ಬೆಂಗಳೂರು.23.ಜುಲೈ.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಸುಮಾರು 10 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದು ಈ ಸೇವೆಯನ್ನು ಪ್ರತಿ ವರ್ಷ ಕೌನ್ಸಲಿಂಗ್ ಮೂಲಕ ಆಯ್ಕೆ ಮಾಡಿ ನೇಮಕ ಮಾಡಿಕೊಂಡಿರುತ್ತದೆ. ನಂತರ ಕಾನೂನಿಗೆ/ಸಂವಿಧಾನಕ್ಕೆ ವಿರುದ್ಧವಾಗಿ ಪ್ರತಿ ಶೈಕ್ಷಣಿಕ ಅವಧಿಗೆ ಮೂರು ನಾಲ್ಕು ಬಾರಿ ಕೌನ್ಸಲಿಂಗ್ ಮೂಲಕ ನೇಮಕ ಮಾಡಿಕೊಂಡಿರುತ್ತಾರೆ. ನಂತರ ಸುಮಾರು 10-20 ವರ್ಷ ಸೇವೆಯಲ್ಲಿ ಇರುವವರನ್ನು ತೆಗೆದು ಹಾಕಿ, ಹೊಸ ಉಪನ್ಯಾಸಕರನ್ನು ತೆಗೆದುಕೊಳ್ಳಲು ದಿನಾಂಕ: 25-” 06-2025 ರಂದು ಪ್ರಕಟಣೆ ಹೊರಡಿಸಿರುತ್ತಾರೆ. ಕಾಲೇಜು ಶಿಕ್ಷಣ ಇಲಾಖೆಯ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕಟಣೆ ವಿರುದ್ಧವಾಗಿ ಹೈಕೋರ್ಟ್ನಲ್ಲಿ ರಾಮನಗರ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಕುಮಾರಸ್ವಾಮಿ ಮತ್ತು ಇತರರು (ಒಟ್ಟು 80 ಜನ) Write Petition ಸಲ್ಲಿಸಿರುತ್ತಾರೆ. Write Petition No: 20267 /2025(S-RES).
