Home » ಲೈವ್ ನ್ಯೂಸ್ » ಅತಿಥಿ ಉಪನ್ಯಾಸಕರಿಗೆ 10 ತಿಂಗಳು ಬದಲು ಕೇವಲ ಒಂದು ಸೆಮಿಸ್ಟರ್ ಕೆಲಸ ? ಜೀವನ ನಿರ್ವಹಣೆ ಹೇಗೆ ಸಾಧ್ಯ ?

ಅತಿಥಿ ಉಪನ್ಯಾಸಕರಿಗೆ 10 ತಿಂಗಳು ಬದಲು ಕೇವಲ ಒಂದು ಸೆಮಿಸ್ಟರ್ ಕೆಲಸ ? ಜೀವನ ನಿರ್ವಹಣೆ ಹೇಗೆ ಸಾಧ್ಯ ?

Facebook
X
WhatsApp
Telegram

ಅತಿಥಿ ಉಪನ್ಯಾಸಕರ ಪ್ರಮುಖ ಸಮಸ್ಯೆಗಳೆಂದರೆ ಕಡಿಮೆ ವೇತನ ಮತ್ತು ವೇತನ ವಿಳಂಬ,  ವರ್ಷದಲ್ಲಿ 6 ತಿಂಗಳು ಕೆಲಸ ಕೋಟಿದ್ರೆ ಜೀವನ ಹೇಗೆ ನಡೆಸುತ್ತಾರೆ ಅತಿಥಿ ಉಪನ್ಯಾಸಕರು ಅಂದ್ರೆ ಅವರು ಮನುಷ್ಯರು ಅವರಿಗೆ ತಾಯಿ.ತಂದೆ ಹೆಂಡತಿ ಮಕ್ಕಳು ಪರಿವಾರ ಸುಖ ದುಃಖ ಎಲ್ಲವೂ ಅವರಿಗೆ ಇದೆ ಸರ್ಕಾರಕ್ಕೆ ಇದು ಅರ್ಥ ಆಗುತ್ತಿಲ ಪದೆ ಪದೇ  ಅತಿಥಿ ಉಪನ್ಯಾಸಕರ ಅಂದ್ರೆ ಗುಲಾಮರು ಅಂಥ ತಿಳ್ಕೊಂಡಿದಾರೆ.

10 ವರ್ಷ ಹೋರಾಟ ಮಾಡಿದ ನಂತರದ 10 ತಿಂಗಳು ಆದೇಶ ಹೊರಡಿಸಿದ ಸರ್ಕಾರ ಮತ್ತು ಸಿದ್ಧರಾಮಯ್ಯ ಸರ್ಕಾರ ಅತಿಥಿ ಉಪನ್ಯಾಸಕರಿಗೆ ವರ್ಷದಲ್ಲಿ ಪ್ರತಿ ಸೆಮಿಸ್ಟರ್ ಗೆ ಕೇವಲ 3 ತಿಂಗಳು ಕೆಲಸ ಕೊಡುತ್ತಿದ್ದಾರೆ. ವರ್ಷದಲ್ಲಿ 6 ತಿಂಗಳು ಕೆಲಸ ಮಾಡಿ ಜೀವನ ಹೇಗೆ ನಡೆಸಬೇಕು? ಸರ್ಕಾರಕ್ಕೆ ಬುದ್ಧಿ  ಇಲ್ಲ? ಅಥ್ವಾ ಅವರಿಗೆ ಸಮಾಜೀವ ಕಾಳಜಿ ಇಲ್ಲ ? ಅತಿಥಿ ಉಪನ್ಯಾಸಕರು ಅಂದಿದ್ರೆ 100 % ಗುಲಾಮರು ಅಂಥ ತಿಳ್ಕೊಂಡಿದಾರೆ.

ನಿಜವಾದ ನಾವು ಅತಿಥಿ ಉಪನ್ಯಾಸಕರು ಗುಲಾಮರು ಇದೇವೆ ಹೇಗೆಅಂದ್ರೆ ಪ್ರತಿ ವರ್ಷ ಸರ್ಕಾರ ನಮಗೆ ರಿಲೀವ್ (Relive) ಮಾಡಿದ್ ನಂತರ ನಾವು ಕಾಲೇಜು ಹೋಗಿ ಪರೀಕ್ಷಾ ಕಾರ್ಯ ನಡೆಸುತ್ತಿದ್ದೇವೆ. ಪಾಠ ಪ್ರವಚನ ಮಾಡ್ತೀವಿ ನಾವು ಹೇಗೆ ಕೆಲಸ ಮಾಡಿದ್ರೆ ನಮಗೆ ಜೀವನಪರ್ಯಂತ ಯಾವಾಗಲೂ 12 ತಿಂಗಳು ಕೆಲಸ ಸಿಗೋದಿಲ್ಲ.

ಆದರೆ ಅತಿಥಿ ಉಪನ್ಯಾಸಕರ ಬಂಧುಗಳೇ ನಿಮಗೆ ಸೆಲ್ಫ್ ರೆಸ್ಪೆಕ್ಟ್ ಇದ್ದಿದ್ರೆ ಯಾವಾಗಲೂ ಸರ್ಕಾರ ನಮಗೆ ರಿಲೀವ್ ಮಾಡಿದ ನಂತರ ಪಾಠ ಪ್ರವಚನ ಹಾಗೂ ಪರೀಕ್ಷಾ ಕಾರ್ಯಗಳು ಸಹಕರಿಸಬಾರದು.

ನಾವು ಈ ತರಹ free of cost service ಮಾಡಿದ್ರೆ ಸರ್ಕಾರಕ್ಕೆ ನಮ್ ಸೇವೆಯು ಅವಶ್ಯಕತೆ ಕಾಣುಬರಿತಿಲ್ಲ ಇದಕೆ ಒಂದು ದೊಡ್ಡ ಕಾರಣ ಏನಂದರೆ ಅತಿಥಿ ಉಪನ್ಯಾಸಕರು ಮಾಡಿದ್ ಕೆಲಸ ಖಾಯಂ ಉಪನ್ಯಾಸಕರು ಕ್ರೆಡಿಟ್ ಹೋಗುತೆ . ಅದಕ್ಕೇ ಸರ್ಕಾರ ಅತಿಥಿ ಉಪನ್ಯಾಸಕರ ಜೊತೆ ಈ ತರಹ ಮಾಡುತ್ತಿದೆ.

ಪ್ರತಿವರ್ಷ ಯಾವುದೇ ಕಾರಣಕ್ಕೂ ಅತಿಥಿ ಉಪನ್ಯಾಸಕರಿಗೆ ಹರಾಜ್ಮೆಂಟ್ ಮಾಡ್ತಾರೆ. ನಾವು ಸೇವಾ ಭದ್ರತೆ ಹಾಗೂ ಖಾಯಮತಿ ಬಿಡಬಾರದು ಎಂದು 1 semister ಗೆ ಮಾತ್ರ ನೇಮಿಸಲಾಗಿದೆ ಈ ತರಹ ಆದೇಶ ಹೊರಡಿಸುತಾರೆ ಹಂತಾ ಸಂದರ್ಭದಲ್ಲಿ ನಾವು 10 ತಿಂಗಳು ಕೊಡಿ ಸರ್ ಈ ಲೆವೆಲ್ ಗೆ ಬರುತ್ತೇವೆ ಅದಕ್ಕೇ ಈ ಎಲ್ಲಾ ಸರ್ಕಾರದ ಗಿಮಿಕ್.

UGC ನಿಯಮಗಳಿಂದ ಅಸಮರ್ಪಕತೆ (ಪಿಎಚ್.ಡಿ/NET/K-SET ಅಗತ್ಯ),  ಖಾಯಂ ನೇಮಕಾತಿಯ ಗೊಂದಲ,  ಸೇವೆ ಭದ್ರತೆಯ ಕೊರತೆ ಮತ್ತು ಸರ್ಕಾರದಿಂದ ಸಿಗುವ  ಗೌರವ ಮತ್ತು ಸೌಲಭ್ಯಗಳ ಕೊರತೆ. ಇದರಿಂದಾಗಿ ಜೀವನ ಅತಂತ್ರವಾಗಿದ್ದು, ಕೆಲವರು ಪರ್ಯಾಯ ಉದ್ಯೋಗಗಳನ್ನು ಹುಡುಕಬೇಕಾದ ಪರಿಸ್ಥಿತಿ ಇದೆ.

ಅತಿಥಿ ಉಪನ್ಯಾಸಕರ ಮುಖ್ಯ ಸಮಸ್ಯೆಗಳೆಂದರೆ ವೇತನ ತಡವಾಗಿ ಪಾವತಿಯಾಗುವುದು, UGC ನಿಯಮಗಳಿಂದ ಅರ್ಹತೆ ಪ್ರಶ್ನಿಸಿ ಕೆಲಸ ಕಳೆದುಕೊಳ್ಳುವ ಆತಂಕ, ಕಡಿತಗೊಂಡಿರುವ ಸೇವಾ ಭದ್ರತೆ, ಹಾಗೂ ಹೊಸದಾಗಿ ಸೇವೆಗೆ ಸೇರಲು ಇರುವ ಅಡೆತಡೆಗಳು; ಈ ಎಲ್ಲಾ ಕಾರಣಗಳಿಂದ ಅವರ ಜೀವನ ಅತಂತ್ರವಾಗಿದೆ ಮತ್ತು ವಿದ್ಯಾರ್ಥಿಗಳ ಶಿಕ್ಷಣಕ್ಕೂ ತೊಂದರೆಯಾಗುತ್ತಿದೆ. ಇತ್ತೀಚೆಗೆ, ಸರ್ಕಾರ ಕೆಲವೊಂದು ಭರವಸೆ ನೀಡಿದ್ದರೂ (ವೇತನ ಹೆಚ್ಚಳ, ಆರೋಗ್ಯ ವಿಮೆ), ಮೂಲ ಬೇಡಿಕೆಗಳಾದ ಸೇವಾ ಭದ್ರತೆ ಈಡೇರಿಲ್ಲ.

ಪ್ರಮುಖ ಸಮಸ್ಯೆಗಳು:
ವೇತನ ಮತ್ತು ಆರ್ಥಿಕ ಅಸುರಕ್ಷತೆ:
ಗೌರವಧನ ಎಂದು ಕರೆಯಲಾಗುವ ವೇತನ ಕಡಿಮೆ ಇರುವುದು ಮತ್ತು ತಿಂಗಳುಗಟ್ಟಲೆ ಸಂಬಳ ಸಿಗದಿರುವುದು.

ಕාලಕ್ಕೆ ಸಂಬಳ ಸಿಗದೆ ಇರುವುದರಿಂದ ಜೀವನ ಸಾಗಿಸಲು ಇತರೆ ಕೆಲಸಗಳನ್ನು ಮಾಡಬೇಕಾದ ಸ್ಥಿತಿ.

UGC ಮಾನದಂಡಗಳ ಸಮಸ್ಯೆ:
UGC ನಿಗದಿಪಡಿಸಿದ ಪಿಎಚ್.ಡಿ/NET/K-SET ಅರ್ಹತೆಗಳು ಕಡ್ಡಾಯ ಆಗಿರುವುದರಿಂದ ಅನೇಕ ಅನುಭವಿ ಉಪನ್ಯಾಸಕರು ಅನರ್ಹರಾಗುತ್ತಿದ್ದಾರೆ.

ಹೈಕೋರ್ಟ್ ತೀರ್ಪಿನಿಂದ ನೇಮಕಾತಿ ಪ್ರಕ್ರಿಯೆ ಗೊಂದಲಕ್ಕೊಳಗಾಗಿದೆ.

ಸೇವಾ ಭದ್ರತೆ ಮತ್ತು ಖಾಯಂ ನೇಮಕಾತಿ:
ಗೌರವಧನದಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಖಾಯಂ ಗೊಳಿಸುವ ಬಗ್ಗೆ ಸ್ಪಷ್ಟತೆ ಇಲ್ಲ.


20-30 ವರ್ಷಗಳ ಸೇವೆಯೂ ಗೌರವ ಪಡೆಯುತ್ತಿಲ್ಲ ಎಂಬ ನೋವು.

ಸರ್ಕಾರಿ ನೀತಿ ಮತ್ತು ಬೆಂಬಲದ ಕೊರತೆ:
ಸೇವೆಗಾಗಿ ಮಾಡುವ ಪ್ರತಿಭಟನೆಗಳಿಗ ಸ್ಪಂದಿಸುತ್ತಿಲ್ಲ ಎಂಬ ಅಸಮಾಧಾನ.

ವೇತನ ಹೆಚ್ಚಳ ಮತ್ತು ಇತರ ಸೌಲಭ್ಯಗಳ ಭರವಸೆಗಳು ಸಂಪೂರ್ಣವಾಗಿ ಈಡೇರಿಲ್ಲ.

ಪರಿಣಾಮಗಳು:
ವಿದ್ಯಾರ್ಥಿಗಳಿಗೆ ತರಗತಿಗಳು ವಿಳಂಬವಾಗಿ ನಡೆಯುತ್ತಿವೆ.
ಉಪನ್ಯಾಸಕರು ಆರ್ಥಿಕ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ.
ಈ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅತಿಥಿ ಉಪನ್ಯಾಸಕರ ಸಂಘಟನೆಗಳು ಆಗ್ರಹಿಸುತ್ತಿವೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology