ಗುಜರಾತ್‌ನ ಅಹಮದಾಬಾದ್ ವಿಮಾನ ಅಪಘಾತದಲ್ಲಿ, ಇಲ್ಲಿಯವರೆಗೆ ಒಟ್ಟು 32 ಮೃತರ ಡಿಎನ್‌ಎ ಮಾದರಿಗಳನ್ನು ಹೊಂದಾಣಿಕೆ ಮಾಡಲಾಗಿದ್ದು, 14 ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.
ನಾಗರಿಕ ಆಸ್ಪತ್ರೆಯ ಹೆಚ್ಚುವರಿ ಸೂಪರಿಂಟೆಂಡೆಂಟ್ ಡಾ. ರಜನೀಶ್ ಪಟೇಲ್ ಮಾತನಾಡಿ, ಮೃತರಲ್ಲಿ 4 ಮಂದಿ ಅಹಮದಾಬಾದ್, 2 ಮಂದಿ ವಡೋದರಾ, 1 ಮಂದಿ ಖೇಡಾ, 1 ಮಂದಿ ಅರವಳ್ಳಿ, 1 ಮಂದಿ ಬೋಟಾಡ್, 4 ಮಂದಿ ಮೆಹ್ಸಾನಾ ಮತ್ತು 1 ಮಂದಿ ಉದಯಪುರದವರು. ಡಿಎನ್‌ಎ ಮಾದರಿಗಳನ್ನು ಹೊಂದಾಣಿಕೆ ಮಾಡಲಾದ ಮೃತರ ಶವಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ದಿವಂಗತ ವಿಜಯ್ ರೂಪಾನಿ ಅವರ ಡಿಎನ್‌ಎ ಹೊಂದಾಣಿಕೆಯಾಗಿದೆ. ರಾಜ್ಯ ಗೃಹ ಸಚಿವ ಹರ್ಷ ಸಾಂಘ್ವಿ ಇದನ್ನು ಘೋಷಿಸಿದರು. ಇಂದು ಬೆಳಿಗ್ಗೆ 11 ಗಂಟೆಗೆ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಡಿಎನ್‌ಎ ಹೊಂದಾಣಿಕೆಯಾಗಿದೆ ಎಂದು ಅವರು ಹೇಳಿದರು.