ಬೆಂಗಳೂರು.24.ಜುಲೈ.25:- ವಿಧಾನಸೌಧದಲ್ಲಿ ಇಂದು ಅರಣ್ಯ ಮತ್ತು ಪರಿಸರ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ವಿವಿಧ ಯೋಜನೆಗಳು ಮತ್ತು ವಿಷಯಗಳ ಕುರಿತು ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ಕೃಷಿ ಸಚಿವ ಶ್ರೀ ಚೆಲುವರಾಯಸ್ವಾಮಿ, ಶಾಸಕರಾದ ಶ್ರೀ ರಮೇಶ್ ಬಂಡಿಸಿದ್ದೆಗೌಡ, ಶ್ರೀ ರವಿ ಗಣಿಗ, ಶ್ರೀ ಉದಯಕುಮಾರ್, ಶ್ರೀ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಅರಣ್ಯಪಡೆ ಮುಖ್ಯಸ್ಥರಾದ ಶ್ರೀಮತಿ ಮೀನಾಕ್ಷಿ ನೇಗಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
