ಬೀದರ.25.ಜುಲೈ.25 :- ಬೀದರ ರೈಲ್ವೆ ನಿಲ್ದಾಣದ ವೇದಿಕೆ ಸಂಖ್ಯೆ: 2 ರಲ್ಲಿ ದಿನಾಂಕ: 13-07-2025 ರಂದು ಒಂದೂವರೆ ವರ್ಷದ ಹೆಣ್ಣು ಮಗು ಒಂಟಿಯಾಗಿ ಪತ್ತೆಯಾಗಿದ್ದು, ಈವರೆಗೆ ಮಗುವಿನ ವಾರಸುದಾರರು ಯಾರೆಂದು ಪತ್ತೆಯಾಗಿರುವುದಿಲ್ಲ.
ಬೀದರ ರೈಲ್ವೆ ನಿಲ್ದಾಣ ಮಕ್ಕಳ ಸಹಾಯವಾಣಿ ಕೇಂದ್ರದವರ ದೂರಿನನ್ವಯ ಬೀದರ ರೈಲ್ವೆ ಪೊಲೀಸ್ ಠಾಣೆಯ ಗುನ್ನೆ ಗುನ್ನೆ ಸಂಖ್ಯೆ: 20/2025 ಕಲಂ 93 ಬಿ.ಎನ್.ಎಸ್.ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ. ಅಪರಿಚಿತ ಹೆಣ್ಣು ಮಗು 2 ಅಡಿ 3 ಇಂಚ ಎತ್ತರ ಇದ್ದು, ಮೈಯಿಂದ ದಪ್ಪ ಚಿಕ್ಕ ಹಣೆ, ತಲೆಯಲ್ಲಿ ಕಪ್ಪು ಕೂದಲು, ದಪ್ಪ ಮೂಗು, ಗುಂಡು ಮುಖ, ಸಣ್ಣ ಕಿವಿಗಳು, ಗೋದಿ ಮೈಬಣ್ಣ ಇದ್ದು, ಮೈಮೇಲೆ ಒಂದು ಆಕಾಶ ನೀಲಿ ಬಣ್ಣದ ಡ್ರೇಸ್, ಒದು ಬಿಳಿ ಮತ್ತು ಹಳದಿ ಬಣ್ಣದ ಹಸಿರು ಬಣ್ಣದ ಚೌಕಡಿ ಗೆರೆಯುಳ್ಳ ಟಿ ಶರ್ಟ, ಒಂದು ಬಿಳಿ ಮತ್ತು ಹಳದಿ ಬಣ್ಣದ ಹಸಿರು ಬಣ್ಣದ ಚೌಕಡಿ ಗೆರೆಯುಳ್ಳ ಹಾಫ್ ಚಡ್ಡಿ ಧರಿಸಿರುತ್ತದೆ.
ಈ ಅಪರಿಚಿತ ಹೆಣ್ಣು ಮಗುವಿನ ವಾರಸುದಾರರು ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಪೊಲೀಸ್ ಉಪ ನಿರೀಕ್ಷಕರು, ರೈಲ್ವೆ ಪೊಲೀಸ್ ಠಾಣೆ ಬೀದರಗೆ ಅಥವಾ ದೂರವಾಣಿ ಸಂಖ್ಯೆ: 08482-226389, ಮೊಬೈಲ್ ಸಂಖ್ಯೆ: 9480802133, 7483095508ಗೆ ಸಂಪರ್ಕಿಸುವಂತೆ ಬೀದರ ರೈಲ್ವೆ ಪೊಲೀಸ್ ಠಾಣೆಯ ಸಬ್ ಇನ್ಸಪೇಕ್ಟರ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.