ಕಲಬುರಗಿಯ ಆದರ್ಶ ನಗರದಲ್ಲಿರುವ ಕೆ.ಸಿ.ಇ.ಡಿ.ಟ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟದ 27-12-2025 ರಂದು ಅತಿಥಿಗಳಾಗಿ ಶ್ರೀ ಭೋಜನಗೌಡ ಪಾಟೀಲ್ ಸರಕಾರಿ ಗ್ರೇಡ್ 1 ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರು ಕಲಬುರ್ಗಿ ಮತ್ತು ಡಾ ಮಲ್ಲಿಕಾರ್ಜುನ್ ಡೊಣ್ಣೂರ್ ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರು ಬೆಂಗಳೂರು. ಮತ್ತು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಮುಖ್ಯ ಗುರುಗಳು ಮತ್ತು ದೈಹಿಕ ಶಿಕ್ಷಕರಾದ ಸಂಗಣ್ಣ ಸರ್ ಭಾಗವಹಿಸಿ ಅಪಾರ ಸಂತಸ ಅನುಭವಿಸಿದೆ.
ಕೆ.ಸಿ.ಇ.ಡಿ.ಟ ಶಾಲೆಯ ವಾರ್ಷಿಕ ಕ್ರೀಡಾಕೂಟವು ಉತ್ಸಾಹ ಮತ್ತು ಸಂಭ್ರಮಾಚರಣೆಯ ವಾತಾವರಣದಲ್ಲಿ ನಡೆಯಿತು. ಧ್ವಜಾರೋಹಣ ಮತ್ತು ಮೇಜರ್ ಧ್ಯಾನ್ ಚಂದ್ರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವಾನ್ವಿತ ಅತಿಥಿಗಳ ಸಮ್ಮುಖದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದ ಪಥಸಂಚಲನವು ಶಿಸ್ತು ಮತ್ತು ಸಮರ್ಪಣಾಭಾವವನ್ನು ಎತ್ತಿಹಿಡಿಯಿತು.
ವಿದ್ಯಾರ್ಥಿಗಳು ಓಟದ ಸ್ಪರ್ಧೆ, ಉದ್ದ ಜಿಗಿತ ಮತ್ತು ಗುಂಡು ಎಸೆತ ಹಾಗೂ ಸಾಂಪ್ರದಾಯಿಕ ಆಟಗಳಲ್ಲಿ ಉತ್ಸಾಹ ಮತ್ತು ಸಮರ್ಪಣಾ ಮನೋಭಾವದಿಂದ ಭಾಗವಹಿಸಿದರು. ಅತಿಥಿಯಾಗಿ ಮಾತನಾಡಿದ ನಾನು, ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಕ್ರೀಡಾ ಮನೋಭಾವದ ಮಹತ್ವ ಮತ್ತು ಉತ್ತಮ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವ ಅಗತ್ಯತೆಗಳ ಕುರಿತು ಮಾರ್ಗದರ್ಶನ ನೀಡಿದೆ.






Any questions related to ಆದರ್ಶ ನಗರದಲ್ಲಿರುವ ಕೆ.ಸಿ.ಇ.ಡಿ.ಟ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟ.?