Home » ಲೈವ್ ನ್ಯೂಸ್ » ಅತಿಥಿ ಉಪನ್ಯಾಸಕರ ಗೋಳು ಕೇಳೋರಿಲ್ಲ ಯಾರು…!!

ಅತಿಥಿ ಉಪನ್ಯಾಸಕರ ಗೋಳು ಕೇಳೋರಿಲ್ಲ ಯಾರು…!!

Facebook
X
WhatsApp
Telegram

ಸುಭಾಸ ಹರ್ವಾಪೂರು ದೇವೋಭವ” ಎನ್ನುವ ಭಾರತ ದೇಶದಲ್ಲಿ, ಹಾಗೂ ಪ್ರಪಂಚಕ್ಕೆ ಗುರುವಾಗಲು ಹೊರಟ ಭಾರತದಲ್ಲಿ ಅತಿಥಿ ಉಪನ್ಯಾಸಕ(ಗುರುವಿನ) ಗೋಳು ಕೇಳುವವರು ದಿಕ್ಕಿಲ್ಲ!!!

ಅಂದು ಯಾವುದೇ ಆರ್ಹತೆಯ ಷರತ್ತು ಹೇಳದೆ ಸೇವೆಗೆ ಸೇರಿಸಿಕೊಂಡು ಇಂದು ಅರ್ಹತೆ ಪಡೆದಿಲ್ಲ ಎಂದು ನ್ಯಾಯಾಲಯದ ನೆಪ ಹೇಳಿ 15 ರಿಂದ 20 ವರ್ಷ ಸೇವೆ ಸಲ್ಲಿಸಿದ ಸುಮಾರು ಅತಿಥಿ ಉಪನ್ಯಾಸಕರನ್ನು ಬೀದಿಗೆ ತಳ್ಳಿದ ಸರ್ಕಾರ!! ನಂತರ ನಿಮಗೆ ಪರಿಹಾರ ಹುಡುಕುತ್ತೇವೆ. ನಿಮಗೆ ಸೇವೆಗೆ ಸೇ-ರಿಸಿಕೊಳ್ಳುತ್ತೇವೆ ಎಂದು ಹೇಳುತ್ತಾ ಕಾಲ ಹರಣ ಮಾಡುತ್ತಿದೆ.

ಸುಮಾರು 15 ರಿಂದ 20 ವರ್ಷಗಳವರೆಗೆ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕನ ಬದುಕು ಹೇಳತೀರದಾಗಿದೆ ಅಂದು ಕೇವಲ ಕಡಿಮೆ ವೇತನಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ವಿದ್ಯಾರ್ಥಿಗಳ ಜೀವನದ ಏಳಿಗೆಗಾಗಿ ಹಗಲಿರಳು ಶ್ರಮಿಸಿ ಇದು ನನ್ನ ಕಾಲೇಜು, ನನ್ನ ವಿದ್ಯಾರ್ಥಿಗಳು ನನ್ನ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಬಾರದು ಎಲ್ಲರಿಗೂ ಒಳ್ಳೆಯದಾಗಲೆಂದು ತನ್ನ ಬದುಕನ್ನೇ ಮರೆತು ಮಕ್ಕಳ ಭವಿಷ್ಯದ ಬದುಕನ್ನು ಕಟ್ಟಲಿಕ್ಕೆ ಹೋದ ಅತಿಥಿ ಉಪನ್ಯಾಸಕನ ಬದುಕು ನೋಡಿದರೆ ಮನಕುಲುಕುವಂತಿ ದೆ ಆದ ರೆ ಆಳುವ ಸರ್ಕಾರಗಳು ಅಂ ದು ಉಪಯೋಗಿಸಿಕೊಂಡು ಇಂದು

ಕೆಲಸ ಆದ ಮೇಲೆ ಊಟ ಮಾಡುವ ತಟ್ಟೆಯನ್ನು ಹೇಗೆ ಎಸೆಯುತ್ತೇವೆಯೋ ಹಾಗೆ ಎಸೆದು ಬಿಸಾಕಿದ್ದಾರೆ ಅವನ ಬದುಕನ್ನು ತಿರುಗಿ ನೋಡುತ್ತಿಲ್ಲ.

ಅಂದು ದಿನಾಲು ಕಾಲೇಜಿಗೆ ಹೋಗುವ ಅತಿಥಿ ಉಪನ್ಯಾಸಕ ಇಂದು ಮನೆಯಲ್ಲಿಯೇ ಕಾಲ ಕಳೆಯಬೇಕು ಅಂದು ಅಲ್ಪಸ್ವಲ್ಪ ಕೈಯಲ್ಲಿ ಹಣ ಇದ್ದು ಹೆಂಡತಿ ಮಕ್ಕಳ ಹೊಟ್ಟೆ ತುಂಬಿಸಿ ಸ್ವಲ್ಪ ಸಮಾಧಾನದ ಜೀವನ ನಡೆಸುತ್ತಿದ್ದ ಆದರೆ ಇಂದು ಯಾರಿ ಗೆ ಏನು ಹೇಳಬೇಕು ಒಂದು ಅರ್ಥ ವಾಗದು ಎಲ್ಲಾದರೂ ಕೆಲಸ ಕೇಳಿದರೆ “ನಿಮ್ಮಿಂದೇನು ಮಾಡುವುದಾಗುತ್ತದೆ” ಎನ್ನುವ ಉತ್ತರ ಬರುತ್ತಿದೆ.

ಮನೆ ನಡೆಸಲಿಕ್ಕಾಗದೆ ಸಾಲವನ್ನು ತೆಗೆದುಕೊಂಡು ಸಾಲ ಕೊಟ್ಟವರು ಕೇಳಲಿಕ್ಕೆ ಬಂದರೆ ಅಡಗಿಕೊಳ್ಳುವಂತಹ ಪರಿಸ್ಥಿತಿಗಳು ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ ಮಕ್ಕಳ ಶಾಲೆಯ ಫೀಸ್ ಕಟ್ಟಲು ಹಣ ಇಲ್ಲ ಶಾಲೆಯವರು ಕರೆ ಮಾಡಿದರೆ ಕರೆಯನ್ನು ಸ್ವೀಕರಿಸಲಾಗದ ಪರಿಸ್ಥಿತಿಗಳು ಹೆಚ್ಚಿದ ಬೆಲೆಗಳ ಮಧ್ಯದಲ್ಲಿ ತರಕಾರಿಯು ತರಲಾಗದೆ,ಕಿರಾಣಿಯು ತರಲಾಗದೆ ಮನೆಯಲ್ಲಿ ಹೆಂಡತಿ ಏನ್ರಿ ಇದು ಜೀವನ ! ಮಕ್ಕಳಿಗೆ ಏನು ಊಟ ಮಾಡಿಸಬೇಕು ನಾವು ಏನು ತಿನ್ನಬೇಕು ಯಾಕೆ ಇಂತಹ ಪರಿಸ್ಥಿತಿ! ನಮ್ಮ ಪರಿಸ್ಥಿತಿಗೆ ಪರಿಹಾರ ಇಲ್ಲವೇನು? ಯಾಕಾದರೂ ನೀವು ಓದಿದ್ದೀರಿ ?ಯಾಕಾದರೂ ನೀವು ಅಂದು ಅತಿಥಿ ಉಪನ್ಯಾಸಕರ ಹುದ್ದೆಗೆ ಸೇರಿದ್ದೀರಿ ? ಅದರ ಶಾಪವೇ ಇಂದು ನಮ್ಮ ಪರಿಸ್ಥಿತಿಗೆ ಕಾರಣ !!ಎನ್ನುವ ಕರಳು ಕಿತ್ತಿ ಬರುವ ಮಾತುಗಳು ಮತ್ತೆ ಮಕ್ಕಳು ಅಪ್ಪ ರಂಜಾನ್ ಬಂತು ನನಗೆ

ಹೊಸ ಬಟ್ಟೆ ಬೇಕು, ಅಪ್ಪ ಯುಗಾದಿ

ಬಂತು ನನಗೆ ಹೊಸ ಬಟ್ಟೆ ಬೇಕು, ಅಪ್ಪ ಜಾತ್ರೆ ಬಂತು ನನಗೆ ಹಣ ಬೇಕು, ಇತ್ತ ತಂದೆ ತಾಯಿಗಳು ವಯಸ್ಸಾಗಿ ಅವರ ಅನಾರೋಗ್ಯದಿಂದ ಮನೆಯಲ್ಲಿ ನರಳುತ್ತಿದ್ದಾರೆ ಅವರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋ-ರಿಸಲು ಹಣವಿಲ್ಲ ತಂದೆ ತಾಯಿಗಳು “ಮಗನೇ ನನಗೆ ಹುಷಾರಿಲ್ಲ ನಾನೇನು ಮಾಡಲಿ” ಎಂಬ ಪ್ರಶ್ನೆಗಳು ಅಯ್ಯೋ, ವಿಧಿಯೇ ಎಲ್ಲಿಂದ ತರಲಿ, ಎಲ್ಲಿಂದ ಕೊಡಲಿ, ಏನು ಹೇಳಲಿ ಇವರೆಲ್ಲರಿ ಗೂ ಏನೆಂದು ಉತ್ತರಿಸಲಿ ಎನ್ನುವ ಪರಿಸ್ಥಿತಿ ಅತಿಥಿ ಉಪನ್ಯಾಸಕ ಕಣ್ಣೀರಿ ನಲ್ಲೇ ಬದುಕನ್ನು ನಡೆಸುತ್ತಿದ್ದಾನೆ ಸಾಲ ಕೊಟ್ಟವನಿಗೆ ಉತ್ತರಿಸಲಿಕ್ಕಾಗದೆ, ಶಾಲೆ ಫೀಸ್ ಕಟ್ಟಲು ಉತ್ತರಿಸಲಿಕ್ಕಾಗದೆ. ಹೆಂಡತಿಯ ಪ್ರಶ್ನೆಗಳಿಗೂ ಉತ್ತರಿ ಸಲಿಕ್ಕಾಗದೆ. ಮಕ್ಕಳ ಕೋರಿಕೆಗಳನ್ನು ಈಡೇರಿಸಲಾಗದೆ, ತಂದೆ ತಾಯಿಗಳ ಆರೋಗ್ಯವನ್ನು ಸರಿಪಡಿಸಲಾಗದೆ, ಯಾಕಪ್ಪಾ ನನ್ನ ಬದುಕಿಗೆ ಇಂತಹ ಪರೀಕ್ಷೆಗಳು ? ನಾನಿದ್ದಾದರೂ ಏನು ಸಾಧಿಸಲಿ, ಇದ್ದಾದರೂ ಸಾರ್ಥಕ ಏನು ?ಎನ್ನುವಂತಹ ಪ್ರಶ್ನೆಗಳು ಅವನಲ್ಲಿ ಕಾಡುತ್ತಿವೆ ಆದರೆ ಅವುಗಳಿಗೆ ಉತ್ತರವಿಲ್ಲ ಇಂತಹ ನರಕಯಾತನೇಯನ್ನು ಅನುಭವಿಸುತ್ತಿದ್ದಾನೆ .

ಇಂತಹ ಅತಿಥಿ ಉಪನ್ಯಾಸಕನ ನರಕಯಾತನೆ ಗದ್ದುಗೆಯ ಮೇಲೆ ಕುಲಿತವರಿಗಾದರೂ ಹೇಗೆ ಅಥ-ರ್’ವಾದೀತು ಮನುಷ್ಯನಿಗೆ ತನ್ನ ಜೀವನಕ್ಕೆ ಕಷ್ಟ ಬಂದಾಗ ಮಾತ್ರ ಇದು ಕಷ್ಟ ಎಂದು ಅರ್ಥವಾಗುತ್ತದೆಯೇ ಹೊರತು ಬೇರೆಯವರಿಗೆ ಬಂದ ಕಷ್ಟ ಯಾವತ್ತಿಗೂ ಯಾರಿಗೂ ಅರ್ಥವಾಗದು ಎನ್ನಲಿಕ್ಕೆ ಇದು ಒಂದೇ ಸಾಕ್ಷಿ ಆದ್ದರಿಂದ ಅತಿಥಿ

ಉಪನ್ಯಾಸಕರ ಗೋಳು ಕೇಳುವವರಿಲ್ಲ. ಸುಮಾರು ನಾಲ್ಕು ತಿಂಗಳಾದರೂ ಕೊಡುತ್ತಲೇ ಭರವಸೆಯನ್ನ ಹೋಗುತ್ತದೆ. ಬರವಸೆಗಳ ಸರಮಾಲೆಯನ್ನ ಅತಿಥಿ ಉಪಪನ್ಯಾಸಕನಿಗೆ ಹಾಕುತ್ತಿದೆ ನಿಮಗೆ ಒಳ್ಳೆಯದು ಮಾಡುತ್ತೇವೆ ಒಳ್ಳೆಯದು ಮಾಡುತ್ತೇವೆ ಬಜೆಟ್ ನಲ್ಲಿ ಒಳ್ಳೆಯದು ಮಾಡುತ್ತೇವೆ ಆ ದಿನಾಂಕಕ್ಕೆ ಒಳ್ಳೆಯದು ಮಾಡುತ್ತೇವೆ ಈ ದಿನಾಂಕಕ್ಕೆ ಒಳ್ಳೆಯದು ಮಾಡುತ್ತೇವೆ ಎಂದು ಮಾನ್ಯ ಸಚಿವರು, ಮುಖ್ಯಮಂತ್ರಿಗಳು. ಅಧಿಕಾರಿಗಳು, “ಅಂಗೈಯಲ್ಲಿಯೇ ಸ್ವರ್ಗವನ್ನು ತೋರಿಸುತ್ತಿದ್ದಾರೆ” ಕೇಳಿದರೆ ಜಾರಿ ಕೊಳ್ಳುವ ಉತ್ತರವನ್ನು ನೀಡುತ್ತಿದ್ದಾರೆ ಇವರು ಜಾರಿಕೊಳ್ಳುವ ಉತ್ತರಕ್ಕೂ ಅತಿಥಿ ಉಪನ್ಯಾಸಕನ ಪರಿಸ್ಥಿತಿಗೂ ಸಮಾಧಾನವಾದೀತೆ ?ಇದನ್ನಾದರೂ ಅರ್ಥೈಸಿಕೊಳ್ಳಬೇಕು ಅಂದು ಮಕ್ಕಳ ಭವಿಷ್ಯವನ್ನು ಉಜ್ವಲ ಗೊಳಿಸಲು ಹೋದ ಅತಿಥಿ ಉಪನ್ಯಾಸಕನ ಬದುಕು ಇಂದು ಅಂಧಕಾರದಲ್ಲಿ ಮುಳುಗಿಹೋಗಿದೆ, ವಿದ್ಯಾರ್ಥಿಗಳ ಭವಿಷ್ಯವನ್ನು ಬರೆಯುವ ಅತಿಥಿ ಉಪನ್ಯಾಸಕನ ಭವಿಷ್ಯವೇ ಬರೆಯುವವರಿಲ್ಲದಂತಾಗಿದೆ ಆದ್ದ ರಿಂದ ಈಗಲಾದರೂ ಘನ ಸರ್ಕಾರ ಸಾಮಾಜಿಕ ನ್ಯಾಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಮುಖ್ಯಮಂತ್ರಿಗಳು ಈಗಲಾದರೂ ಅರ್ಥೈಸಿಕೊಂಡು ಅತಿಥಿ ಉಪನ್ಯಾಸಕರ ಬದುಕಿಗೆ ಪರಿಹಾರವನ್ನು ನೀಡಿ ಅವರ ನರಕ ಯಾತನೆಯಿಂದ ಹೊರ ತರಬೇಕು ಅವರಿಗೆ ಏನಾದರೂ ಪರಿಹಾರವನ್ನು ಕಂಡುಕೊಂಡು ಅತಿಥಿ ಉಪನ್ಯಾಸಕರ ಬದುಕಿಗೆ ಬೆಳಕಾಗಲಿ
ಎಂಬುದು ನಮ್ಮ ಆಶಯ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology