Home » ಲೈವ್ ನ್ಯೂಸ್ » ಅಪರಿಚಿತ ಮಹಿಳೆ ಮೃತ: ವಾರಸುದಾರರ ಪತ್ತೆಗೆ ಮನವಿ.

ಅಪರಿಚಿತ ಮಹಿಳೆ ಮೃತ: ವಾರಸುದಾರರ ಪತ್ತೆಗೆ ಮನವಿ.

Facebook
X
WhatsApp
Telegram


ಬೀದರ.26.ಡಿಸೆಂಬರ್.25:-  ಬೀದರ ತಾಲ್ಲೂಕಿನ ಭಂಗೂರ ಗ್ರಾಮದ ಎನ್.ಹೆಚ್.65 ರೋಡಿನ ಓವರ ಬ್ರೀಜ್ ಕೆಳಗೆ ದಿನಾಂಕ: 28-05-2024 ರಂದು 20.30 ಗಂಟೆಯಿಂದ 21.00 ಗಂಟೆಯ ವೇಳೆಯಲ್ಲಿ ಅಂದಾಜು 50-55 ವರ್ಷ ವಯಸ್ಸಿನ ಒಬ್ಬ ಹುಚ್ಚು ಅಪರಿಚಿತ ಮಹಿಳೆ ಅನಾರೋಗ್ಯದಿಂದ ಮೃತಪಟ್ಟಿದ್ದು, ಇಲ್ಲಿಯವರೆಗೆ ಇವಳ ವಾರಸುದಾರರು ಯಾರು ಎಂದು ಪತ್ತೆಯಾಗಿರುವುದಿಲ್ಲ.


ಅಮೀರಪಾಶಾ ತಂದೆ ಮೈನೊದ್ದಿನ್ ಚಟಳ್ಳಿ ಸಾ: ಭಂಗೂರ ಇವರು ನೀಡಿದ ದೂರಿನನ್ವಯ ಮನ್ನಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್.ನಂ. 06/2024 ಕಲಂ 174 ಸಿಆರ್‍ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.


ಮೃತ ಮಹಿಳೆ 4.5 ಫೀಟ್ ಎತ್ತರ ಇದ್ದು, ತೆಳ್ಳನೆ ಮೈಕಟ್ಟು ಗೋದಿ ಬಣ್ಣ ಇದ್ದು, ತಲೆಯ ಮೇಲೆ ಬಿಳಿ ಕೂದಲು, ಮೈಮೇಲೆ ಒಂದು ಗುಲಾಬಿ ಣ್ಣದ ಟಾಪ್ ಇದರಲ್ಲಿ ಗೋಲ್ಡನ ಬಣ್ಣದ ಹೂ ಇದ್ದು, ಒಂದು ನೀಲಿ ಬಣ್ಣದ ಪೈಜಾಮ ಇರುತ್ತದೆ.


ಈ ಮೃತ ಮಹಿಳೆಯ ಸಂಬಂಧಿಕರ ಬಗ್ಗೆ ಯಾವುದಾದರು ಮಾಹಿತಿ ಸಿಕ್ಕಲ್ಲಿ ಮನ್ನಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರ ಮೊಬೈಲ್ ಸಂಖ್ಯೆ: 8277975088, ಬೀದರ ಗ್ರಾಮೀಣ ವೃತ್ತದ ಪೊಲೀಸ್ ನಿರೀಕ್ಷಕರ ಮೊಬೈಲ್ ಸಂಖ್ಯೆ: 9480803439 ಅಥವಾ ಬೀದರ ಜಿಲ್ಲಾ ಕಂಟ್ರೋಲ್ ರೂಮ್ ಮೊಬೈಲ್ ಸಂಖ್ಯೆ: 9480803400 ಗೆ ಸಂಪರ್ಕಿಸುವಂತೆ ಮನ್ನಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology