ತುಮಕೂರು.01.ಡಿಸೆಂಬರ್.25:: ಅತಿಥಿ ಉಪನ್ಯಾಸಕರು ವರ್ಷದ 12 ತಿಂಗಳೂ ಕೂಡ ಪದವಿ ಕಾಲೇಜುಗಳಲ್ಲಿ ಖಾಯಂ ಅಧ್ಯಾಪಕರಂತೆಯೇ ಪಾಠಗಳ ಬೋಧನೆ, ಪರೀಕ್ಷೆ, ಮೌಲ್ಯಮಾಪನ, ಬಿಒಇ ಹೀಗೆ ಕಾಲೇಜಿನ ಹಲವು ವಿಭಾಗಗಳಲ್ಲಿ ವರ್ಷಪೂರ್ತಿ ಕೆಲಸ ಮಾಡುತ್ತಿದ್ದಾರೆ. ಆದರೆ, ಖಾಯಂ ಅಧ್ಯಾಪಕರಿಗೆ ಸುಮಾರು 2 ರಿಂದ 3 ಲಕ್ಷ ರೂ. ವೇತನ ನೀಡುತ್ತಿದ್ದು, ಅತಿಥಿ ಉಪನ್ಯಾಸಕರಿಗೆ ಕಳೆದ ವರ್ಷದಿಂದ ಸರಾಸರಿ 32 ರಿಂದ 40 ಸಾವಿರ ರೂ. ವೇತನವನ್ನು ಸರ್ಕಾರ ನೀಡುತ್ತಿದೆ. ಇದುವೇ ಆಧುನಿಕ ಜೀತ ಪದ್ಧತಿಯಂತಾಗಿದೆ ಎಂದು ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಸದಸ್ಯರು ಅಳಲು ತೋಡಿಕೊಂಡಿದ್ದಾರೆ.
ಅತಿಥಿ ಉಪನ್ಯಾಸಕರ ಸೇವಾ ನಿಯಮಾವಳಿ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಆಗಲಿ ಎರಡು ದಶಕಗಳಿಂದ ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಲೇಜು ಶಿಕ್ಷಣ ಇಲಾಖೆ ಬಳಸಿಕೊಳ್ಳುತ್ತಿದೆ.
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು
6,295 ಅಧ್ಯಾಪಕರು ಖಾಯಂ
10,972 – 2024-25 ಸಾಲಿನ ಅತಿಥಿ ಉಪನ್ಯಾಸಕರು
4,068 ಯುಜಿಸಿ ವಿದ್ಯಾರ್ಹತೆ ಹೊಂದಿರುವವರು
6,904 ಪಡೆಯ ವಿದ್ಯಾರ್ಹತೆ ದವರು
ಎರಡು ದಶಕಗಳಿಂದ ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಲೇಜು ಶಿಕ್ಷಣ ಇಲಾಖೆ ಬಳಸಿಕೊಳ್ಳುತ್ತಿದೆ. ಸ್ನಾತಕೋತ್ತರ
ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಅತಿಥಿ ಉಪನ್ಯಾಸಕರ ಸಂಘದ ಸದಸ್ಯರು ಅತಿಥಿ ಉಪನ್ಯಾಸಕರ ಪರದಾಟ
ಬೆಂಗಳೂರು: ರಾಜ್ಯದ ಕಾಲೇಜು ಶಿಕ್ಷಣ ಇಲಾಖೆ ಅಡಿಯಲ್ಲಿರುವ 440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 10 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಕನಿಷ್ಠ ಈ ಶೈಕ್ಷಣಿಕ ವರ್ಷದಲ್ಲಿ ಸೇವಾ ನಿಯಮಾವಳಿ ರೂಪಿಸುವ ವಿಚಾರವಾಗಿ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಯುವುದೇ ಎಂದು ಅತಿಥಿ ಉಪನ್ಯಾಸಕರು ಚಾತಕ ಪಕ್ಷಿಗಳಂತೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಲು ತೊಡಕು ಎನ್ನುತ್ತಿರುವ ಶಿಕ್ಷಣ ಇಲಾಖೆ, ಹಲವು ಯೋಜನೆಗಳಿಗೆ ಹಣ ವೆಚ್ಚ ಮಾಡುತ್ತಿದೆ. ಆದರೆ ನಮಗೆ ನೀಡುವ ಹಣಕ್ಕೆ ಮೀನಾ ಮೇಷಾ ಎಣಿಸುತ್ತಿದೆ.
ಮಲ್ಲಿಕಾರ್ಜುನಯ್ಯ ಎಂ.ಟಿ., ಅತಿಥಿ ಉಪನ್ಯಾಸಕರ ಸಂಘದ ಉಪಾಧ್ಯಕ್ಷ (ತುಮಕೂರು)
ಪದವಿಯಲ್ಲಿ ಶೇ.55 ರಷ್ಟು ಅಂಕ ಪಡೆದವರನ್ನು ಸ್ಥಳೀಯ ಬೋಧನಾ ಅಗತ್ಯಕ್ಕನುಗುಣವಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈಗ ಯುಜಿಸಿ ನಿಯಮಕ್ಕನುಗುಣವಾಗಿ ಇತರ ಅರ್ಹತೆ ಪರಿಗಣಿಸಲಾಗುತ್ತಿದೆ.
2012 ಕ್ಕಿಂತ ಮೊದಲು ಸ್ಥಳೀಯ ಅಭ್ಯರ್ಥಿಗಳು(ಲೋಕಲ್ ಕ್ಯಾಂಡಿಡೇಟ್ಸ್) ಮತ್ತು ಅರೆಕಾಲಿಕ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದವರನ್ನು ಖಾಯಂ ಮಾಡಲಾಗಿದೆ. ಆದರೆ ಕಾಲೇಜು ಶಿಕ್ಷಣ ಇಲಾಖೆಯ ಬೆನ್ನುಲುಬಾಗಿ ನಿಂತು ವಿದ್ಯಾರ್ಥಿಗಳ ಪಾಠ, ಕ್ರೀಡೆಗೆ, ಪರೀಕ್ಷೆ ಮತ್ತು ಮೌಲ್ಯಮಾಪನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿರುವ ಅತಿಥಿ ಉಪನ್ಯಾಸಕರ ಬಗ್ಗೆ ಅಸಡ್ಡೆ ತೋರಲಾಗುತ್ತಿದೆ. ಶಿಕ್ಷಣ ಇಲಾಖೆಯಡಿಯ ಕಾಲೇಜುಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಾಕಷ್ಟು ಬೋಧಕೇತರ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು 15 ರಿಂದ 20 ವರ್ಷಗಳು ಸೇವೆ ಸಲ್ಲಿಸಿದ ಉಪನ್ಯಾಸಕರಿಗೆ ನೀಡುವ ನಿರ್ಧಾರವನ್ನು ಕನಿಷ್ಟ ಈ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಬಗೆಹರಿಸಿದರೆ ಸಾಕಷ್ಟು ಕುಟುಂಬಗಳು ಬೀದಿಗೆ ಬರುವುದು ತಪ್ಪಿದಂತಾಗುತ್ತದೆ





Any questions related to ಅತಿಥಿ ಉಪನ್ಯಾಸಕರ ಸೇವಾ ನಿಯಮಾವಳಿ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಆಗಲಿ ?