05/08/2025 5:42 AM

Translate Language

Home » ಲೈವ್ ನ್ಯೂಸ್ » ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಶಿಕ್ಷೆ

ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಶಿಕ್ಷೆ

Facebook
X
WhatsApp
Telegram

ಕೊಪ್ಪಳ.08.ಜುಲೈ.25:- ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ತುಮಕೂರ ಜಿಲ್ಲೆ ಬೀರನಕಲ್ ಗ್ರಾಮ ನಿವಾಸಿ ರಮೇಶ ತಂದೆ ಮುದ್ದುರಾಮಯ್ಯ ಇತನ ಮೇಲಿನ ಆರೋಪ ಸಾಭಿತಾಗಿದೆ ಎಂದು ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ (ಪೋಕ್ಸೊ) ನ್ಯಾಯಾಧೀಶರು ಆರೋಪಿಗೆ ಶಿಕ್ಷೆ ವಿಧಿಸಿರುತ್ತಾರೆ.


ತುಮಕೂರ ಜಿಲ್ಲೆ ಬೀರನಕಲ್ ಗ್ರಾಮ ನಿವಾಸಿ ರಮೇಶ ತಂದೆ ಮುದ್ದುರಾಮಯ್ಯ ಇತನು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಇನ್ಟ್ಸಾಗ್ರಾಂ ಮೂಲಕ ಪರಿಚಯಿಸಿಕೊಂಡು ಪೋನಿನಲ್ಲಿ ಮಾತನಾಡುತ್ತ ಸಲುಗೆ ಬೆಳೆಸಿರುತ್ತಾನೆ. ಬಾಲಕಿಯ ತಾಯಿ ಕೊಪ್ಪಳದಲ್ಲಿ ವಾಸವಾಗಿರುತ್ತಾರೆ. ದಿ: 15-10-2023 ರಂದು ಬೆಳಿಗ್ಗೆ 6 ಗಂಟೆಗೆ ಬಾಲಕಿಯ ತಾಯಿ ಮನೆ ಕೆಲಸಕ್ಕೆ ಹೋದಾಗ ಬಾಲಕಿ ಮಾತ್ರ ಮನೆಯಲ್ಲಿದ್ದು ಆರೋಪಿ ರಮೇಶ ಇತನು ಮನೆಯಲ್ಲಿ ಅತೀಕ್ರಮ ಪ್ರವೇಶ ಮಾಡಿ ಅಪ್ರಾಪ್ತ ಬಾಲಕಿಯೊಂದಿಗೆ ಸಲುಗೆಯಿಂದ ಮಾತನಾಡುತ್ತ ಮೈ ಕೈ ಮುಟ್ಟಿ ಕೈ ಹಿಡಿದು ಎಳೆದಾಡಿದಾಗ ಬಾಲಕಿ ನಿರಾಕರಿಸಿದ್ದು ನಾವಿಬ್ಬರೂ ಮುಂದೆ ಮದುವೆಯಾಗುತ್ತೇವೆ ಎಂದು ಹೇಳಿ ನಂಬಿಸಿ ಮನೆಯಲ್ಲಿ ಲೈಂಗಿಕ ಅತ್ಯಾಚಾರ ಮಾಡಿರುತ್ತಾನೆ. 

ನಂತರದಲ್ಲಿ ದಿ: 13-03-2024 ರಂದು ರಾತ್ರಿ 8 ಗಂಟೆ ಸುಮಾರಿಗೆ ಆರೋಪಿತನು ಬಾಲಕಿಗೆ ಪೋನ್ ಮಾಡಿ ಕೊಪ್ಪಳಕ್ಕೆ ಬಂದಿದ್ದೇನೆ ನಿನ್ನನ್ನು ನೋಡಬೇಕು ನೀನು ಮಯೂರ ಲಾಡ್ಜಗೆ ಬಾ ಎಂದು ಪದೇ ಪದೇ ಪೋನ್ ಮಾಡಿ ಪೀಡಿಸುರುತ್ತಾನೆ. 

ಈ ಆರೋಪದ ಹಿನ್ನೆಲೆಯಲ್ಲಿ ಕೊಪ್ಪಳ ಮಹಿಳಾ ಪೋಲಿಸ್ ಠಾಣೆಯ ಪಿ.ಎಸ್.ಐ ನಾಗಲಿಂಗಯ್ಯ ಅವರು ದೂರು ಸ್ವೀಕರಿಸಿ ಪ್ರಥಮ ಹಂತದ ತನಿಖೆಯನ್ನು ನಿರ್ವಹಿಸಿ, ಮುಂದಿನ ತನಿಖೆಯನ್ನು ಕೊಪ್ಪಳ ಮಹಿಳಾ ಪೋಲಿಸ್ ಠಾಣೆಯ ಪಿಐ ಆಂಜಿನೇಯ ಡಿ.ಎಸ್. ಅವರು ನಿರ್ವಹಿಸಿದ್ದು, ತನಿಖೆಯಲ್ಲಿ ಆರೋಪಿತನ ಮೇಲಿನ ಆರೋಪಣೆಗಳು ಮೇಲ್ನೋಟಕ್ಕೆ ಸಾಭಿತಾಗಿದ್ದರಿಂದ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.


ಈ ಪ್ರಕರಣವು ಸ್ಪೇ.ಎಸ್‌ಸಿ(ಪೋಕ್ಸೊ) ಸಂ: 22/2024ರಲ್ಲಿ ದಾಖಲಾಗಿದ್ದು, ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ಆರೋಪಿತನ ಮೇಲಿನ ಆರೋಪಣೆಗಳು ಸಾಭೀತಾಗಿವೆ ಎಂದು 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 25,000 ಗಳ ದಂಡವನ್ನು ಭರಿಸುವಂತೆ ಆದೇಶಿಸಿ, ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ (ಪೋಕ್ಸೊ) ನ್ಯಾಯಾಧೀಶರಾದ ಕುಮಾರ ಡಿ.ಕೆ  ರವರು ದಿ: 5-07-2025ರಂದು ತೀರ್ಪು ಹೊರಡಿಸಿರುತ್ತಾರೆ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ಈ ಪ್ರಕರಣ ನಡೆಸಿ ವಾದ ಮಂಡಿಸಿದ್ದರು. ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಕಾಶ ತಿಮ್ಮಾಪೂರ ಅವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರಪಡಿಸುವಲ್ಲಿ ಸಾಕಷ್ಟು ಸಹಕರಿಸಿರುತ್ತಾರೆ ಎಂದು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD