ಬೆಂಗಳೂರು.06.ಆಗಸ್ಟ್.25:- ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕ 2ದಶಕದಿಂದ ನಿರಂತರವಾಗಿ ಕಾರ್ಯ ನಿರ್ವ ನಿರ್ವಹಿದಾರೆ ಆದರೆ ಸರ್ಕಾರ ಸೇವಾ ಭದ್ರತೆ ಕೊಡುವ ಬದಲಾಗಿ ಅರ್ಹ ಆನ್ ಅರ್ಹ ಹೊಸ ಸಮಸ್ಯೆ ನಿರ್ಮಾಣ ಮಾಡಿದಾರೆ.
ಇಂದು ಬೆಂಗಳೂರಿನ ಉನ್ನತ ಶಿಕ್ಷಣ ಪರಿಷತ್ ನಲ್ಲಿ ಕಾನೂನು ಸಚಿವರಾದ ಮಾನ್ಯ ಶ್ರೀ ಹೆಚ್ ಕೆ ಪಾಟೀಲ ಮತ್ತು ಉನ್ನತ ಶಿಕ್ಷಣ ಸಚಿವರಾದ ಮಾನ್ಯ ಡಾ. ಎಂ ಸಿ ಸುಧಾಕರ್, ಆಯುಕ್ತರಾದ ಮಂಜುಶ್ರೀ ಸರ್ಕಾರದ ಅಡ್ವೊಕೇಟ್ ಜನರಲ್ ಮತ್ತು ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯವಾದಿಗಳಾದ ಕುಲಕರ್ಣಿ ಸರ್ ನೇತೃತ್ವದಲ್ಲಿ ಸುಮಾರು ಒಂದುವರೆ ಘಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಯಿತು.
ಈ ಸಭೆಯು ಅತ್ಯಂತ ಉಪಯುಕ್ತ, ಫಲಪ್ರದದಾಯಕ ಮತ್ತು ಆರೋಗ್ಯಕರ ಚರ್ಚೆ ಆಗಿತ್ತು ಎಂಬುದುಸಂತೋಷದ ವಿಷಯ. ಈ ಅವಧಿಯಲ್ಲಿ ಅತಿಥಿ ಉಪನ್ಯಾಸಕರಲ್ಲಿ ಯಾವುದೇ ಅರ್ಹ ಅನರ್ಹ ಎಂಬ ಬೇದ ಭಾವ ಮಾಡದೆ ಹಿಂದಿನ ಹಿರಿಯ ಕಿರಿಯ ಅತಿಥಿ ಉಪನ್ಯಾಸಕರಿಗೆ ಸೇವಭದ್ರತೆ ಒದಗಿಸುವ ನಿಟ್ಟಿನಲ್ಲಿ ವಿಶೇಷ ನಿಯಮಾವಳಿ ರೂಪಿಸುವ ಭರವಸೆ ನೀಡಿದ್ದಾರೆ.
“ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್”ನಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಪ್ರವಾಸೋದ್ಯಮ ಸಚಿವರಾದ ಮಾನ್ಯ ಶ್ರೀ ಡಾ.ಎಚ್.ಕೆ.ಪಾಟೀಲ ಸರ್ ಮತ್ತು ಉನ್ನತ ಶಿಕ್ಷಣ ಸಚಿವರಾದ.ಮಾನ್ಯ ಶ್ರೀ ಡಾ.ಎಂ.ಸಿ.ಸುಧಾಕರ್ ಸರ್ ಅವರು ಹಾಗೂ ಅಡ್ವೊಕೇಟ್ ಜನರಲ್ ಶ್ರೀ.ಜಾಕ್ ವೆಲ್ ಸರ್ ಅವರು ಮತ್ತು ಅತಿಥಿ ಉಪನ್ಯಾಸಕರ ಪರವಾಗಿ ಸುಪ್ರೀಂಕೋರ್ಟ್ ನ್ಯಾಯಮುರ್ತಿ ಶ್ರೀ.ಎಸ್.ಪಿ.ಕುಲಕರ್ಣಿ ಸರ್.ರವರು. ಆಯುಕ್ತರಾದ ಕು.ಮಂಜುಶ್ರೀ ಮೇಡಂ ರವರ ಸಮ್ಮುಖದಲ್ಲಿ.ನಡೆದ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಪರಿಹರಿಸಲು (ಕಾನೂನು ತೊಡಕು ತಿದ್ದುಪಡಿ) ಸೇರಿದಂತೆ ಹಲವಾರು ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಇಂದು ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ಸಲಾಯಿತು.ನಂತರ ಮಾತನಾಡಿದ ಮಾನ್ಯ ಶ್ರೀ ಡಾ.ಎಚ್.ಕೆ.ಪಾಟೀಲ ಸರ್ ಅವರು ಅತಿಥಿ ಉಪನ್ಯಾಸಕರ ಪರವಾಗಿ ವಿಶೇಷ ನಿಯಮಾವಳಿ ರೂಪಿಸಿ ಯುಜಿಸಿ & ನಾನ್ ಯುಜಿಸಿ ಎನ್ನದೆ ಮಾನವೀಯತೆ ದೃಷ್ಟಿಯಿಂದ ಎಲ್ಲರಿಗೂ ಒಳಿತಾಗುವಂತೆ ಸರ್ಕಾರಿ ಅಭಿಯೋಜಕರಿಗೆ (ಅಡ್ವೊಕೇಟ್ ಜನರಲ್) ಅವರಿಗೆ ಸೂಚಿಸಿದರು.2009 ಎಂ.ಫಿಲ್ ಪದವಿ ಯನ್ನು ಯುಜಿಸಿ ಸಮಾನವಾಗಿ ಪರಿಗಣಿಸಬೇಕು ಎಂದು ಸಭೆಯಲ್ಲಿ ಸೂಚಿಸಿದರು..ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದು ಸಭೆಯನ್ನು ಯಶಸ್ವಿಗೊಳಿಸಿದರು.