Home » ಲೈವ್ ನ್ಯೂಸ್ » ಇಂದಿನ ಸಂಪುಟ ಸಭೆಯಲ್ಲಿ: ವಿವಿಧ ವಿಷಯಗಳ ಚರ್ಚೆ?

ಇಂದಿನ ಸಂಪುಟ ಸಭೆಯಲ್ಲಿ: ವಿವಿಧ ವಿಷಯಗಳ ಚರ್ಚೆ?

Facebook
X
WhatsApp
Telegram

ಬೆಂಗಳೂರು.02.ಜನವರಿ.26: ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರ ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿಮ್ಮ ಭವಿಷದ್ ಚರ್ಚೆ ಆಗಲಿದೆ ಎಂದು ಕಾಯುತ್ತಿದಾರೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, 2005 (ಮನ್ರೇಗಾ) ಯೋಜನೆ ಬದಲು ವಿಕಸಿತ್ ಭಾರತ್   ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕ ಮಿಷನ್ (ಗ್ರಾಮೀಣ) ಕಾಯ್ದೆ, 2025 (ವಿಬಿ  ಜಿ ರಾಮ್ ಜಿ) ಜಾರಿಗೊಳಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್‌ ತಕರಾರು ಎತ್ತಿದೆ.

ಅಲ್ಲದೆ, ಜ.5 ರಿಂದ ದೇಶಾದ್ಯಂತ ಆಂದೋಲನಕ್ಕೂ ಕಾಂಗ್ರೆಸ್ ಮುಂದಾಗಿದೆ. ಈ ಸಂದರ್ಭದಲ್ಲಿಯೇ ಸಂಪುಟ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದ್ದು, ಕೇಂದ್ರದ ಕಾಯ್ದೆಯನ್ನು ರಾಜ್ಯ ಸರ್ಕಾರ ಪುರಸ್ಕರಿಸುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

ಇಂದು ನ್ಯಾ.ಕುನ್ಹಾ ವರದಿ ಮಂಡನೆ?:

ಕೋವಿಡ್ 19 ಸಂದರ್ಭದಲ್ಲಿ ಔಷಧಿ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತು ನ್ಯಾ.ಜಾನ್ ಮೈಕಲ್ ಡಿ’ಕುನ್ಹಾ ಸಲ್ಲಿಸಿರುವ ವರದಿಯೂ ಮಂಡನೆ ಆಗುವ ಸಂಭವವಿದೆ. ಬೆಂಗಳೂರು ನಗರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಕ್ರಮವಾಗಿ 63.8 ಕೋಟಿ ಹಾಗೂ 42.19 ಕೋಟಿ ಸೇರಿ ಸುಮಾರು 106 ಕೋಟಿ ಮೊತ್ತದ ಖರೀದಿ ವ್ಯವಹಾರ ನಡೆದಿರುವ ಬಗ್ಗೆ ಕುನ್ಹಾ ಆಯೋಗವು ಈ ಅಂತಿಮ ವರದಿಯಲ್ಲಿ ಉಲ್ಲೇಖಿಸಿದೆ.

‘ಈ ವರದಿಯ ಅಂಶಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವುದಿಲ್ಲ. ಆದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ಖರೀದಿ ಪ್ರಕ್ರಿಯೆಯಲ್ಲಿ ಕೆಲವು ಸುಧಾರಣೆಗಳು ಮತ್ತು ಪಾರದರ್ಶಕತೆ ತರುವ ಅಗತ್ಯವಿದ್ದು, ಬೇಕಿದ್ದರೆ ಸರ್ಕಾರ ಈ ವರದಿಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬಹುದು’ ಎಂದು ಆಯೋಗವೇ ತಿಳಿಸಿದ್ದರಿಂದ ಸಂಪುಟದ ಮುಂದೆ ಬರಬಹುದು ಎನ್ನಲಾಗಿದೆ.

ಗೃಹ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ :

ಜತೆಗೆ ಕರ್ನಾಟಕ ಗೃಹ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ವಿಧೇಯಕ  2026 ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ) (ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ವರ್ಗಾವಣೆ ನಿಯಂತ್ರಣ) ನಿಯಮಗಳು  2026ಕ್ಕೆ ಅನುಮೋದನೆ ನೀಡುವ ಸಾಧ್ಯತೆ ಇದೆ.

ಗೃಹಲಕ್ಷ್ಮಿ ಹಣ ?

ಕಳೆದ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಫಲಾನುಭವಿಗಳಿಗೆ ತಲುಪಿಲ್ಲ ಎಂದು ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು. ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಆಗುವ ಸಂಭವವಿದ್ದು, ಅಧಿಕಾರಿಗಳಿಂದ ವಿವರಣೆ ಪಡೆದು ಹಣ ಮೀಸಲಿಡುವ ಬಗ್ಗೆ ನಿರ್ಧಾರ ಆಗಬಹುದು ಎನ್ನಲಾಗಿದೆ.

ಸಿಸಿಆರ್‌ಪಿ ನೀತಿಗೆ ಅನುಮೋದನೆ ?:

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರಿ ಶಾಲೆಗಳಲ್ಲಿ ಸಮುದಾಯ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನೀತಿ(ಸಿಸಿಎಸ್‌ಆರ್‌ಪಿ) ಸಿದ್ಧಪಡಿಸುವ ಬಗ್ಗೆ ಸಂಪುಟ ಸಭೆಯಲ್ಲಿ ಸಮಾಲೋಚನೆ ಆಗಲಿದ್ದು, ಇನ್ಫೋಸಿಸ್ ಲಿಮಿಟೆಡ್ ವತಿಯಿಂದ ಸಿಎಸ್‌ಆರ್‌ ಅಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆ 4 ತಾಲೂಕುಗಳ 97 ಸರ್ಕಾರಿ ಶಾಲೆ ಮತ್ತು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ 16 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲು 685 ಕೋಟಿ ರೂ. ಘೋಷಿಸಬಹುದು.

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅಗತ್ಯವಿರುವ 41685 ಪೀಠೋಪಕರಣಗಳನ್ನು ಕೆಎಸ್‌ಎಫ್‌ಐಸಿಯಿಂದ 8.64 ಕೋಟಿ ರೂ. ಹಾಗೂ ಅಲ್ಪಾವಧಿ ಟೆಂಡರ್ ಮೂಲಕ 26.67 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಅನುಮೋದಿಸಬಹುದು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology