ಬೀದರ.20.ಜುಲೈ.25:- ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ ತಾಲೂಕ ಕಾನೂನು ಸೇವೆಗಳ ಸಮಿತಿ ಔರಾದ, ತಾಲೂಕ ವಕೀಲರ ಸಂಘ ಔರಾದ, ತಾಲೂಕ ತಹಶೀಲ್ದಾರ ಕಛೇರಿ ಔರಾದ ಇವರ ಸಂಯುಕ್ತಾಶ್ರಯದಲ್ಲಿಂದು ಔರಾದ ತಹಸೀಲ್ದಾರ ಕಛೇರಿಯಲ್ಲಿ ಹಮ್ಮಿಕೊಂಡಿದ್ದ “ಅನಾಥ ಮತ್ತು ನಿರ್ಗತಿಕ ಮಕ್ಕಳಿಗೆ ಆಧಾರ ಕಾರ್ಡ ಮಾಡಿಸುವ ಸಾಥಿ ಯೋಜನೆ ಕಾರ್ಯಕ್ರಮ ಹಾಗೂ ಓಂಐSಂ (ಸಾಗಣಿಕೆ ಮತ್ತು ವಾಣಿಜ್ಯ ಲೈಂಗಿಕ ಶೋಷಣೆಯ ಬಲಿಪಶುಗಳು) ಯೋಜನೆ 2015ರ ಅನುμÁ್ಠನ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಅರ್ಜುನ ಬನಸೋಡೆ ಅವರು ಚಾಲನೆ ನೀಡಿದರು.

“ಅನಾಥ ಮತ್ತು ನಿರ್ಗತಿಕ ಮಕ್ಕಳಿಗೆ ಮಕ್ಕಳಿಗೆ ಆಧಾರ ಕಾರ್ಡ ಗಳನ್ನು ಅಲ್ಲೆ ನಿಂತು ಮಾಡಿಸಿ ಮಕ್ಕಳಿಗೆ ವಿತರಣೆ ಮಾಡಿದರು, ಹಾಗೂ ತಾಲೂಕ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ಹಾಜಿ ಹುಸೇನಸಾಬ ಯಾದವಾಡ, ಹಾಗೂ ಕಾರ್ಯದರ್ಶಿ ವಿನಾಯಕ ವಾನಖಂಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದರು.
ಔರಾದ ತಹಶೀಲ್ದಾರ ಮಹೇಶ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿದ್ದರು. ಉಪನ್ಯಾಸಕರಾಗಿ ಔರಾದ ತಾಲೂಕ ವಕೀಲರ ಸಂಘದ ಅಧ್ಯಕ್ಷ ಬಾಲಾಜಿ ಕಂಬಾರ ಅವರು ರವರು ಮಾನವ ಕಳ್ಳ ಸಾಗಣಿಕೆ ಕುರಿತು ಮಾತನಾಡಿದ್ದರು.
ಈ ಕಾರ್ಯಕ್ರಮದಲ್ಲಿ ಇಮಲಪ್ಪಾ ಶಿಶು ಅಭಿವೃಧಿ ಯೋಜನಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃಧಿ ಇಲಾಖೆ ಔರಾದ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂಧಿಯಾದ ಆಕಾಶ ಸಜ್ಜನಶೇಟ್ಟಿ ಹಾಗೂ ನರೇಶ ಹಾಗೂ ಕಾನೂನು ನೇರವು ಸಾಹಾಯಕ ಅಭಿರಕ್ಷಕರಾದ ಮಹಾದಪ್ಪಾ ಮತ್ತು ವಿಧ್ಯಾಸಾಗರ ಹಾಜರಿದ್ದರು ಹಾಗೂ ತಾಲೂಕ ಕಾನೂನು ಸಿಬ್ಬಂಧಿ ವರ್ಗದವರು ಮತ್ತು ತಹಶೀಲ್ದಾರ ಸಿಬ್ಬಂಧಿ ವರ್ಗದವರು ಸೇರಿದಂತೆ ಇತರರು ಉಪಸ್ಥಿತರಿದ್ದರು.