|

ಅಲ್ಪಸಂಖ್ಯಾತರ ಸಾಮೂಹಿಕ ವಿವಾಹ: ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

ಬೀದರ.06.ನವೆಂಬರ್.25: ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್ ಮತ್ತು ಪಾರ್ಸಿ ಸಮುದಾಯದ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಲು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಮೂಹ ವೆಚ್ಚಗಳಿಗಾಗಿ ಪ್ರತಿ ಜೋಡಿಗೆ 50000 ರೂ. ಹಾಗೂ ಸಾಮೂಹಿಕ ವಿವಾಹವನ್ನು ಏರ್ಪಡಿಸುವ ಆಯೋಜಕರುಗಳಿಗೆ ಪ್ರೋತ್ಸಾಹ ಹಾಗೂ ವಿವಾಹದ ಖರ್ಚು-ವೆಚ್ಚಗಳಿಗಾಗಿ ಪ್ರತಿ ಜೋಡಿಗಳಿಗೆ 5000 ರೂ. ನೀಡಲಾಗುತ್ತದೆ.

ಸಾಮೂಹಿಕ ವಿವಾಹ ಹಮ್ಮಿಕೊಳ್ಳುವ ಆಯೋಜಕರು ಕನಿಷ್ಠ 7 ದಿನ ಮುಂಚಿತವಾಗಿ ಸ್ವಂತ ಜಿಲ್ಲೆಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ, ವಿವಾಹ ನಡೆದ ಮೂರು ತಿಂಗಳ ಒಳಗಡೆ ವಧು-ವರರ ದಾಖಲಾತಿಗಳನ್ನು ಜಿಲ್ಲಾ ಕಛೇರಿಗೆ ಸಲ್ಲಿಸಬೇಕು.

ಕನಿಷ್ಠ 5 ನವ ಜೋಡಿಗಳಿಗೆ ಸಾಮೂಹಿಕ ವಿವಾಹ ಎರ್ಪಡಿಸುವುದು, ಮೊದಲನೇ ವಿವಾಹವಾಗುತ್ತಿರುವ ನವ ಜೋಡಿಯಾಗಿರಬೇಕು, ವಧುವಿನ ವಯಸ್ಸು 18 ವರ್ಷದಿಂದ 42 ವರ್ಷ ಆಗಿರಬೇಕು, ವರನ ವಯಸ್ಸು 21 ವರ್ಷದಿಂದ 45 ವರ್ಷದೊಳಗಿನ ಆಗಿರಬೇಕು, ವಾರ್ಷಿಕ ಆದಾಯ 2.50 ಲಕ್ಷ ಮತ್ತು ಮಧು-ವರರ ಒಟ್ಟು ಅದಾಯ 5 ಲಕ್ಷ ರೂ. ಮೀರತಕ್ಕದ್ದಲ್ಲ. ಜೀವನದಲ್ಲಿ ಒಮ್ಮೆ ಮತ್ತು ಕುಟುಂಬದಲ್ಲಿ ಒಬ್ಬರು ಮಾತ್ರ ಈ ಸೌಲಭ್ಯ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಛೇರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬೀದರ, ಮೌಲಾನಾ ಆಜಾದ ಭವನ, ಗುರುನಾನಕ ಝಿರಾ ದಿಂದ ಚಿಕ್‌ಪೇಟ ರಿಂಗ್ ರಸ್ತೆ, ಬೀದರಗೆ ಕಛೇರಿಗೆ ಅಥವಾ ದೂರವಾಣಿ ಸಂಖ್ಯೆ: 80482-295210, 8951391061 ಗೆ ಸಂಪರ್ಕಿಸಬಹುದಾಗಿದೆ ಎಂದು ಬೀದರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Similar Posts

Leave a Reply

Your email address will not be published. Required fields are marked *