ಬೀದರ.21.ಅಗಸ್ಟ್.25:- ಬೀದರನ ಖಾನಾಪೂರ-ಹಲಬರ್ಗಾ ರೈಲು ನಿಲ್ದಾಣಗಳ ಮಧ್ಯ ರೈಲ್ವೆ ರೈಲು ಹಳಿಗಳ ಪಕ್ಕದಲ್ಲಿ ದಿನಾಂಕ: 21-07-2025 ರಂದು ಒಬ್ಬ ಅಪರಿಚಿತ ಗಂಡು ಮನುಷ್ಯನ (40) ಮೃತಪಟ್ಟಿರುವುದು ಕಂಡುಬಂದಿದ್ದು, ಈವರೆಗೆ ಮೃತನ ವಾರಸುದಾರರು ಯಾರೆಂದು ಪತ್ತೆಯಾಗಿರುವುದಿಲ್ಲ.
ಬೀದರ ರೈಲ್ವೆ ನಿಲ್ದಾಣದ ಡಿ.ವೈ.ಎಸ್.ಎಸ್. ಕುಂದನಕುಮಾರ ಅವರ ಲಿಖಿತ ದೂರಿನನ್ವಯ ಬೀದರ ರೈಲ್ವೆ ಪೊಲೀಸ್ ಠಾಣೆ ಯು.ಡಿ.ಆರ್.ನಂ. 17/2025 ಕಲಂ 194 ಬಿ.ಎನ್.ಎಸ್.ಎಸ್.ಕಾಯ್ದೆರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.
ಮೃತ ವ್ಯಕ್ತಿ 5 ಅಡಿ 4 ಇಂಚ್ ಎತ್ತರ ಇದ್ದು, ತೆಳ್ಳನೇ ಮೈಕಟ್ಟು, ಕೋಲು ಮುಖ, ಅಗಲವಾದ ಹಣೆ, ಸಣ್ಣ ಕಣ್ಣುಗಳು, ಮುಖದ ಮೇಲೆ ಚಿಕ್ಕ ಮೀಸೆ ಮತ್ತು ಗಡ್ಡ, ಗೋದಿ ಮೈಬಣ್ಣ, ತಲೆಯಲಿ ಬಿಳಿ ಮಿಶ್ರೀತ ಕಪ್ಪು ಕೂದಲು ಇದ್ದು, ಮೈಮೇಲೆ ಒಂದು ನೀಲಿ ಬಣ್ಣದ ಫುಲ್ ಶರ್ಟ, ಒಂದು ಕ್ರೀಮ್ ಕಲರ್ ಪ್ಯಾಂಟ್ ಧರಿಸಿರುತ್ತಾರೆ.
ಈ ಅಪರಿಚಿತ ಮೃತನ ವಾರಸುದಾರರ ಪತ್ತೆ ಬಗ್ಗೆ ಸುಳಿವು ಸಿಕ್ಕರೆ ಪೊಲೀಸ್ ಉಪ ನಿರೀಕ್ಷಕರು ರೈಲ್ವೆ ಪೊಲೀಸ್ ಠಾಣೆ ಬೀದರಗೆ ಅಥವಾ ದೂರವಾಣಿ ಸಂಖ್ಯೆ: 08482-226389, ಮೊಬೈಲ್ ನಂ. 9480802133, 7483095508, 7019384645 ಗಳಿಗೆ ಸಂಪರ್ಕಿಸುವಂತೆ ಬೀದರ ರೈಲ್ವೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ಕೋರಿದ್ದಾರೆ.