ಬೆಳಗಾವಿ.13.ಡಿಸೆಂಬರ್.25: ರಾಜ್ಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುವ ಅತಿಥಿ ಉಪನ್ಯಾಸಕರು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ಸುವರ್ಣ ಸೌಧ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿರುವ ವಾಪಸ್ ಪಡೆದಿದ್ದಾರೆ.
ಅತಿಥಿ ಉಪನ್ಯಾಸಕರ ಪ್ರತಿಭಟನೆ ತಾತ್ಕಾಲಿಕವಾಗಿ ವಾಪಸ್ ಪಡೆಯಲಾಗಿದೆ. ಬೆಳಗಾವಿಯ ಸುವರ್ಣಸೌಧದ ಸುವರ್ಣ ಗಾರ್ಡನ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಡಿಸಿ ಜೊತೆಗಿನ ಸಭೆಯ ನಂತರ ಅತಿಥಿ ಉಪನ್ಯಾಸಕರು ಕೈಬಿಟ್ಟಿದ್ದಾರೆ.
ಸಂಗದ ಮುಖಂಡರ ಜೊತೆಗೆ ಬೆಳಗಾವಿ ಜಿಲ್ಲಾ ಅಧಿಕಾರಿ ಡಿಸಿ ಮೊಹಮ್ಮದ್ ರೋಷನ್ ಸಭೆ ನಡೆಸಿದ್ದಾರೆ.
ಜಿಲ್ಲಾ ಅಧಿಕಾರಿ ಜೊತೆಗೆ ಚರ್ಚೆಯ ವೇಳೆ ನಮ್ಮ ಹೋರಾಟಕ್ಕೆ ಸ್ಪಂದನೆ ನೀಡಿದ್ದಾರೆ. ಸೂಕ್ತ ದಾಖಲೆಗಳೊಂದಿಗೆ ನಾಳೆ ಸಭೆಗೆ ಬರುವಂತೆ ಡಿಸಿ ಕರೆದಿದ್ದಾರೆ. ಸಂಘದ ಆಯ್ದ ಐವರು ಮುಖಂಡರು ಮಾತುಕತೆಗೆ ಹೋಗಬೇಕಿದೆ. ಸೋಮವಾರ ಸರ್ಕಾರದ ಮಟ್ಟದಲ್ಲಿ ನಮ್ಮ ವಿಚಾರ ಚರ್ಚೆಯಾಗಲಿದೆ. ಸಿಎಂ, ಸಂಬಂಧಿಸಿದ ಸಚಿವರು ನ್ಯಾಯ ಕೊಡಿಸುವ ಭರವಸೆ ಇದೆ ಎಂದು ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಹನುಮಂತಗೌಡ ಕಲಮನೆ ಹೇಳಿದ್ದಾರೆ.






Any questions related to ಅತಿಥಿ ಉಪನ್ಯಾಸಕರ ಪ್ರತಿಭಟನೆ ತಾತ್ಕಾಲಿಕವಾಗಿ ವಾಪಸ್?