Home » ಲೈವ್ ನ್ಯೂಸ್ » ಅಪರಿಚಿತ ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ

ಅಪರಿಚಿತ ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ

Facebook
X
WhatsApp
Telegram

ಬೀದರ.07.ಜನವರಿ.26:- ಪಠಾಣಗಲ್ಲಿ ಔರಾದ (ಬಿ)ಯ ರಮಾಬಾಯಿ ಅಂಬೇಡ್ಕರ ವೃದ್ದಾಶ್ರಮದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಅಂದಾಜು 80 ವರ್ಷ ವಯಸ್ಸಿನ ಒಬ್ಬ ಅಪರಿಚಿತ ವ್ಯಕ್ತಿಯನ್ನು (ಕಿಟ್ಟು ತಂದೆ ರಾಮಯ್ಯಾ) ಚಿಕಿತ್ಸೆಗಾಗಿ ಬೀದರ ಬ್ರೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆತನು ದಿನಾಂಕ:    02-01-2026 ರಂದು ಮೃತಪಟ್ಟಿರುತ್ತಾನೆ.

ಔರಾದ (ಬಿ) ಪಠಾಣಗಲ್ಲಿ ರಮಾಬಾಯಿ ಅಂಬೇಡ್ಕರ ವೃದ್ದಾಶ್ರಮದ ಅಧೀಕ್ಷಕ ನರಸಿಂಗ ನಾಗಪ್ಪಾ ವಾಗ್ಮಾರೆ ಅವರ ಲಿಖಿತ ದೂರಿನನ್ವಯ ಔರಾದ (ಬಿ) ಪೊಲೀಸ್ ಠಾಣೆ ಯುಡಿಆರ್ ನಂ. 01/2026 ಕಲಂ 194 ಬಿ.ಎನ್.ಎಸ್.ಎಸ್.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.
ಮೃತ ವ್ಯಕ್ತಿಯು ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ತಲೆಯಲ್ಲಿ ಬಿಳಿ ಕೂದಲು, ಬಿಳಿ ಮೀಸೆ ಮತ್ತು ಗಡ್ಡ ಹೊಂದಿದ್ದು, ಮೈಮೇಲೆ ಒಂದು ಬಿಳಿ ಬಣ್ಣದ ಸ್ವೇಟರ, ಬಿಳಿ ಬಣ್ಣದ ಅಂಗಿ ಹಾಗೂ ಬಿಳಿ ಬಣ್ಣದ ಚಡ್ಡಿ ಇದ್ದಿರುತ್ತದೆ.

ಈ ಚಹರೆವುಳ್ಳ ವ್ಯಕ್ತಿಯ ಸಂಬಂಧಿಕರ ಬಗ್ಗೆ ಅಥವಾ ಈತನ ವಿಳಾಸದ ಬಗ್ಗೆ ಮಾಹಿತಿ ಇದ್ದಲ್ಲಿ ಡಿವೈಎಸ್ಪಿ ಭಾಲ್ಕಿ ಉಪ ವಿಭಾಗ ಮೊಬೈಲ್ ಸಂಖ್ಯೆ: 9480803421, ಸಿಪಿಐ ಔರಾದ (ಬಿ) ವೃತ್ತ ಮೊಬೈಲ್ ಸಂಖ್ಯೆ: 9480803430, ಪಿಎಸ್‍ಐ ಔರಾದ (ಬಿ) ಪೊಲೀಸ್ ಠಾಣೆ ಮೊಬೈಲ್ ಸಂಖ್ಯೆ: 9480803467, ಔರಾದ (ಬಿ) ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08485-280048 ಗೆ ಸಂಪರ್ಕಿಸುವಂತೆ ಔರಾದ (ಬಿ) ಪೊಲೀಸ್ ಠಾಣೆಯ ಠಾಣಾ ಅಮಲ್ದಾರರು ಪ್ರಕಟಣೆಯಲ್ಲಿ ಕೋರಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology