ಬೀದರ.02. ಏಪ್ರಿಲ್.25:- ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ.ಖಾದರು ಅವರು ಮೇ.1 ರಂದು ಬೀದರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುತ್ತಾರೆ.
ಅವರು ಮೇ.1 ರಂದು ಬೆಳಿಗ್ಗೆ 9.30 ಗಂಟೆಗೆ ಬೀದರ ಯುವ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷರಾದ ಶಾ ಫರೀದ-ಉಲ್ಲಾ-ಖಾನ ಅವರ ಮನೆಗೆ ಭೇಟಿ ನೀಡಲಿದ್ದಾರೆ. ನಂತರ 10 ಗಂಟೆಗೆ ಬೀದರನ ಸಪ್ನಾ ಹಾಲ್ ಏರಫೋರ್ಟ ರಸ್ತೆ ಬೀದರದಲ್ಲಿ ಹಮ್ಮಿಕೊಂಡಿರುವ ಇಂಗ್ಲೀಷ್ ಹೌಸ್ ಅಕಾಡೆಮಿಯ ಒಂದು ತಿಂಗಳ ವ್ಯಕ್ತಿತ್ವ ವಿಕಾಸನ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.
