05/08/2025 3:17 AM

Translate Language

Home » ಲೈವ್ ನ್ಯೂಸ್ » ಆರೋಗ್ಯಕರ ಸಮಾಜ ನಿರ್ಮಿಸಲು ಯುವಕರು ಮುಂದಾಗಿರಿ- ಪ್ರೊ.ಬಿ.ಎಸ್.ಬಿರಾದಾರ

ಆರೋಗ್ಯಕರ ಸಮಾಜ ನಿರ್ಮಿಸಲು ಯುವಕರು ಮುಂದಾಗಿರಿ- ಪ್ರೊ.ಬಿ.ಎಸ್.ಬಿರಾದಾರ

Facebook
X
WhatsApp
Telegram

ಬೀದರ.13.ಜುಲೈ.25:- ಆಧುನಿಕ ಯುಗವು ತಾಂತ್ರಿಕ, ವೈಜ್ಞಾನಿಕ ಕೌಶಲ್ಯದ ನಾಗಾಲೋಟದ ವೇಗದಲ್ಲಿ ಸಾಗುತ್ತಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮಹತ್ವದ ಪಾತ್ರವಹಿಸುತ್ತಿದೆ. ಇದರೊಂದಿಗೆ ಆರೋಗ್ಯಕರ, ಸ್ವಸ್ಥ, ಸಾಮರಸ್ಯದ ಸುಂದರ ಸಮಾಜ ಕಟ್ಟುವ ಜವಾಬ್ದಾರಿ ಯುವ ಜನಾಂಗದ ಮೇಲಿದೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರ ಹೇಳಿದರು.

ಅವರು ಶನಿವಾರ ಬೀದರ ವಿಶ್ವವಿದ್ಯಾಲಯದ ವತಿಯಿಂದ ಮಳಚಾಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಷ್ಟಿçÃಯ ಸೇವಾ ಯೋಜನೆಯ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಹಳ್ಳಿಗಳಲ್ಲಿ ಆರೋಗ್ಯಕರ ಹವಾಗುಣವಿರುತ್ತದೆ. ಕೆಲವೊಮ್ಮೆ ಜನರು ದುಶ್ಚಟಕ್ಕೆ ಬಲಿಯಾಗುತ್ತಾರೆ. ಜನರಲ್ಲಿ ಕುಡಿತ, ಜೂಜು ಮುಂತಾದ ದುಶ್ಚಟಗಳನ್ನು ಬಿಡಿಸುವ ಅವಶ್ಯಕತೆಯಿದೆ. ಆ ನಿಟ್ಟಿನಲ್ಲಿ ಯುವಕರು ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಬೇಕಾಗಿದೆ. ಜನರಿಗೆ ಸಾಮರಸ್ಯದ ಬದುಕು ಇಂದು ಅನಿವಾರ್ಯವಾಗಿದೆ, ದ್ವೇಷವಿಲ್ಲದ ಸಹೋದರತ್ವದ ಸಮಾಜ ನಿರ್ಮಿಸುವಲ್ಲಿ ಯುವ ಜನಾಂಗ ಶ್ರಮಿಸಲಿ ಎಂದರು.

ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ನಾಗಭೂಷಣ ಕಮಠಾಣೆ ಮಾತನಾಡಿ, ಭಾರತ ಸರ್ಕಾರ ಆರಂಭಿಸಿರುವ ರಾಷ್ಟಿçÃಯ ಸೇವಾ ಯೋಜನೆಯ ಮುಖಾಂತರ ಯುವಕರು ತಮ್ಮ ಪ್ರತಿಭೆ, ಪಾಂಡಿತ್ಯ, ಸಾಮರ್ಥ್ಯ ಅಭಿವ್ಯಕ್ತಿಸಲು ಅವಕಾಶವಿದೆ. ಎಷ್ಟೋ ಸಾಧಕರು ಹಳ್ಳಿಯಿಂದಲೇ ಬಂದವರಾಗಿದ್ದಾರೆ. ಹೀಗಾಗಿ ನಾವು ಹಳ್ಳಿಯವರು, ಗ್ರಾಮೀಣ ಪರಿಸರದಿಂದ ಬಂದವರು ಎಂಬ ಕೀಳರಿಮೆಯನ್ನು ಮರೆತು ಯುವಕರು ಸದೃಢ ಸಮಾಜ ಕಟ್ಟುವಲ್ಲಿ ಮುಂದಾಗಬೇಕೆoದರು.

ಬೀದರ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾದ ಸುರೇಖಾ ಕೆ.ಎ.ಎಸ್. ಮಾತನಾಡಿ, ಯುವಶಕ್ತಿ ದೇಶದ ಶಕ್ತಿಯಾಗಿದೆ ಹೀಗಾಗಿ ಅವoರ ಮೇಲೆ ತುಂಬಾ ಜವಾಬ್ದಾರಿಯಿದೆ. ಇಂದಿನ ನಾಗಾಲೋಟದ ಯುಗದಲ್ಲಿ ಯುವ ಜನಾಂಗ ಸಂಕ್ರಮಣದ, ಒತ್ತಡದ, ಸ್ಪರ್ಧೆಯ ಯುಗದಲ್ಲಿ ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದೆ. ರಾಷ್ಟಿçÃಯ ಸೇವಾ ಯೋಜನೆ ಶ್ರಮದಾನದೊಂದಿಗೆ ಪರಸ್ಪರ ಸಮಾಜದ ವ್ಯವಹಾರಗಳನ್ನು, ಗ್ರಾಮೀಣರ ಬದುಕನ್ನು ಅರಿತುಕೊಳ್ಳಲು ಸಹಕಾರಿಯಾಗುತ್ತದೆ. ಯುವಕರು ಶ್ರಮಜೀವಿಗಳಾಗಿ ಸಮಾಜದ ಸದೃಢ ಆಸ್ತಿಯಾಗಬೇಕಾಗಿದೆ. ಆ ನಿಟ್ಟಿನಲ್ಲಿ ಯುವಕರು ಹೆಜ್ಜೆಯಿಡಬೇಕಾದ ಅನಿವಾರ್ಯತೆಯಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಅಬ್ದುಲ್ ಸತ್ತಾರಸಾಬರ, ಸಚಿನ್ ಶಿವರಾಜ, ಬೀದರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಪರಮೇಶ್ವರ ನಾಯ್ಕ.ಟಿ, ಮಳಚಾಪೂರ ಶ್ರೀ ಸಿದ್ಧಾರೂಢ ಮಠದ ಪೀಠಾಧಿಪತಿಗಳಾದ ಶ್ರೀ ಡಾ.ಸದ್ರೂಪಾನಂದ ಭಾರತಿ ಶ್ರೀಗಳು, ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಕು.ವೈಷ್ಣವಿ ಪಾಟೀಲ್, ಹಿರಿಯರಾದ ಶೋಭಾ ಪಾಟೀಲ, ಮಳಚಾಪೂರ ಗ್ರಾಮ ಪಂಚಾಯತ ಅಧ್ಯಕ್ಷರಾದ ಲಕ್ಷಿö್ಮಬಾಯಿ ಪಾಟೀಲ, ಉಪಾಧ್ಯಕ್ಷರಾದ ಜಗದೇವಿ ಅಮೃತ ರಾಜನಾಳೆ, ಗ್ರಾಮ ಪಂಚಾಯತ ಸದಸ್ಯರಾದ ಶರಣಪ್ಪ ಲಗಶೆಟ್ಟಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶಿವಕುಮಾರ ಸೀತಾ, ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಲಕ್ಷಿö್ಮ, ಸರಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಚಿತ್ರಲೇಖಾ, ಮಳಚಾಪೂರ ಗ್ರಾಮದ ಮುಖಂಡರಾದ ಅಶೋಕ ಗುಮ್ಮೆ, ಮಲ್ಲಿಕಾರ್ಜುನ ಜ್ಯಾಂತೆ, ವಿಶ್ವನಾಥ ಗುಮ್ಮೆ, ಪ್ರಭು ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD