ಬೀದರ.24.ಜುಲೈ.25:- ಹೈಮಾಸ್ ದೀಪದ ಉದ್ಘಾಟನೆ ಬೀದರ ನಗರದ ಕೋಳಾರ ಕೆ ಗ್ರಾಮದ ಬೀರಲಿಂಗೇಶ್ವರ ದೇವಾಲಯದ ಆವರಣದಲ್ಲಿ ಇಂದು ದಿನಾಂಕ 25/07/2025ರಂದು ಜರುಗಿತ್ತು:*
*ಬೀದರ ನಗರದ ಕೋಳಾರ ಕೆ ಗ್ರಾಮದ ಬೀರಲಿಂಗೇಶ್ವರ ದೇವಾಲಯದ ನಮ್ಮ ತೋಟದ ಪಕ್ಕದ ಆವರಣದಲ್ಲಿ ಇಂದು ಶ್ರೀ ಚಂದ್ರಾಸಿಂಗ ರಾಜಕೀಯ ಮುಖಂಡರು ಉದ್ಘಾಟಿಸಿದರು. ಬೀರಲಿಂಗೇಶ್ವರ ದೇವಾಲಯದ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದ್ದು ಅಲ್ಲಿ ಹೈಮಾಸ್ ಲೈಟ್ ಹಾಕಬೇಕೆಂದು ನಾನು ಸನ್ಮಾನ್ಯ ಶ್ರೀ ಅಜಯಸಿಂಗ್ ಮಾನ್ಯ ಶಾಸಕರು ಮತ್ತು ಅಧ್ಯಕ್ಷರು ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮ ಅವರಿಗೆ ಮನವಿ ಮಾಡಿದ್ದೆ, ಬೀದರ ದಕ್ಷಿಣ ಕ್ಷೇತ್ರದ ನಾಯಕರು ಶ್ರೀ ಚಂದ್ರಾಸಿಂಗ ಅವರ ಸತತ ಪ್ರಯತ್ನದಿಂದ ಕಾರ್ಯಗತವಾಗಿದೆ. ಆದರಿಂದ ಮಂಜೂರಿ ಮಾಡಿದ್ದ ಅಜಯಸಿಂಗ ಮತ್ತು ಚಂದ್ರಾಸಿಂಗ ಅವರಿಗೆ ಧನ್ಯವಾದ.*
*ಕಾರ್ಯಕ್ರಮದಲಿ ಗ್ರಾಮದ ಮುಖಂಡರು ಹಾಜರಿದ್ದರು, ಶ್ರೀ ಪ್ರಶಾಂತ ಶೇರಗಾರ ಅಧ್ಯಕ್ಷರು ಗ್ರಾಮ ಪಂಚಾಯತ್ ಕೋಳಾರ ಕೆ, ಶ್ರೀ ಬಂಡೆಪ್ಪ , ಶ್ರೀ ಬಾಲಾಜಿ, ಶ್ರೀ ಲಾಲೆಂಧ್ರ ವಡಗಾಂವ, ಶ್ರೀ ಪ್ರದೀಪ ಕೋಟೆ, ಶ್ರೀ ಸತೀಶ ನಾವದಗೇರಿ, ಶ್ರೀ ಮಹೇಶ ಸೋಲಾಪುರೆ, ಶ್ರೀ ಅಮರ ವಡಗಾಂವ, ಶ್ರೀ ದತ್ತು ಪಾಟೀಲ, ಶ್ರೀ ಜೇಮ್ಸ ಕೋಳಾರ, ಶ್ರೀ ರಾಜು ಡೋರ ಮತ್ತಿತರರು ಹಾಜರಿದ್ದರು*
*ಶ್ರೀಕಾಂತ ಸ್ವಾಮಿ, ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ*
