿವ ಸಂಪುಟ ⅔ಸಭೆಯ ನಂತರ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಸಂಪುಟದಲ್ಲಿ ಅನೇಕ ವಿಷಯಗಳು ಚರ್ಚೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸಭೆಯಲ್ಲಿ 18 ವಿಧೇಯಕಗಳಿಗೆ ಸಂಪುಟದ ಒಪ್ಪಿಗೆ
ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ಸಭೆಯಲ್ಲಿ 18 ವಿಧೇಯಕಗಳಿಗೆ ಒಪ್ಪಿಗೆ ನೀಡಲಾಗಿದೆ.
ಕರ್ನಾಟಕ ಕೋಪರೇಟೀವ್ ಬಿಲ್-2025,
ಕರ್ನಾಟಕ ಸೌಹಾರ್ಧ ಬಿಲ್-2025,
ಕರ್ನಾಟಕ ಸ್ಪೋರ್ಟ್ ಲ್ಯಾಂಡಿಂಗ್ ಬಿಲ್-2025,
ಗ್ರೇಟರ್ ಬೆಂಗಳೂರು ಬಿಲ್-2025,
ಕರ್ನಾಟಕ ಲ್ಯಾಂಡ್ ರಿಫಾರ್ಮ್ಸ್ ಬಿಲ್-2025,
ಕರ್ನಾಟಕ ಎನ್ಸೆನ್ಶಿಯಲ್‌ಬಿಲ್-2025,
ಭಾರತೀಯ ನಾಗರೀಕ ಸುರಕ್ಷಾ ಕಾಯ್ದೆ ತಿದ್ದುಪಡಿ-2025,
ಕರ್ನಾಟಕ ದೇವದಾಸಿ ನಿಷೇಧ ಬಿಲ್-2025,
ಕರ್ನಾಟಕ ಕಂಪ್ಲೈಯರ್ಸ್ ಬಿಲ್-2025,
ನೊಂದಣಿ ಮತ್ತು ಮುದ್ರಾಂಕ ತಿದ್ದುಪಡಿ ಬಿಲ್-2025,
ಮುನ್ಸಿಪಲ್ ಕಾರ್ಪೋರೇಷನ್ ಬಿಲ್ ತಿದ್ದುಪಡಿ-2025,
ಕರ್ನಾಟಕನಾಗರೀಕ ಸೇವಾ ನಿಯಮಗಳ ತಿದ್ದುಪಡಿ ಬಿಲ್ ಸೇರಿದಂತೆ ಒಟ್ಟು 18 ವಿಧೇಯಕಗಳಿಗೆ ಸಂಪುಟದ ಒಪ್ಪಿಗೆ ನೀಡಿದೆ.
12 ಕೋಲ್ಡ್ ಸ್ಟೋರೇಜ್ ಘಟಕಗಳ ನಿರ್ಮಾಣ
ಇನ್ನು ಇದಿಷ್ಟೇ ಅಲ್ಲದೇ, ರಾಜ್ಯದಲ್ಲಿ 12 ಕೋಲ್ಡ್ ಸ್ಟೋರೇಜ್ ಘಟಕಗಳ ನಿರ್ಮಾಣ ಮಾಡಲು ಸಹ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಸಚಿವರು ಹೇಳಿದ್ದು, 171 ಕೋಟಿ ವೆಚ್ಚಕ್ಕೆ ಸಹ ಒಪ್ಪಿಗೆ ಸಿಕ್ಕಿದೆ.
ಇನ್ನು ಕೃಷಿ ಬೆಲೆ ಆಯೋಗದ ಕರ್ತವ್ಯಗಳ ತಿದ್ದುಪಡಿಗೆ ಅನುಮೋದನೆ ಸಿಕ್ಕಿದ್ದು, ವಿದ್ಯಾರ್ಥಿನಿಲಯಗಳ ಮಂಚ,ಮ್ಯಾಟ್ರಸ್‌ಗಳನ್ನ 40 ಕೋಟಿ ವೆಚ್ಚದಲ್ಲಿ ಖರೀದಿಗೆ ಒಪ್ಪಿಗೆ ಸಿಕ್ಕಿದೆ ಎಂದು ಹೆಚ್.ಕೆ.ಪಾಟೀಲ್ ಹೇಳಿಕೆ ನೀಡಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ರೋಗಿತ್ ವೇಮುಲಾ ಬಿಲ್ ಚರ್ಚೆಯಾಗಿದ್ದು, ಆದರೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಮುಂದಿನ ಕ್ಯಾಬಿನೆಟ್ ನಲ್ಲಿ ನಿರ್ಧಾರ ಮಾಡಲಾಗುತ್ತದೆ. ಹಾಗೆಯೇ, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ಸರಳೀಕರಣ ಮಾಡಲಾಗುತ್ತದೆ. ಈ ಮೊದಲು ಮುಸ್ಲೀಂಯೇತರ ಶಿಕ್ಷಣ ಸಂಸ್ಥೆಗಳಲ್ಲಿ 50 ರಷ್ಟು ಕಡ್ಡಾಯವಿತ್ತು.
ಅದನ್ನ ಈಗ ತೆಗೆದುಹಾಕಲಾಗಿದೆ. ತಲಕಾಡು ಗ್ರಾ, ಪಂಚಾಯ್ತಿಯನ್ನ ಪಟ್ಟಣ ಪಂಚಾಯ್ತಿಯಾಗಿ ಏರಿಕೆ ಮಾಡಲಾಗುತ್ತದೆ ಹಾಗೂ ಕೈವಾರ ಪಟ್ಟಣ ಪಂಚಾಯ್ತಿಯನ್ನ ನಗರಸಭೆಯಾಗಿ ಮಾಡಲಾಗುತ್ತದೆ ಹಾಗೂ ವಿಜಯಪುರದ ಇಂಡಿ ಪುರಸಭೆಯನ್ನ ನಗರಸಭೆಯಾಗಿ ಮೇಲ್ದರ್ಜೇಗೇರಿಕೆಗೆ ಮಾಡಲಾಗುತ್ತದೆ.
ಅಲ್ಪಸಂಖ್ಯಾತ ಮಕ್ಕಳಿಗೆ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿದೆ. 10 ಪ್ರದೇಶಗಳಲ್ಲಿ ಸುಮಾರು 82 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ. ಬೀದರ್ ನಲ್ಲಿ ಕ್ಯಾನ್ಸರ್ ಆಸ್ಪತ್ರೆಯನ್ನ 36 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ ಹಾಗೂ ಬೀದರ್ ವೈ.ವಿ.ಆವರಣದಲ್ಲಿ 100 ಹಾಸಿಗೆ ಆಸ್ಪತ್ರೆಯನ್ನ ನಿರ್ಮಿಸಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಕುರುಬರ ಸಂಘಕ್ಕೆ ಕಾಳಹಸ್ತಿಪುರದಲ್ಲಿ 4017ಅಡಿ ಅಳತೆಯ ನಿವೇಶನ ಗುತ್ತಿಗೆ ನೀಡಲಾಗುತ್ತದೆ. ಅದರ ಜೊತೆಗೆ ವಿದ್ಯಾರ್ಥಿನಿಲಯಕ್ಕಾಗಿ ನಿವೇಶನ ನೀಡಲು ಸಹ ನಿರ್ಧಾರ ಮಾಡಲಾಗಿದೆ. ಇವೆಲ್ಲದರ ಜೊತೆಗೆ ನರೇಗಲ್,ಕುಸನೂರು ಏತನೀರಾವರಿ ಯೋಜನೆ ಮಾಡಲಾಗುತ್ತಿದ್ದು, ಸುಮಾರು 111 ಕೆರೆಗಳನ್ನ ತುಂಬಿಸುವ ಯೋಜನೆ ಇದಾಗಿದೆ. ಬಾಗಲಕೋಟೆ ಸೋಕನಾಗದಿ ಗ್ರಾಮದಲ್ಲಿ ಏತನೀರಾವರಿ ಯೋಜನೆಗೆ 12 ಕೋಟಿ ಅಂದಾಜು ಮೊತ್ತಕ್ಕೆ ಸಮ್ಮತಿ ಸೂಚಿಸಲಾಗಿದೆ.
ಹಾರಂಗಿ ಬಲದಂಡೆ ಶಾಕಾ ನಾಲಾ ಯೋಜನೆ ಆಧುನೀಕರಣಕ್ಕೆ 50ಕೋಟಿ ವೆಚ್ಚದ ಕಾಮಗಾರಿಗೆ ಒಪ್ಪಿಗೆ ಕೊಟ್ಟಿದ್ದು, ಹೇಮಾವತಿ ಎಡದಂತೆ ಕಾಲುವೆ ಕಾಮಗಾರಿಗೆ 75 ಕೋಟಿ ವೆಚ್ಚದ ಕಾಮಗಾರಿಗೆ ಒಪ್ಪಿಗೆ ನೀಡಲಾಗಿದೆ. ನವೀಲು ತೀರ್ಥದಿಂದ ಚಂದರಗಿ ಕೆರೆಗಳಿಗೆ ನೀರು ಪೂರೈಕೆ ಮಾಡಲು 85 ಕೋಟಿ ವೆಚ್ಚದ ಯೋಜನೆಗೆ ಸಹ ಸಮ್ಮತಿ ಸಿಕ್ಕಿದೆ.