ಬೆಳಗಾವಿ.14.ಡಿಸೆಂಬರ್.25: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸತತ ಎರಡು ದಶಕದಿಂದ ಕಾರ್ಯ ನಿರ್ವಹಿಸುವ ಅತಿಥಿ ಉಪನ್ಯಾಸಕರು ಯುಜಿಸಿ ಮಾನದಂಡದಿಂದ ಹೊರಗುಳಿದ ಸುಮಾರು 6 ಸಾವಿರಕ್ಕಿಂತ ಹೆಚ್ಚು ನಾನ್ ಯುಜಿಸಿ ಅತಿಥಿ ಉಪನ್ಯಾಸಕರನ್ನು ಕೂಡಲೇ ಸೇವೆಗೆ ಮರುನೇಮಿಸಿಕೊಳ್ಳುವಂತೆ ಆಗ್ರಹಿಸಿ ಶುಕ್ರವಾರ ಸುವರ್ಣ ಸೌಧ ಬಳಿ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಸಂಕನೂರು ಭೇಟಿ ನೀಡಿದ್ದನ್ನು ವಿರೋಧಿಸಿ, ಅತಿಥಿ ಉಪನ್ಯಾಸಕರು ಅವರನ್ನು ತರಾಟೆಗೆ ತೆಗೆದುಕೊಂಡರು.
ಯುಜಿಸಿ ಮಾನದಂಡದಿಂದ ಹೊರಗುಳಿದ ಸುಮಾರು 6 ಸಾವಿರಕ್ಕಿಂತ ಹೆಚ್ಚು ನಾನ್ ಯುಜಿಸಿ ಅತಿಥಿ ಉಪನ್ಯಾಸಕರನ್ನು ಕೂಡಲೇ ಸೇವೆಗೆ ಮರುನೇಮಿಸಿಕೊಳ್ಳುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ಶುಕ್ರವಾರ ಸುವರ್ಣ ವಿಧಾನಸೌಧ ಬಳಿಯ ಸುವರ್ಣ ಗಾರ್ಡನ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುವತ್ತಿರುವ ಯುಜಿಸಿ ಮಾನದಂಡಗಳನ್ನು ಹೊಂದಿದ ಅತಿಥಿ ಉಪನ್ಯಾಸಕರ ಸೇವೆಯನ್ನು ಯುಜಿಸಿ ವೇತನ ಶ್ರೇಣಿ ನೀಡಿ ಅವರಿಗೆ ಸೇವಾ ಭದ್ರತೆ ಒದಗಿಸುವುದು. ಜೊತೆಗೆ ಯುಜಿಸಿ ಮಾನದಂಡಗಳನ್ನು ಹೊಂದಿಲ್ಲದ ಅತಿಥಿ ಉಪನ್ಯಾಸಕರಿಗೆ ಸರಕಾರ 30-06-2002 ರಲ್ಲಿ ವಿಧಿಸಿರುವ ಷರತ್ತುಗಳನ್ನು ಅವಲೋಕಿಸಿ ರಾಜ್ಯ ವೇತನ ಶ್ರೇಣಿಯಲ್ಲಿ ಅವರಿಗೆ ಸೇವಾ ಭದ್ರತೆ ಒದಗಿಸಬೇಕು.
ಯುಜಿಸಿ ನಿಯಮಾವಳಿಗಳ ಪ್ರಕಾರ 2009ಕ್ಕಿಂತ ಮುಂಚೆ ಎಂ.ಫಿಲ್ ಪದವಿ ಅರ್ಹತೆಯನ್ನು ಪರಿಗಣಿಸಿ ಸೇವಾ ಸಕ್ರಮಾತಿಗಳಿಸಿ ಅತಿಥಿ ಉಪನ್ಯಾಸಕರ ಜೀವನಕ್ಕೆ ದಾರಿ ಬೆಳಕಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಈ ವೇಳೆ ಡಾ.ಹನುಮಂತಗೌಡ ಕಲ್ಮನಿ, ಶಶಿಕಲಾ ಜೋಳದ, ಡಾ.ವಿ.ಡಿ.ಮುಳಗುಂದ, ವಿ.ಎಂ.ದೇಸಾಯಿಗೌಡ್ರ, ಎಂ.ಎಚ್.ಕರಲವಾಡ, ಅನೀಲ ಶಿಂಧೆ, ಬಿ.ಪಿ.ನವಲುಕರ, ಡಾ.ಚಂದ್ರಕಾಂತ ಶಿರೋಳೆ ಸೇರಿದಂತೆ ಇತರರು ಹಾಜರಿದ್ದರು. —-
ಬಾಕ್ಸ್್ವಿ.ಪ ಸದಸ್ಯ ಸಂಕನೂರಗೆ ತರಾಟೆ
15-20 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಅರ್ಹತೆ ಇಲ್ಲ ಎಂಬ ನೆಪವೊಡ್ಡಿ ಕರ್ತವ್ಯದಿಂದ ತೆಗೆದು ಹಾಕಿ ನಮ್ನನ್ನು ಬೀದಿ ಪಾಲು ಮಾಡಿದ್ದೀರಿ. ನಮ್ಮ ಕುಟುಂಬ ನಿತ್ಯವೂ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ ಎಂದು ಕೆಲ ಮಹಿಳೆಯರು ಕಣ್ಣೀರು ಹಾಕಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಹೊತ್ತು ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ನೂಕಾಟ-ತಳ್ಳಾಟ ನಡೆಯಿತು. ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಶಿಕ್ಷಣ ಸಚಿವರು ಹಾಗೂ ಕಾನೂನು ಸಚಿವರು ಬಂದು ನ್ಯಾಯ ಕೊಡಿಸುವವರೆಗೆ ಇಲ್ಲಿಂದ ಹೋಗುವುದಿಲ್ಲ ಎಂದು ಪಟ್ಟು ಹಿಡಿದರು. ಡಿಸಿಪಿ ನಾರಾಯಣ ಭರಮನಿ ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಮನವೊಲಿಸಿದರು.




Any questions related to ಅತಿಥಿ ಉಪನ್ಯಾಸಕರು ಮರು ನೇಮಕ್ಕೆ ಆಗ್ರಹ.?