ಕೊಪ್ಪಳ.04.ಜುಲೈ.25: ಕೊಪ್ಪಳದ ಹೊಸಪೇಟೆ ಮತ್ತು ಕೊಪ್ಪಳ ಎನ್.ಹೆಚ್.63 ರಸ್ತೆಯಲ್ಲಿ ಗಾಳೇಮ್ಮನ ಗುಡಿ ಹತ್ತಿರ 2025 ರ ಏಪ್ರಿಲ್ 18 ರಂದು ಸುಮಾರು 35 ವರ್ಷದ ಅಪರಿಚಿತ ವ್ಯಕ್ತಿಯು ಉಸಿರಾಟದ ತೊಂದರೆಯಿoದ ನರಳುತ್ತಿದ್ದಾಗ ಅವರನ್ನು ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ವ್ಯಕ್ತಿಯು ಏಪ್ರಿಲ್ 20 ರಂದು ಚಿಕಿತ್ಸೆ ಫಲಕಾರಿಯಾಗದೆ (ಸ್ವಾಭಾವಿಕವಾಗಿ) ಮೃತ ಪಟ್ಟ ಬಗ್ಗೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ: 20/2025 ಕಲಂ: 194 ಬಿ.ಎನ್.ಎಸ್.ಎಸ್.-2023 ಅಡಿ ಪ್ರಕರಣ ದಾಖಲಾಗಿದೆ.
ಮೃತದೇಹವನ್ನು ಕೊಪ್ಪಳ ಜಿಲ್ಲಾಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಲಾಗಿದೆ. ಮೃತ ವ್ಯಕ್ತಿಗೆ ಹೋಲಿಕೆಯಾಗುವಂತಹ 35 ವರ್ಷ ವಯಸ್ಸಿನ ವ್ಯಕ್ತಿ ಕಾಣೆಯಾಗಿದ್ದಲ್ಲಿ ಸಂಬAಧಿಕರು ಹಾಗೂ ವಾರಸುದಾರರು ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಮುನಿರಾಬಾದ್ ಪೊಲೀಸ್ ಠಾಣೆ ಪಿ.ಎಸ್.ಐ: 08539-270333, ಸಿ.ಪಿ.ಐ ಕೊಪ್ಪಳ ಗ್ರಾಮೀಣ ವೃತ್ತ: 08539-221333, ಡಿ.ಎಸ್.ಪಿ ಕೊಪ್ಪಳ ಉಪ ವಿಭಾಗ: 08539-222433, ಎಸ್.ಪಿ. ಕೊಪ್ಪಳ: 08539-230111 ಸಂಪರ್ಕಿಸಿ ಮಾಹಿತಿ ನೀಡುವಂತೆ ಮುನಿರಾಬಾದ್ ಪೊಲೀಸ್ ಠಾಣೆ ಸಬ್ ಇನ್ಸಪೆಕ್ಟರ್(ಕಾ.ಸು) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.