ಬೀದರ.01.ಜುಲೈ.25:- ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರುಗಳಾದ ಶಶಿಧರ್ ಕೋಸಂಬೆ, ಶೇಖರ್‌ಗೌಡ ಜಿ.ರಾಮತ್ನಾಳ್ ಹಾಗೂ ಡಾ.ತಿಪ್ಪೇಸ್ವಾಮಿ ಕೆ.ಟಿ. ಅವರು ಜುಲೈ.2 ಹಾಗೂ 3 ರಂದು ರಂದು ಬೀದರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುತ್ತಾರೆ.
ಅವರುಗಳು ಜುಲೈ.2 ರಂದು ಬೆಳಿಗ್ಗೆ 8 ಗಂಟೆಗೆ ಭಾಲ್ಕಿ ತಾಲ್ಲೂಕಿನಲ್ಲಿರುವ ಮಕ್ಕಳ ಪಾಲನಾ ಸಂಸ್ಥೆ, ವಸತಿ ನಿಲಯ, ಪೊಲೀಸ್ ಠಾಣೆ, ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ಮತ್ತು ಪರಿಶೀಲನೆ ನಡೆಸಲಿದ್ದಾರೆ. ಮಧ್ಯಾಹ್ನ 2 ರಿಂದ 2.30 ರವರೆಗೆ ಔರಾದ ತಾಲ್ಲೂಕಿನಲ್ಲಿರುವ ಮಕ್ಕಳ ಪಾಲನಾ ಸಂಸ್ಥೆ, ವಸತಿ ನಿಲಯು, ಪೊಲೀಸ್ ಠಾಣೆ, ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ಮತ್ತು ಪರಿಶೀಲನೆ ನಡೆಸಲಿದ್ದಾರೆ. ಮಧ್ಯಾಹ್ನ 2.30 ರಿಂದ 3.30 ರವರೆಗೆ ಬೀದರ ತಾಲ್ಲೂಕಿನಲ್ಲಿರುವ ಮಕ್ಕಳ ಪಾಲನಾ ಸಂಸ್ಥೆ, ವಸತಿ ನಿಲಯ, ಪೊಲೀಸ್ ಠಾಣೆ, ಶಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ಮತ್ತು ಪರಿಶೀಲನೆ ನಡೆಸಿ ಸಂಜೆ 4 ಗಂಟೆಗೆ ಬೀದರ ಬಸ್ ಘಟಕ-1 ರಲ್ಲಿ ಮಕ್ಕಳ ಸ್ನೇಹಿ ಸಾರಿಗೆ ವ್ಯವಸ್ಥೆಯ ಕುರಿತು ಬೀದರನ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಜುಲೈ.3 ರಂದು ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ ಬಸವಕಲ್ಯಾಣ ತಾಲ್ಲೂಕಿನಲ್ಲಿರುವ ಜಿಲ್ಲಾ ಆಸ್ಪತ್ರೆ, ಮಕ್ಕಳ ಪಾಲನಾ ಸಂಸ್ಥೆ, ವಸತಿ ನಿಲಯ, ಪೊಲೀಸ್ ಠಾನೆ, ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ಮತ್ತು ಪರಿಶೀಲನೆ ಹಾಗೂ ಹುಮನಾಬಾದ ತಾಲ್ಲೂಕಿನಲ್ಲಿರುವ ಮಕ್ಕಳ ಪಾಲನಾ ಸಂಸ್ಥೆ, ವಸತಿ ನಿಲಯ, ಪೊಲೀಸ್ ಠಾಣೆ, ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ಮತ್ತು ಪರಿಶೀಲನೆ ನಡೆಸಲಿದ್ದಾರೆ. ನಂತರ ಬೆಳಿಗ್ಗೆ 10.30 ಗಂಟೆಗೆ ಬೀದರ ಜಿಲ್ಲೆಗೆ ಸಂಬAಧಿಸಿದoತೆ ಆಯೋಗದಲ್ಲಿ ದಾಖಲಾಗಿರುವ ಪ್ರಕರಣಗಳ ವಿಚಾರಣೆಯನ್ನು ಬಾಲನ್ಯಾಯ ಮಂಡಳಿ ಮೈಲೂರ ಬೀದರನಲ್ಲಿ ಜರುಗಲಿದೆ ಎಂದು ಬೀದರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.