04/08/2025 11:10 PM

Translate Language

Home » ಲೈವ್ ನ್ಯೂಸ್ » ಅಮರೇಶ್ವರಮಹಾದ್ವಾರಕ್ಕೆಸಂಸದರಿಂದ #1ಕೋಟಿರೂಪಾಯಿಘೋಷಣೆ

ಅಮರೇಶ್ವರಮಹಾದ್ವಾರಕ್ಕೆಸಂಸದರಿಂದ #1ಕೋಟಿರೂಪಾಯಿಘೋಷಣೆ

Facebook
X
WhatsApp
Telegram

ಔರಾದ.04.ಆಗಸ್ಟ್.25:- ಔರಾದ ಪಟ್ಟಣದ ಉಧ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನವು ಐತಿಹಾಸಿಕ ಹಿನ್ನೆಲೆಯಿಂದ ಕೂಡಿದೆ. ಹಿಂದೆ ಮಹಾನ್ ಸಂತರೊಬ್ಬರ ಭಕ್ತಿಗೆ ಮೆಚ್ಚಿ ಮಹಾದೇವನು ಪ್ರತ್ಯಕ್ಷನಾಗಿ ನಾನು ಸಾಕ್ಷತ್ ಅಮರೇಶ್ವರ ರೂಪದಲ್ಲಿ ಉಧ್ಭವವಾಗಿ ಹುಟ್ಟಿ ಸದಾ ಜೊತೆಗಿರುವೆನು ಎಂಬುದರ ಸತ್ಯರೂಪವೇ ಇಗಿನ ಅಮರೇಶ್ವರ ದೇವಸ್ಥಾನ. ಯುಗ ಯುಗಗಳ ಹಿಂದೆ ಎನಗುಂದಿಯ ಹಸುವು ಲಿಂಗದ ಮೇಲೆ ಅಭಿಷೇಕ ಮಾಡುವ ದೃಷ್ಟಾಂತವು ಕೂಡ ಮನೆ ಮಾತಾಗಿದೆ.


ಇಗ ಸದ್ಯದ ಪರಿಸ್ಥಿತಿಯಲ್ಲಿ ದೇವಸ್ಥಾನದ ಮಹಾದ್ವಾರವು ಅತ್ಯಂತ ದುಸ್ತುರ, ಶಿಥಿಲಾವಸ್ಥೆಗೆ ತಲುಪಿದೆ, ಯಾವುದೇ ಸಂಧರ್ಭದಲ್ಲಿ ದ್ವಂಸವಾಗುವ ಸಾಧ್ಯತೆಗಳು ದಟ್ಟವಾಗಿದೆ.

ಪರಿಸ್ಥಿತಿಯನ್ನು ಮನಗಂಡ ನಮ್ಮ ಅಖಿಲ ವೀರಶೈವ ಲಿಂಗಾಯತ ಮಹಾಸಭೆ ಪ್ರಧಾನ ಕಾರ್ಯದರ್ಶಿ, ಬೀದರ ಜಿಲ್ಲೆಯ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರದ ಅರಣ್ಯ ಸಚಿವರಾದ ಶ್ರೀ ಈಶ್ವರ ಖಂಡ್ರೆಯವರ ಪುತ್ರ, ಬೀದರ ಜಿಲ್ಲೆಯ ಸಂಸದರು, ನಮ್ಮ ಅಚ್ಚುಮೆಚ್ಚಿನ ನಾಯಕರು, ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ಹಳ್ಳಿ ಹಳ್ಳಿಗೆ ಸಂಚರಿಸುವ ಜಿಲ್ಲೆಯ ಏಕೈಕ ನಾಯಕರಾದ ಶ್ರೀಯುತ ಸಾಗರ ಖಂಡ್ರೆಯವರು ಕಾಮಗಾರಿಗೆ ಬರೊಬ್ಬರಿ ಒಂದು ಕೋಟಿ ರೂಪಾಯಿ ಅನುದಾನವನ್ನು ಘೋಷಣೆ ಮಾಡಿರುವುದು ಔರಾದ ತಾಲುಕಿನ ಬಗ್ಗೆ ಅವರ ಪ್ರೀತಿ ಮತ್ತು ಕಾಳಜಿಯನ್ನು ತೋರಿಸುತ್ತದೆ.


ಔರಾದ ತಾಲುಕಿನ ಜನರ ಒಕ್ಕೊರಲಿನ ಮನವಿಗೆ ಸ್ಪಂದಿಸಿದ ಮಾನ್ಯ ಶ್ರೀ ಸಾಗರ ಖಂಡ್ರೆಯವರಿಗೆ ತುಂಬು ಹೃದಯದ ಧನ್ಯವಾದಗಳು ಮತ್ತು ಅಭಿನಂದನೆಗಳು.
ಹಿಂದೆ ಯಡಿಯೂರಪ್ಪ, ಜಗದೀಶ ಶೆಟ್ಟರ್, ಸಿದ್ದರಾಮಯ್ಯನವರು ಈ ದೇವಸ್ಥಾನಕ್ಕೆ ಭೇಟಿ ನೀಡಿದ ಮೇಲೆ ಮುಖ್ಯಮಂತ್ರಿಗಳಾಗಿ ಜನಸೇವೆಯನ್ನು ಸಲ್ಲಿಸಿದರು. ಮಾನ್ಯ ಶ್ರೀ ಸಾಗರ ಖಂಡ್ರೆಯವರಿಗೆ ಕೂಡ ಭವಿಷ್ಯದಲ್ಲಿ ಮುಂಬರುವ ದಿನಗಳಲ್ಲಿ ಅತ್ಯಂತ ಉತ್ಕೃಷ್ಟವಾಗಿರಲೆಂದು ಇಂದು ಔರಾದ ತಾಲುಕಿನ ಹರಸುತ್ತಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD