|

ಇಂದಿನಿಂದ ಬಜೆಟ್‌ ಅಧಿವೇಶನ ಪುನಾರಂಭ: ಈ ವಾರ 3 ದಿನ ಕಲಾಪ ನಡೆಯಲಿದೆ.

ಬೆಂಗಳೂರು.16.ಮಾರ್ಚ್.26:  ರಾಜ್ಯ ಸರ್ಕಾರ 3 ದಿನಗಳ ಅಲ್ಪವಿರಾಮದ ನಂತರ ರಾಜ್ಯ ವಿಧಾನಮಂಡಲದ ಅಧಿವೇಶನವು ಸೋಮವಾರದಿಂದ ಪುನಃ ಆರಂಭಗೊಳ್ಳಲಿದ್ದು, 3 ದಿನಗಳ ಕಾಲ ನಡೆಯಲಿದೆ. ಯುಗಾದಿ, ರಂಜಾನ್ ಬಳಿಕ ಮತ್ತೆ 3 ದಿನಗಳ ಕಲಾಪ ನಡೆಸಲು ದಿನಾಂಕ ನಿಗದಿತ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿಗೆ ಮಂಡಿಸಿರುವ 4.48 ಲಕ್ಷ ಕೋಟಿ ರೂ.ಗಳ ಬಜೆಟ್‌ ಕುರಿತು ಚರ್ಚೆ ಮುಂದುವರಿಯಲಿದ್ದು, ಕಳೆದ ವಾರ ಮಂಡನೆಯಾಗಿದ್ದ ‘ಕರ್ನಾಟಕ ಜ್ಞಾನ ಭಂಡಾರ ಹಸ್ತಪ್ರತಿಗಳು ಮತ್ತು ಡಿಜಿಟಲೀಕರಣ ವಿಧೇಯಕ’, ‘ಕರ್ನಾಟಕ ಪೊಲೀಸು (ತಿದ್ದುಪಡಿ) ವಿಧೇಯಕ’, ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್‌ (ತಿದ್ದುಪಡಿ) ವಿಧೇಯಕ’ ಮತ್ತು ಕರ್ನಾಟಕ ಮುನ್ಸಿಪಾಲಟಿಗಳ ಮತ್ತು ಕೆಲವು ಇತರೆ (ತಿದ್ದುಪಡಿ) ವಿಧೇಯಕ’ಗಳಿಗೆ ಅನುಮೋದನೆ ದೊರಕುವ ಸಾಧ್ಯತೆಗಳಿವೆ.

ಅಲ್ಲದೆ, ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ದಲ್ಲಿ ಪದೇಪದೆ ನಡೆಯುತ್ತಿರುವ ಅಕ್ರಮಗಳಿಂದಾಗಿ ಉದ್ಯೋಗದ ಕನಸು ಹೊತ್ತ ಯುವ ಜನಾಂಗಕ್ಕೆ ಆಗುತ್ತಿರುವ ಅನ್ಯಾಯಗಳ ಕುರಿತು ಬಿಜೆಪಿಯ ವಿ.ಸುನೀಲ್ ಕುಮಾರ್, ಎಸ್. ಸುರೇಶಕುಮಾರ್, ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಪ್ರಸ್ತಾಪಿಸಿದ್ದಕ್ಕೆ ಸರ್ಕಾರ ಉತ್ತರ ನೀಡಲಿದೆ. ಜತೆಗೆ ರಾಜ್ಯದಲ್ಲಿ ಹೆಣ್ಣುಭ್ರೂಣ ಹತ್ಯೆ, ಬಾಣಂತಿಯರ ಸಾವು ಇತರ ವಿಚಾರಗಳ ಬಗ್ಗೆ ಆರ್.ಅಶೋಕ್‌ ಸೇರಿದಂತೆ ಬಿಜೆಪಿ ಶಾಸಕರು ಚರ್ಚಿಸಲಿದ್ದಾರೆ.

Similar Posts

Leave a Reply

Your email address will not be published. Required fields are marked *