ಅತಿಥಿ ಉಪನ್ಯಾಸಕರಿಂದ ನಗರದಲ್ಲಿ ಪ್ರತಿಭಟನೆ
ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರನ್ನು ‘ತಾತ್ಕಾಲಿಕ ನೇಮಕಾತಿ ಪ್ರಕ್ರಿಯೆ’ಗೆ ಒಳಪಡಿಸದೆ ನೇರವಾಗಿ ಸೇವೆಯಲ್ಲಿ ಮುಂದುವರೆ ಸಲು ಆಗ್ರಹಿಸಿ ಉಪನ್ಯಾಸಕರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ಬೆಂಗಳೂರು.11.ಜುಲೈ.25:- ಅತಿಥಿ ಉಪನ್ಯಾಸಕರ ಮುಂದುವರಿಕೆಗೆ ಆಗ್ರಹ ಪದವಿ ಕಾಲೇಜು ಶಿಕ್ಷಕರ ಪ್ರತಿಭಟನೆ. ಬೆಂಗಳೂರು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸ ಕರಾಗಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವರನ್ನು ‘ತಾತ್ಕಾಲಿಕ ನೇಮಕಾತಿ ಪ್ರಕ್ರಿಯೆ’ಗೆ ಒಳ ಪಸದೆ ನೇರವಾಗಿ ಸೇವೆಯಲ್ಲಿ ಮುಂದುವರೆಸಬೇಕು ಎಂದು ಆಗ್ರಹಿಸಿ ಉಪನ್ಯಾಸಕರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ಇಲಾಖೆಯನಿಯಮಗಳ ಅನುಸಾರ, ಸಂದರ್ಶನ ಮತ್ತು ಅರ್ಹತೆ ಆಧಾರದ ಮೇಲೆ ಸೇರ್ಪಡೆಯಾಗಿ ದಶಕಗಳಿಂದ ಉಪನ್ಯಾಸಕರಾಗಿ ಕೆಲಸ ಮಾಡುತ್ತಿ ರುವ ಸಾವಿರಾರು ಜನರಿದ್ದಾರೆ. ಆದರೆ, ಇತ್ತೀಚೆಗೆ ಉನ್ನತ ಶಿಕ್ಷಣ ಇಲಾಖೆ, ಯುಜಿಸಿ ನಿಯಮ ಪ್ರಕಾರ ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರು ವುದು ಮತ್ತು ಪಿಎಚ್ ಡಿ ಮಾಡಿದವರನ್ನು ನೇಮಿಸಿ ಕೊಳ್ಳಬೇಕು ಎಂಬ ಮಾರ್ಗಸೂಚಿ ಉಲ್ಲೇಖಿಸಿ ನೇಮಕಾತಿಗೆ ಮುಂದಾಗಿದೆ.
ಇದರಿಂದ ಸುಮಾರು 5,400 ಉಪನ್ಯಾಸಕರು ವಂಚಿತರಾಗುವ ಆತಂಕ ವಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ತಿಥಿ ಉಪನ್ಯಾಸಕರ ಕ್ಷೇಮಾ ಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಸಿ. ಲೋಕೇಶ್ ತಿಳಿಸಿದರು.