ಬೆಂಗಳೂರು.09.ಏಪ್ರಿಲ್.25:- ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕ ಗೊಂದಲ ಕಾಲೇಜುಗಳಲ್ಲಿ ಈ ಬಾರಿಯೂ ಅತಿಥಿ ಉಪನ್ಯಾಸಕರ ನೇಮಕ ವಿಷಯ ಮತ್ತೆ ನಿರ್ಲಕ್ಷ್ಯ ಮಾಡಲಾಗಿದೆ.
ರಾಜ್ಯದ ಎಲ್ಲಾ ವಿಶ್ವವಿದ್ಯಾಲಯ ಶೈಕ್ಷಣಿಕ ಅವಧಿ ಆರಂಭವಾದ ಬಳಿಕವಷ್ಟೇ ಅತಿಥಿ ಉಪನ್ಯಾಸಕರ ನೇಮಕಕ್ಕೆ ಸರಕಾರ ಮುಂದಾಗಲಿದೆ. ಆದರೆ ಕೆಲವು ವಿಶ್ವವಿದ್ಯಾಲಯಗಳಲ್ಲಿ ಕಾಲೇಜು ಪ್ರಾರಂಭದ ದಿನಾಂಕ ಬೇರೆ ಬೇರೆ ಇರಲಿದೆ.
ಹೀಗಾಗಿ ಒಂದೊಮ್ಮೆ ಬೇಗನೆ ಪ್ರವೇಶಾತಿ ನೀಡಿದರೂ ಸರಕಾರ ಅತಿಥಿ ಉಪನ್ಯಾಸಕರ ನೇಮಕಕ್ಕೆ ಆಗಸ್ಟ್‌ನಲ್ಲಿಯೇ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ನಡೆಗೆ ತೊಂದರೆಯಾಗಲಿದೆ ಎಂದೇ ಹೇಳಲಾಗುತ್ತಿದೆ.
ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವರ್ಷದ 12 ತಿಂಗಳುಗಳ ಕೆಲಸ ಆದರೆ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ.