Home » ಲೈವ್ ನ್ಯೂಸ್ » ಇಂದು ಕಮಲನಗರ ತಾಲ್ಲೂಕಿನಲ್ಲಿ ಗ್ರಾಮ ಸಂಚಾರ

ಇಂದು ಕಮಲನಗರ ತಾಲ್ಲೂಕಿನಲ್ಲಿ ಗ್ರಾಮ ಸಂಚಾರ

Facebook
X
WhatsApp
Telegram

ಔರಾದ.27.ಡಿಸೆಂಬರ್.25:ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಡಿ.27 ಮತ್ತು 29ರಂದು ಕಮಲನಗರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಗ್ರಾಮ ಸಂಚಾರ ನಡೆಸುವರು.

ಡಿ.27ರ ಬೆಳಗ್ಗೆ 9ಕ್ಕೆ ಡೋಣಗಾಂವ ವಾಡಿ, 9.30ಕ್ಕೆ ಡೋಣಗಾಂವ(ಎA), 10.30ಕ್ಕೆ ರಂಡ್ಯಾಳ, 11.15ಕ್ಕೆ ಹಕ್ಯಾಳ, 12.15ಕ್ಕೆ ಖತಗಾಂವ, 1ಕ್ಕೆ ಮದನೂರ, 2ಕ್ಕೆ ಕಮಲನಗರ, 4ಕ್ಕೆ ಮುರುಗ(ಕೆ), 4.30ಕ್ಕೆ ಬಾಳೂರ ಹಾಗೂ ಡಿ.29ರಂದು ಬೆಳಗ್ಗೆ 9ಕ್ಕೆ ಕೊಟಗ್ಯಾಳ, 10ಕ್ಕೆ ರಾಂಪೂರ, 11ಕ್ಕೆ ಚಾಂಡೇಶ್ವರ, 12ಕ್ಕೆ ಹುಲಸೂರ, ಮಧ್ಯಾಹ್ನ 1ಕ್ಕೆ ಕಾಳಗಾಪೂರ, 2ಕ್ಕೆ ಸೋನಾಳವಾಡಿ, 3.15ಕ್ಕೆ ಸೋನಾಳ, 4ಕ್ಕೆ ಹೊರಂಡಿ ಹಾಗೂ 4.30ಕ್ಕೆ ಡಿಗ್ಗಿ ಗ್ರಾಮದಲ್ಲಿ ಸಂಚರಿಸುವರು.

ಈ ವೇಳೆ ಶಾಸಕರು ಶಾಲೆ, ಅಂಗನವಾಡಿ, ಸರ್ಕಾರಿ ಆಸ್ಪತ್ರೆ, ಪಶು ಚಿಕಿತ್ಸಾಲಯ, ಗ್ರಾಮ ಪಂಚಾಯಿತಿ, ರೈತ ಸಂಪರ್ಕ ಕೇಂದ್ರ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ, ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್, ಸ್ವಚ್ಛತೆ, ಶಾಲೆಗಳಲ್ಲಿ ಬಿಸಿಯೂಟ, ಅಂಗನವಾಡಿಯಲ್ಲಿ ಊಟದ ವ್ಯವಸ್ಥೆ ಹಾಗೂ ಮತ್ತಿತರೆ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸುವರು. ವಿವಿಧ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಮತ್ತು ಪರಿಶೀಲನೆ ನಡೆಸಲಾಗುತ್ತದೆ.
ಶಾಸಕರೊಂದಿಗೆ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು, ಗ್ರಾಮ ಮಟ್ಟದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಲಿದ್ದು, ವೃದ್ಧಾಪ್ಯ ವೇತನ, ವಿಧವಾ ವೇತನ, ಪಡಿತರ ಸಮಸ್ಯೆ, ವಿದ್ಯುತ್, ನೀರು ಸರಬರಾಜು, ರೈತರ ಪಹಣಿ ತಿದ್ದುಪಡಿ, ಸರ್ವೇ ಸಮಸ್ಯೆ, ರೈತರ ಬೆಳೆ ಹಾನಿ ಪರಿಹಾರ, ಫಸಲ್ ವಿಮೆ ಪರಿಹಾರ, ವಿಕಲಚೇತನರ ದೂರುಗಳು ಸೇರಿದಂತೆ ಸಾರ್ವಜನಿಕರ ವಿವಿಧ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕ್ರಮಗಳನ್ನು ಸೂಚಿಸಲಾಗುತ್ತದೆ.


ಗ್ರಾಮದಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳನ್ನು ಪಟ್ಟಿ ಮಾಡಿ ಲಿಖಿತವಾಗಿ ನೀಡಬೇಕು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗ್ರಾಮ ಸಂಚಾರ ಕಾರ್ಯಕ್ರಮದ ಸದುಪಯೋಗ ಪಡೆಯಬೇಕೆಂದು ಶಾಸಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology