Home » ಲೈವ್ ನ್ಯೂಸ್ » ಅತಿಥಿ ಉಪನ್ಯಾಸಕರ ಪ್ರತಿಭಟನಾ ಸ್ಥಳಕ್ಕೆ ಕಾನೂನು ಸಚಿವ ಡಾ.ಎಚ್.ಕೆ.ಪಾಟೀಲ ಭೇಟಿ,ಬೇಡಿಕೆ ಈಡೇರಿಸುವ ಬರವಸೆ

ಅತಿಥಿ ಉಪನ್ಯಾಸಕರ ಪ್ರತಿಭಟನಾ ಸ್ಥಳಕ್ಕೆ ಕಾನೂನು ಸಚಿವ ಡಾ.ಎಚ್.ಕೆ.ಪಾಟೀಲ ಭೇಟಿ,ಬೇಡಿಕೆ ಈಡೇರಿಸುವ ಬರವಸೆ

Facebook
X
WhatsApp
Telegram

ಗದಗ. ಜಿಲ್ಲಾಡಳಿತ ಭವನದ ಮುಂದೆ ಕರ್ನಾಟಕ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರುಗಳ ಸಂಘದವತಿಯಿಂದ ಸೇವಾ ಖಾಯಮಾತಿಗಾಗಿ ಕಳೆದ 13 ದಿನಗಳಿಂದ ನಡೆದಿದ್ದ ಅನಿರ್ದಿಷ್ಟಾವಧಿ ಪ್ರತಿಭಟನಾಸ್ಥಳಕ್ಕೆರವಿವಾರ ಮದ್ಯಾಹ್ನ ಆಗಮಿಸಿದ ಕಾನೂನು ಸಚಿವ ಡಾ.ಎಚ್.ಕೆ.ಪಾಟೀಲ ಪ್ರತಿಭಟನಾಕಾರರ ಬೇಡಿಕೆಯನ್ನು ಆಲಿಸಿ

ನ್ಯಾಯಯುತವಾದ ನಿಮ್ಮ ಹೋರಾಟದ ಬಗ್ಗೆ ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಇಲಾಖೆಯ ಮಂತ್ರಿಗಳ ಬಳಿ ಸುದೀರ್ಘವಾದ ಚರ್ಚೆ ನಿರಂತರ ನಡೆದಿದೆ, ಯಾರಿಗೂ ಅನ್ಯಾಯವಾಗದ ಹಾಗೆ ಒಂದು ಸ್ಪಷ್ಟ ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದರು. ಆದರೆ ಸ್ಥಳದಲ್ಲೇ ಇದ್ದ ಅತಿಥಿ ಉಪನ್ಯಾಸಕರು ನಮ್ಮ ಹೋರಾಟ ಬೇಡಿಕೆಗಳು ಈಡೇರುವವರಿಗೂ ಮುಂದುವರೆಯುತ್ತದೆಂದು ಪಟ್ಟು ಹಿಡಿದರು.

ನಂತರ ಸಚಿವರ ಭರವಸೆಯ ಹಿನ್ನೆಲೆಯಲ್ಲಿ ಗದಗ ನಲ್ಲಿ ನಡೆಯುತ್ತಿರುವ ಧರಣಿಯನ್ನು ದಿ.12-12-2025 ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ನಿರ್ಣಾಯಕ ಹೋರಾಟ ಮಾಡಲು ತೀರ್ಮಾನಿಸಿದರು. ನಂತರ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಡಾಕ್ಟರ್‌ಹೆಚ್,ಆರ್‌ಕಲ್ಮನಿ ಗದಗ ನಲ್ಲಿ ನಿರಂತರವಾಗಿ 13 ದಿನಗಳ ಕಾಲ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಬೆಂಬಲ ನೀಡಿದ ತೋಂಟದಾರ್ಯ ಮಠದ ಪೂಜ್ಯ ಶ್ರೀ ಡಾ.ಸಿದ್ದರಾಮ ಶ್ರೀಗಳಿಗೆ.ವಿ.ಪ ಸದಸ್ಯ ಎಸ್.ವಿ.ಸಂಕನೂರು, ಹಿರಿಯ ಶಿಕ್ಷಣ ತಜ್ಞರಾದಡಾ.ಆ‌ರ್.ಎಂ.ಕುಬೇರಪ್ಪರವರಿಗೆ,ಬೆಂಬಲ ನೀಡಿದ ವಿವಿಧ ಸಂಘಟನೆಗಳಿಗೆ ಹಾಗೂ ಪತ್ರಿಕಾ ಮಾಧ್ಯಮಮಿತ್ರರಿಗೆ,ಆರಕ್ಷಕ ಸಿಬ್ಬಂದಿಗಳಿಗೆ, ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಭಾಗವಹಿಸಿದ ಸಕಲ ಅತಿಥಿ ಉಪನ್ಯಾಸಕರುಗಳಿಗೆ ಹೃತ್ತೂರ್ವಕವಾದ ಧನ್ಯವಾದಗಳನ್ನು ರಾಜ್ಯಾಧ್ಯಕ್ಷ ಡಾ, ಕಲ್ಮನಿ ತಿಳಿಸಿದರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology