ಬೆಂಗಳೂರು.09.ಮೇ.25:- ಉನ್ನತ ಶಿಕ್ಷಣ ಇಲಾಖೆ ಅಧೀನದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2024-25ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರನ್ನು ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳುವ ಉಲ್ಲೇಖ:
(1) ಈ ಕಛೇರಿಯ ಸಮಸಂಖ್ಯೆ ಪ್ರಕಟಣೆ ದಿನಾಂಕ:02.01.2025.
(2) ಮಾನ್ಯ ರಾಜ್ಯ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ: 1398/2025 ಕ್ಕೆ ದಿನಾಂಕ:22.04.2025 ರಂದು ನೀಡಿರುವ ದೈನಂದಿನ ಆದೇಶ
(3) 25.04.2025 2 28.04.2025 0
(4) ಮಾನ್ಯ ರಾಜ್ಯ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ:13282/2025 ಕ್ಕೆ ದಿನಾಂಕ:29.04.2025 ರಂದು ನೀಡಿರುವ ದೈನಂದಿನ ಆದೇಶ.
(5) /3-1/5/90/2023-24, 2: 03.10.2024.ಉಲ್ಲೇಖ-(2) ರಲ್ಲಿ ಮಾನ್ಯ ಉಚ್ಚ ನ್ಯಾಯಾಲಯವು ನೀಡಿರುವ ದೈನಂದಿನ ಆದೇಶದ ಹಿನ್ನೆಲೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ (ಸರ್ಕಾರಿ ಸಂಸ್ಕೃತ ಹಾಗೂ ಚಿತ್ರಕಲಾ ಕಾಲೇಜುಗಳೂ ಒಳಗೊಂಡಂತೆ) ಖಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ನಂತರ ಉಳಿಕೆಯಾಗುವ ಬೋಧನಾ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರನ್ನು (ಅತಿಥಿ ಗ್ರಂಥಪಾಲಕರು ಹಾಗೂ ಅತಿಥಿ ದೈಹಿಕ ಶಿಕ್ಷಣ ನಿರ್ದೇಶಕರು ಒಳಗೊಂಡಂತೆ) ಆನ್ಲೈನ್ ಕೌನ್ಸಿಲಿಂಗ್ ಮೂಲಕ ಆಯ್ಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ.
ಈ ಸಂಬಂಧ ಈಗಾಗಲೇ
ಉಲ್ಲೇಖ-(1) ರ ಪ್ರಕಟಣೆಯಲ್ಲಿ ತಿಳಿಸಲಾಗಿರುವ ಮಾರ್ಗಸೂಚಿಗಳ ಅನುಸಾರ ಆಯ್ಕೆ ಪ್ರಕ್ರಿಯೆಯನ್ನು ಕೈಗೊಳ್ಳಲುಉಲ್ಲೇಖ (3) ರಂತೆ ಪ್ರಕಟಣೆಗಳನ್ನು ಹೊರಡಿಸಲಾಗಿತ್ತು. ಪ್ರಸ್ತುತಉಲ್ಲೇಖ-(4) ರಂತೆ ಮಾನ್ಯ ಉಚ್ಚ ನ್ಯಾಯಾಲಯವು ನೀಡಿರುವ ದೈನಂದಿನ ಆದೇಶದಲ್ಲಿ ಈ ಕೆಳಕಂಡಂತೆ ನಿರ್ದೇಶನ ನೀಡಲಾಗಿದೆ.ಪ್ರಸ್ತುತ ಚಾಲ್ತಿಯಲ್ಲಿರುವ 2024-25ನೇ ಶೈಕ್ಷಣಿಕ ಸಾಲಿಗೆ ಈ ಹಿಂದಿನ 2023-24ನೇ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದವರನ್ನು ಈಗಾಗಲೇ ಉಲ್ಲೇಖ-(5) ರಂತೆ ಲಭ್ಯವಿದ್ದ ಹೆಚ್ಚುವರಿ ಕಾರ್ಯಭಾರಕ್ಕನುಗುಣವಾಗಿ ಮುಂದುವರೆಸಲಾಗಿದೆ.ಉಲ್ಲೇಖ-(4) ರಂತೆ ಮಾನ್ಯ ಉಚ್ಚ ನ್ಯಾಯಾಲಯವು ನೀಡಿರುವ ನಿರ್ದೇಶನದಂತೆ ಪ್ರಸ್ತುತ 2024-25ನೇ ಸಾಲಿನಲ್ಲಿ ಹೆಚ್ಚುವರಿ ಕಾರ್ಯಭಾರ ಲಭ್ಯವಿರುವ ವಿಷಯಗಳಿಗೆ
Court Matter
ಈ ನ್ಯಾಯಾಲಯವು 22.04.2025 ರಂದು W.P.No.1398/2025 ರಲ್ಲಿ ಹೊರಡಿಸಿದ ಆದೇಶದ ಪ್ರಕಾರ, 20.01.2025 ರ ಆದೇಶವನ್ನು ಮಾರ್ಪಡಿಸುವ ಮೂಲಕ 1159 ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಕೌನ್ಸೆಲಿಂಗ್ ಅನ್ನು ಮುಂದುವರಿಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದೆ.
2. ಈ ರಿಟ್ ಅರ್ಜಿಯಲ್ಲಿ ಅರ್ಜಿದಾರರು ರಾಜ್ಯ ಸರ್ಕಾರವು ರಾಜ್ಯದಲ್ಲಿ 8561 ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಕೌನ್ಸೆಲಿಂಗ್ ನಡೆಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದು, ಇದರಲ್ಲಿ ಅರ್ಜಿದಾರರು ಸೇರಿದ್ದಾರೆ, ಅವರ ಗುತ್ತಿಗೆ ನೇಮಕಾತಿ ಇನ್ನೂ ಜಾರಿಯಲ್ಲಿದೆ. ಆದ್ದರಿಂದ, ಅವರ ಅವಧಿ ಮುಗಿಯುವವರೆಗೆ,ರಾಜ್ಯ ಸರ್ಕಾರವು 8561 ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ನೇಮಕಾತಿಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ವಾದಿಸುತ್ತಾರೆ. ರಾಜ್ಯ ಸರ್ಕಾರದ ಆದೇಶದ ಮೇರೆಗೆ, 1159 ಅತಿಥಿ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಲಾಗಿದೆ ಮತ್ತು ಈ ಆದೇಶದ ಲಾಭವನ್ನು ಪಡೆದುಕೊಂಡು, ರಾಜ್ಯ ಸರ್ಕಾರವು 8561 ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಮತ್ತು ಆ ಮೂಲಕ ಅರ್ಜಿದಾರರನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತಿದೆ ಎಂದು ವಾದಿಸಲಾಗಿದೆ.
3. ಅಧಿಕೃತ ಪ್ರತಿವಾದಿಗಳ ಪರವಾಗಿ ಹಾಜರಾದ ವಿದ್ವತ್ಪೂರ್ಣ ಅಡ್ವೊಕೇಟ್ ಜನರಲ್, ಈ ರಿಟ್ ಅರ್ಜಿಯಲ್ಲಿನ ಕೆಲವು ಅರ್ಜಿದಾರರ ಅವಧಿ ಇನ್ನೂ ಜಾರಿಯಲ್ಲಿದ್ದರೂ, ಅವರ ಅವಧಿ ಆಗಸ್ಟ್ 2025 ರೊಳಗೆ ಕೊನೆಗೊಳ್ಳುವ ಸಾಧ್ಯತೆಯಿದೆ ಮತ್ತು ಆದ್ದರಿಂದ, ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಚಟುವಟಿಕೆಯನ್ನು ಉಳಿಸಿಕೊಳ್ಳಲು ಅತಿಥಿ ಉಪನ್ಯಾಸಕರ ನೇಮಕಾತಿಗೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ವಾದಿಸಿದರು. ಆದ್ದರಿಂದ, 8561 ಅತಿಥಿ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲು ಕೌನ್ಸೆಲಿಂಗ್ ಕೈಗೊಂಡರೂ, ಇನ್ನೂ ಜಾರಿಯಲ್ಲಿರುವ ಉಪನ್ಯಾಸಕರಿಗೆ ತೊಂದರೆಯಾಗುವುದಿಲ್ಲ ಮತ್ತು ಆ ಅತಿಥಿ ಉಪನ್ಯಾಸಕರ ನೇಮಕಾತಿ ಆದೇಶಗಳನ್ನು ನೀಡಲಾಗುವುದಿಲ್ಲ ಎಂದು ಅವರು ವಾದಿಸುತ್ತಾರೆ.
4. ಮೇಲೆ ತಿಳಿಸಿದ ಅರ್ಜಿಯನ್ನು ಗಮನದಲ್ಲಿಟ್ಟುಕೊಂಡು, ಅತಿಥಿ ಉಪನ್ಯಾಸಕರ ಅವಧಿ ಇನ್ನೂ ಅಂತ್ಯಗೊಂಡಿಲ್ಲದ ಅರ್ಜಿದಾರರ ಹಿತಾಸಕ್ತಿಯನ್ನು ಸಾಕಷ್ಟು ರಕ್ಷಿಸಲಾಗಿದೆ. ಆದ್ದರಿಂದ, ಅರ್ಜಿದಾರರು ತಮ್ಮ ಹುದ್ದೆಗಳಿಂದ ವಜಾಗೊಳಿಸಲ್ಪಡುತ್ತಾರೆ ಎಂಬ ಭಯವು ಆಧಾರರಹಿತವಾಗಿದೆ.
5. ಮೇಲೆ ತಿಳಿಸಿದ ಕಾರಣ, ರಾಜ್ಯ ಸರ್ಕಾರವು 8561 ಅತಿಥಿ ಉಪನ್ಯಾಸಕರ ಹುದ್ದೆಗಳ ಕೌನ್ಸೆಲಿಂಗ್ ಅನ್ನು ಕೈಗೊಳ್ಳಲು ಮತ್ತು ಅರ್ಜಿದಾರರು ಸಹ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುಮತಿ ನೀಡಿದೆ ಮತ್ತು ಅರ್ಹತೆ ಇದ್ದರೆ, ಅರ್ಜಿದಾರರು ಅತಿಥಿ ಉಪನ್ಯಾಸಕರಾಗಿ ನೇಮಕಗೊಳ್ಳಲು ಮತ್ತು ಮುಂದುವರಿಯಲು ಅರ್ಹರಾಗಿರುತ್ತಾರೆ.ಅತಿಥಿ ಉಪನ್ಯಾಸಕರಾಗಿ ಅರ್ಜಿದಾರರ ಪ್ರಸ್ತುತ ಅವಧಿ ಮುಗಿಯುವವರೆಗೆ, ಅವರನ್ನು ವಜಾಗೊಳಿಸಲಾಗುವುದಿಲ್ಲ ಮತ್ತು ಅರ್ಜಿದಾರರನ್ನು ಬದಲಿಸಲು ಬೇರೆ ಯಾವುದೇ ಆಯ್ಕೆದಾರರಿಗೆ ನೇಮಕಾತಿ ಆದೇಶವನ್ನು ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಪ್ರಸ್ತುತ ಚಾಲ್ತಿಯಲ್ಲಿರುವ 2024-25ನೇ ಶೈಕ್ಷಣಿಕ ಸಾಲಿಗೆ ಈ ಹಿಂದಿನ 2023-24ನೇ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದವರನ್ನು ಈಗಾಗಲೇ ಉಲ್ಲೇಖ-(4) ರಂತೆ ಮಾನ್ಯ ಉಚ್ಚ ನ್ಯಾಯಾಲಯವು ನೀಡಿರುವ ನಿರ್ದೇಶನದಂತೆ ಪ್ರಸ್ತುತ 2024-25ನೇ ಸಾಲಿನಲ್ಲಿ ಹೆಚ್ಚುವರಿ ಕಾರ್ಯಭಾರ ಲಭ್ಯವಿರುವ ವಿಷಯಗಳಿಗೆ ಮಾತ್ರ ಕೌನ್ಸಿಲಿಂಗ್ ನಡೆಸಲಾಗಿದ್ದು, ವಿವರ ಇಂತಿವೆ. ಅತಿಥಿ ಉಪನ್ಯಾಸಕರ ಆಯ್ಕೆಗೆ ಸಂಬಂಧಿಸಿದ ನಿಬಂಧನೆಗಳು ಈ ಕೆಳಗಿನಂತಿರುತ್ತವೆ;ಉಲ್ಲೇಖ-(5) ರಂತೆ ಲಭ್ಯವಿದ್ದ ಹೆಚ್ಚುವರಿ ಕಾರ್ಯಭಾರಕ್ಕನುಗುಣವಾಗಿ ಮುಂದುವರೆಸಲಾಗಿದೆ.
1. ಅತಿಥಿ ಉಪನ್ಯಾಸಕರ ಆಯ್ಕೆಗೆ ಸಂಬಂಧಿಸಿದಂತೆ, ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಅಭ್ಯರ್ಥಿಗಳು ಆನ್ಲೈನ್ ಅರ್ಜಿಗಳಲ್ಲಿ ನೀಡಿರುವ ವಿದ್ಯಾರ್ಹತೆ, ಸೇವಾ ಅನುಭವ ಮತ್ತಿತರೆ ವಿವರಗಳನ್ನು ಆಧರಿಸಿ ಈ ಕೆಳಕಂಡ ಮಾನದಂಡಗಳನ್ನಯ ರಾಜ್ಯವ್ಯಾಪಿ ವಿಷಯವಾರು Merit List ಅನ್ನು ಸಿದ್ಧಪಡಿಸಲಾಗಿದೆ.
2. ಅಭ್ಯರ್ಥಿಗಳು ಆನ್ಲೈನ್ ಕೌನ್ಸಿಲಿಂಗ್ನಲ್ಲಿ ಆಯ್ಕೆ ಮಾಡಿಕೊಂಡ ಕಾಲೇಜುಗ ಕೌನ್ಸಿಲಿಂಗ್ ಮೂಲಕ ಆಯ್ಕೆಯಾದ ಅಭ್ಯರ್ಥಿಗಳ ವಿಷಯವಾರು ಪಟ್ಟಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿರುತ್ತದೆ. ಆಯ್ಕೆಯಾದ ಅತಿಥಿ ಉಪನ್ಯಾಸಕರಿಗೆ ಆಯ್ಕೆಪಟ್ಟಿಯನ್ನು ಪ್ರಕಟಿಸಿದ ದಿನಾಂಕದಿಂದ ಕಾಲೇಜಿನಲ್ಲಿ ವರದಿ ಮಾಡಿಕೊಳ್ಳಲು 03 ಕೆಲಸದ ದಿನಗಳವರೆಗೆ ಮಾತ್ರ ಅವಕಾಶವಿರುತ್ತದೆ. ಪ್ರಾಂಶುಪಾಲರು, ಆಯ್ಕೆಯಾದ ಅತಿಥಿ ಉಪನ್ಯಾಸಕರ ಅಗತ್ಯ ದಾಖಲಾತಿಗಳನ್ನು ಪರಿಶೀಲಿಸಿ ಅತಿಥಿ ಉಪನ್ಯಾಸಕರನ್ನು ಕರ್ತವ್ಯಕ್ಕೆ ಹಾಜರುಪಡಿಸಿಕೊಳ್ಳುವುದು ಹಾಗೂ ಕರ್ತವ್ಯಕ್ಕೆ ಹಾಜರಾದ ಅತಿಥಿ ಉಪನ್ಯಾಸಕರ ಮಾಹಿತಿಯನ್ನು ಕಡ್ಡಾಯವಾಗಿ E.M.IS. ನಲ್ಲಿ upload ಮಾಡುವುದು.
3. ಆಯ್ಕೆಯಾದ ಅಭ್ಯರ್ಥಿಗಳನ್ನು ಅತಿಥಿ ಉಪನ್ಯಾಸಕರ ಕರ್ತವ್ಯಕ್ಕೆ ಹಾಜರುಪಡಿಸಿಕೊಳ್ಳುವ ಮುನ್ನ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ಸಲ್ಲಿಸಿರುವ ವಿವರಗಳಂತೆ ಅವರ ವಿದ್ಯಾರ್ಹತೆ, ಸಂಬಂಧಪಟ್ಟ ಪ್ರಾಧಿಕಾರದಿಂದ ನೀಡಿರುವ ವಿಕಲಚೇತನರ ಪ್ರಮಾಣ ಪತ್ರ, ಕಲ್ಯಾಣ ಕರ್ನಾಟಕ ಮೀಸಲಾತಿ ಪ್ರಮಾಣ ಪತ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರು ನೀಡಿರುವ ಸೇವಾ ಪ್ರಮಾಣ ಪತ್ರ ಹಾಗೂ ಇತರೆ ಅಗತ್ಯ ದಾಖಲೆಗಳನ್ನು ಮೂಲ ದಾಖಲೆಗಳೊಂದಿಗೆ ಪರಿಶೀಲಿಸಿ, ಸದರಿ ದಾಖಲೆಗಳು ಕ್ರಮಬದ್ಧವಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು.ಒಂದು ವೇಳೆ ಅಭ್ಯರ್ಥಿಗಳು ಸಲ್ಲಿಸುವ ದಾಖಲೆಗಳನ್ನು ಮೂಲ ದಾಖಲೆಗಳೊಂದಿಗೆ ಪರಿಶೀಲಿಸದ ಕರ್ತವ್ಯಕ್ಕೆ ಹಾಜರುಪಡಿಸಿಕೊಂಡಲ್ಲಿ/ ವ್ಯತ್ಯಾಸಗಳಾದಲ್ಲಿ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರನ್ನೇ ನೇರ ಹೊಣೆಗಾರರನ್ನಾಗಿಸಲಾಗುತ್ತದೆ.
4. ಆನ್ಲೈನ್ ಅರ್ಜಿಯಲ್ಲಿ ಕಲ್ಯಾಣ ಕರ್ನಾಟಕ ಮೀಸಲಾತಿ ಕೋರಿಕೆ ಸಲ್ಲಿಸಿ, ಅದರನ್ವಯ ಆಯ್ಕೆಗೊಂಡು ಸಂಬಂಧಪಟ್ಟ ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾಗುವ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಮೀಸಲಾತಿ ಪ್ರಮಾಣ ಪತ್ರವನ್ನು ಪ್ರಾಂಶುಪಾಲರ ಸಮಕ್ಷಮ ಹಾಜರುಪಡಿಸಲು ವಿಫಲರಾದಲ್ಲಿ ಅಥವಾ ಹಾಜರುಪಡಿಸಿದ ಪ್ರಮಾಣ ಪತ್ರವು ತಿರಸ್ಕೃತಗೊಂಡಲ್ಲಿ ಅಂತಹ ಅಭ್ಯರ್ಥಿಗಳನ್ನು ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಿಂದಲೇ ಅನರ್ಹಗೊಳಿಸಲಾಗುವುದು.
5. ಆಯ್ಕೆಯಾದ ಅತಿಥಿ ಉಪನ್ಯಾಸಕರು ಆನ್ಲೈನ್ ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದಲ್ಲಿ ಅಂತಹ ತಪ್ಪು ಮಾಹಿತಿ / ನ್ಯೂನ್ಯತೆಗಳಿಗೆ ಸಂಬಂದಪಟ್ಟ ಅತಿಥಿ ಉಪನ್ಯಾಸಕರೇ ಜವಾಬ್ದಾರರಾಗಿರುತ್ತಾರೆ.
ಆಯ್ಕೆಯಾದ ಅತಿಥಿ ಉಪನ್ಯಾಸಕರು ಕಾಲೇಜಿನಲ್ಲಿ ಹಾಜರುಪಡಿಸುವ ವಿದ್ಯಾರ್ಹತೆಯ ಅಂಕಪಟ್ಟಿಗಳು, ವಿಕಲಚೇತನರ ಪ್ರಮಾಣ ಪತ್ರ, ಕಲ್ಯಾಣ ಕರ್ನಾಟಕ ಮೀಸಲಾತಿ ಪ್ರಮಾಣ ಪತ್ರ ಸೇವಾ ಅವಧಿಯ ಪ್ರಮಾಣ ಪತ್ರಗಳು ಹಾಗೂ ಇತರೆ ಅಗತ್ಯ ದಾಖಲೆಗಳಲ್ಲಿ ತಪ್ಪು/ನ್ಯೂನ್ಯತೆ ಅಥವಾ ‘ನಕಲಿ’ ಎಂದು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಗಳನ್ನು ಕಾಲೇಜು ಹಂತದಲ್ಲಿ ಆಯ್ಕೆ ಪ್ರಕ್ರಿಯೆಯಿಂದ ಅನರ್ಹಗೊಳಿಸಿ, ಆ ಅಭ್ಯರ್ಥಿಗಳ ಮಾಹಿತಿಯನ್ನು E.M.LS. ನಲ್ಲಿ ‘Rejected’ ಎಂದು ಆಯ್ಕೆ ಮಾಡಿ Rejection ಗೆ ಕಾರಣ ನಮೂದಿಸಿ, upload ಮಾಡುವುದು.
6. 2024-25ನೇ ಶೈಕ್ಷಣಿಕ ಸಾಲಿಗೆ ಆಯ್ಕೆಗೊಳ್ಳುವ ಅತಿಥಿ ಉಪನ್ಯಾಸಕರನ್ನು ದಿನಾಂಕ: 02-08-2025 ರವರೆಗೆ ಮಾತ್ರ ಮುಂದುವರೆಸಿ, ನಂತರ ಕರ್ತವ್ಯದಿಂದ ಬಿಡುಗಡೆಗೊಳಿಸುವುದು.
7. ಅತಿಥಿ ಉಪನ್ಯಾಸಕರಿಗೆ 15/19 ಗಂಟೆಗಳಿಗಿಂತ ಕಡಿಮೆ ಕಾರ್ಯಭಾರವಿದ್ದಲ್ಲಿ ಎಷ್ಟು ಗಂಟೆಗಳ ಕಾರ್ಯಭಾರ ಲಭ್ಯವಿದೆಯೋ ಅದಕ್ಕೆ ಅನುಗುಣವಾಗಿ ಗೌರವಧನ ಪಾವತಿಸುವುದು.
8. ಆಯ್ಕೆಯಾದ ಅತಿಥಿ ಉಪನ್ಯಾಸಕರು ಆನ್-ಲೈನ್ ಅರ್ಜಿಯಲ್ಲಿ ನಮೂದಿಸಿರುವ ವಿದ್ಯಾರ್ಹತೆಗಳನ್ನು ಮಾತ್ರ ಪರಿಗಣಿಸಿ, ಗೌರವಧನವನ್ನು ನಿಗದಿಪಡಿಸತಕ್ಕದ್ದು. (ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕದಂದು ನಿಗಧಿತ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು ಹಾಗೂ ಅಂತಹ ವಿದ್ಯಾರ್ಹತೆಯ ಅಂಕಪಟ್ಟಿ/ಪ್ರಮಾಣ ಪತ್ರಗಳನ್ನು ಹೊಂದಿರಬೇಕು) ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಅವಧಿಯ ನಂತರ ಪಡೆಯುವ ಹೆಚ್ಚುವರಿ ವಿದ್ಯಾರ್ಹತೆಗಳಾದ ಪಿ.ಹೆಚ್.ಡಿ, ಎನ್.ಇ.ಟಿ./ಎಸ್.ಎಲ್.ಇ.ಟಿ. ಪದವಿಗಳನ್ನು ಅದೇ ಶೈಕ್ಷಣಿಕ ವರ್ಷದಲ್ಲಿ ಪರಿಗಣಿಸಿ, ಗೌರವಧನ ಪರಿಷ್ಕರಿಸಲು ಅವಕಾಶವಿರುವುದಿಲ್ಲ.
9. ಅತಿಥಿ ಉಪನ್ಯಾಸಕರ ಆಯ್ಕೆಗೆ ಸಲ್ಲಿಸುವ ವಿದ್ಯಾರ್ಹತೆಯ ಅಂಕಪಟ್ಟಿ/ಪಮಾಣ ಪತ್ರಗಳು ಪ್ರಮಾಣ ಪತ್ರಗಳು, ಅಂಗವಿಕಲತೆಯ ಪ್ರಮಾಣ ಪತ್ರ ಕಲ್ಯಾಣ ಕರ್ನಾಟಕ ಮೀಸಲಾತಿ ಪ್ರಮಾಣ ಪತ್ರ ಹಾಗೂ ಇನ್ನಿತರೆ ದಾಖಲೆಗಳು ‘ನಕಲಿ’ ಎಂದು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಗಳ ವಿರುದ್ಧ, ಕಾನೂನು ಕ್ರಮ ಜರುಗಿಸಿ, ಅವರನ್ನು ಅತಿಥಿ ಉಪನ್ಯಾಸಕರ ಆಯ್ಕೆಯಿಂದ ಶಾಶ್ವತವಾಗಿ ಅನರ್ಹಗೊಳಿಸಲಾಗುವುದು ಎಂಬುದನ್ನು ಮತ್ತೊಮ್ಮೆ ತಿಳಿಸಲಾಗಿದೆ.
10. ಕರ್ತವ್ಯಕ್ಕೆ ಹಾಜರಾದ ಅತಿಥಿ ಉಪನ್ಯಾಸಕರ ವಿವರಗಳನ್ನು ಅವಶ್ಯವಿರುವ ಕಾರ್ಯಭಾರದ ಮಾಹಿತಿಯೊಂದಿಗೆ ಪ್ರಾಂಶುಪಾಲರು ಆಯಾ ವಲಯದ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ಪ್ರಸ್ತಾವನೆಯನ್ನು ಸಲ್ಲಿಸಿ, ಅನುಮೋದನೆಯನ್ನು ಪಡೆಯುವುದು.
ಅತಿಥಿ ಉಪನ್ಯಾಸಕರ ಅನುಮೋದನೆಗಾಗಿ ಪ್ರಾಂಶುಪಾಲರಿಂದ ಸ್ವೀಕೃತವಾಗುವ ಪ್ರಸ್ತಾವನೆಗಳನ್ನು ಅವಶ್ಯವಿರುವ ಕಾರ್ಯಭಾರವನ್ನು ಪರಿಶೀಲಿಸಿ, ವಿಳಂಬಕ್ಕೆ ಆಸ್ಪದ ನೀಡದೆ. ಅನುಮೋದನೆ ನೀಡುವ ಬಗ್ಗೆ ಪ್ರಾದೇಶಿಕ ಜಂಟಿ ನಿರ್ದೇಶಕರು ಅಗತ್ಯ ಕ್ರಮವಹಿಸುವುದು.
11. ಅತಿಥಿ ಉಪನ್ಯಾಸಕರಿಗೆ ಪರೀಕ್ಷಾ ಕೆಲಸಕ್ಕೆ ಹಾಜರಾಗಲು ಒಂದು ಸೆಮಿಸ್ಟರ್ನಲ್ಲಿ 5 ದಿನಗಳಂತೆ ಎರಡು ಸೆಮಿಸ್ಮರ್ಗಳಿಗೆ ಒಟ್ಟು 10 ದಿನಗಳಿಗೆ ಅವಕಾಶ ನೀಡುವುದು.
12. ಅತಿಥಿ ಉಪನ್ಯಾಸಕರು ತಮಗೆ ವಹಿಸಿದ ಕಾರ್ಯಭಾರವನ್ನು ನಿರ್ವಹಿಸುವುದರೊಂದಿಗೆ ಪ್ರಾಂಶುಪಾಲರು ವಹಿಸುವ ಇತರೆ ಶೈಕ್ಷಣಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು.
13. ಕರ್ತವ್ಯ ನಿರತ ಅತಿಥಿ ಉಪನ್ಯಾಸಕರು 60 ವರ್ಷ ವಯೋಮಿತಿ ಪೂರೈಸಿದ ತಕ್ಷಣ ಅವರನ್ನು ಕರ್ತವ್ಯದಿಂದ ಪ್ರಾಂಶುಪಾಲರ ಹಂತದಲ್ಲಿಯೇ ಬಿಡುಗಡೆ ಮಾಡುವುದು ಹಾಗೂ ಕಾರ್ಯಭಾರದ ಮಾಹಿತಿಯನ್ನು ಕಡ್ಡಾಯವಾಗಿ E.M.I.S ನ workload page ನಲ್ಲಿ upload ಮಾಡುವುದು.
14. ಹೊಸ ನೇಮಕಾತಿ/ವರ್ಗಾವಣೆ/ನಿಯೋಜನೆ ಹಾಗೂ ಇನ್ನಿತರ ಕಾರಣದಿಂದಾಗಿ ಖಾಯಂ ಉಪನ್ಯಾಸಕರು ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾದಾಗ ಅಥವಾ ಸೆಮಿಸ್ಟರ್ ಅವಧಿಯಲ್ಲಿ ಕಾರ್ಯಭಾರ ಕಡಿಮೆಯಾದಾಗ ಅಥವಾ ಇತರೆ ಕಾರಣಗಳಿಂದ ಕಾರ್ಯಭಾರ ಕೊರತೆಯಾದಲ್ಲಿ ಆ ಕಾಲೇಜಿಗೆ ಸಂಬಂಧಪಟ್ಟ ವಿಷಯದಲ್ಲಿ ಕೊನೆಯದಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆಗೊಳಿಸುವುದು ಹಾಗೂ ಮಾಹಿತಿಯನ್ನು ಕಡ್ಡಾಯವಾಗಿ E.M.I.S. 2 No workload ১০ upload .
15. ಖಾಯಂ ಅಧ್ಯಾಪಕರು ವರ್ಗಾವಣೆ/ನಿಯೋಜನೆ/ವಯೋನಿವೃತ್ತಿ/ಸ್ವಯಂ ನಿವೃತ್ತಿ/ ನಿಧನ ಹಾಗೂ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳು ವಿವಿಧ ಕಾರಣಗಳಿಂದ ಕರ್ತವ್ಯದಿಂದ ಬಿಡುಗಡೆಯಾದಾಗ ಲಭ್ಯವಾಗುವ ಕಾರ್ಯಭಾರದ ಮಾಹಿತಿಯನ್ನು ? E.M.I.S. 2 workload page ? upload
16. ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಗ್ರಂಥಪಾಲಕರ ಹುದ್ದೆಗಳು ಖಾಲಿ ಇರುವ ಕಾಲೇಜುಗಳಲ್ಲಿ ಅತಿಥಿ ದೈಹಿಕ ಶಿಕ್ಷಣ ಹಾಗೂ ಅತಿಥಿ ಗ್ರಂಥಪಾಲಕರ ಸೇವೆಯನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದ್ದು, ಅವರಿಗೆ 19 ಗಂಟೆಗಳ ಕಾರ್ಯಭಾರವನ್ನು ನಿಗಧಿಗೊಳಿಸಲಾಗಿದೆ. ಅತಿಥಿ ದೈಹಿಕ ಶಿಕ್ಷಣ ಬೋಧಕರು ಹಾಗೂ ಅತಿಥಿ ಗ್ರಂಥಪಾಲಕರುಗಳಿಗೆ ಪ್ರಾಂಶುಪಾಲರು ನಿಗಧಿಗೊಳಿಸುವ ಕಾರ್ಯಗಳನ್ನು ಖಾಯಂ ಬೋಧಕರ ಮೇಲುಸ್ತುವಾರಿಯಲ್ಲಿ ನಿರ್ವಹಿಸುವುದು.
17. ಪ್ರಾಂಶುಪಾಲರು, ಅತಿಥಿ ದೈಹಿಕ ಶಿಕ್ಷಣ ಬೋಧಕರು ಹಾಗೂ ಅತಿಥಿ ಗ್ರಂಥಪಾಲಕರಿಗೆ ಯಾವುದೇ ಆರ್ಥಿಕ ವ್ಯವಹಾರಗಳ ಪ್ರತ್ಯಾಯೋಜನೆ ನೀಡುವಂತಿಲ್ಲ.
ವಿದ್ಯಾರ್ಥಿಗಳ ಪ್ರಯಾಣ ಭತ್ಯೆ, ದಿನ ಭತ್ಯೆ ಹಾಗೂ ಇನ್ನಿತರ ವೆಚ್ಚಗಳಿಗೆ ಹಾಗೂ ದಾಸ್ತಾನುಗಳಿಗೆ ಸಂಬಂಧಿಸಿದಂತೆ ಖಾಯಂ ಬೋಧಕರ ಮೇಲುಸ್ತುವಾರಿಯಲ್ಲಿ ಲೆಕ್ಕಪತ್ರಗಳನ್ನು ನಿರ್ವಹಿಸುವುದು ಹಾಗೂ ಅತಿಥಿ ದೈಹಿಕ ಶಿಕ್ಷಣ ಬೋಧಕರು ಹಾಗೂ ಅತಿಥಿ ಗ್ರಂಥಪಾಲಕರು ತಮಗೆ ನೀಡಿರುವ ದಾಸ್ತಾನಿನ ನಿರ್ವಹಣಾ ವರದಿಯನ್ನು ಮೇಲುಸ್ತುವಾರಿ ಬೋಧಕರ ಮೂಲಕ ಪ್ರಾಂಶುಪಾಲರಿಗೆ ಬಿಡುಗಡೆ ಹೊಂದುವ ಸಮಯದಲ್ಲಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
18. ಅತಿಥಿ ಉಪನ್ಯಾಸಕರನ್ನು ಹೆಚ್ಚುವರಿ ಕಾರ್ಯಭಾರಕ್ಕನುಗುಣವಾಗಿ ತಾತ್ಕಾಲಿಕ ವ್ಯವಸ್ಥೆಯಡಿ ಆಯ್ಕೆ ಮಾಡಿಕೊಳ್ಳುವುದರಿಂದ ಸದರಿ ತಾತ್ಕಾಲಿಕ ಸೇವೆಯನ್ನು ಪರಿಗಣಿಸಿ, ಖಾಯಂ ಮಾಡಲು ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನೇಮಕಾತಿಯಲ್ಲಿ ಆದ್ಯತೆ ನೀಡಲು ಅವಕಾಶ ಇರುವುದಿಲ್ಲ ಹಾಗೂ ಈ ಬಗ್ಗೆ ಕೃಪಾಂಕ ಕೋರಲು ಸಹ ಯಾವುದೇ ಹಕ್ಕು ಇರುವುದಿಲ್ಲ.
19. ಕಾಲೇಜಿನಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ಅತಿಥಿ ಉಪನ್ಯಾಸಕರಿಂದ ಈ ಸುತ್ತೋಲೆಗೆ ಲಗತ್ತಿಸಿರುವ ಅನುಬಂಧ-1 ರಲ್ಲಿ ತಿಳಿಸಿರುವಂತೆ ಮುಚ್ಚಳಿಕೆಯನ್ನು ಪಡೆಯತಕ್ಕದ್ದು.
20. ಕೆಲವು ಅತಿಥಿ ಉಪನ್ಯಾಸಕರು ನಕಲಿ ದಾಖಲೆಗಳನ್ನು ಸಲ್ಲಿಸಿ ಅತಿಥಿ ಉಪನ್ಯಾಸಕರಾಗಿ ಆಯ್ಕೆಯಾಗುತ್ತಿರುವುದಾಗಿಯೂ ಹಾಗೂ ಅತಿಥಿ ಉಪನ್ಯಾಸಕರ ಅಶಿಸ್ತು/ದುರ್ನಡತೆ/ಇತರ ಕ್ರಮಗಳಿಂದಾಗಿ ಪಾಠ ಪ್ರವಚನಗಳಿಗೆ/ಆಡಳಿತಾತ್ಮಕವಾಗಿ ತೊಂದರೆಯಾಗುತ್ತಿರುವ ಬಗ್ಗೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಆಯಾ ವಲಯದ ಜಂಟಿ ನಿರ್ದೇಶಕರನ್ನು ಸದರಿ ಅತಿಥಿ ಉಪನ್ಯಾಸಕರ ಶಿಸ್ತು ಪ್ರಾಧಿಕಾರವನ್ನಾಗಿ ನೇಮಿಸಲಾಗಿದೆ.
21. ಅತಿಥಿ ಉಪನ್ಯಾಸಕರುಗಳು ಯಾವುದೇ ಮನವಿ/ದೂರು/ಇತರೆ ಯಾವುದೇ ಪತ್ರಗಳನ್ನು ಕಡ್ಡಾಯವಾಗಿ ಕಾಲೇಜಿನ ಪ್ರಾಂಶುಪಾಲರಿಗೆ ಸಲ್ಲಿಸತಕ್ಕದ್ದು. ಪ್ರಾಂಶುಪಾಲರು ಸೂಕ್ತ ಕ್ರಮ ಜರುಗಿಸದಿದ್ದಲ್ಲಿ ಸಂಬಂಧಪಟ್ಟ ಪ್ರಾದೇಶಿಕ ಜಂಟಿ ನಿರ್ದೇಶಕರ ಕಛೇರಿಗೆ ಪತ್ರ ವ್ಯವಹಾರ ನಡೆಸತಕ್ಕದ್ದು.
22. ಅತಿಥಿ ಉಪನ್ಯಾಸಕರು ಸಲ್ಲಿಸುವ ಪತ್ರಗಳಿಗೆ ಸರ್ಕಾರ/ಈ ಕಛೇರಿಯ ಸುತ್ತೋಲೆಗಳಲ್ಲಿ ಸೂಚಿಸಿರುವಂತೆ ಪ್ರಾಂಶುಪಾಲರ ಹಂತದಲ್ಲಿ ಸೂಕ್ತ ಮಾಹಿತಿಯನ್ನು ನೀಡುವುದು. ಒಂದು ವೇಳೆ ತಮ್ಮ ಹಂತದಲ್ಲಿ ಸಾಧ್ಯವಾಗದಿದ್ದಲ್ಲಿ ಸದರಿ ಪತ್ರವನ್ನು ಆಯಾ ವಲಯದ ಪ್ರಾದೇಶಿಕ ಜಂಟಿ ನಿರ್ದೇಶಕರ ಕಛೇರಿಗೆ ಕಳುಹಿಸುವುದು.
23. ಅತಿಥಿ ಉಪನ್ಯಾಸಕರ ವಿರುದ್ಧ ಗಂಭೀರ ಆರೋಪಗಳು ಅಧಿಕೃತವಾಗಿ ಸ್ವೀಕೃತವಾದಲ್ಲಿ ಅಥವಾ ಅತಿಥಿ ಉಪನ್ಯಾಸಕರಿಂದ ಅಶಿಸ್ತು ವರ್ತನೆ/ಪಾಠ ಪ್ರವಚನೆಗಳಿಗೆ ತೊಂದರೆಯಾದಲ್ಲಿ ಅಥವಾ ಪಾಠ-ಪ್ರವಚನಗಳನ್ನು ಸರಿಯಾಗಿ ನಿರ್ವಹಿಸದಿದ್ದಲ್ಲಿ ಅಂತಹ ಅತಿಥಿ ಉಪನ್ಯಾಸಕರಿಗೆ ಪ್ರಾಂಶುಪಾಲರ ಹಂತದಲ್ಲಿ ಒಂದು ಭಾರಿಗೆ ಎಚ್ಚರಿಕೆ ನೋಟೀಸನ್ನು ನೀಡುವುದು.
ಆದಾಗ್ಯೂ ಸದರಿ ಅತಿಥಿ ಉಪನ್ಯಾಸಕರು ಅದೇ ಚಟುವಟಿಕೆಗಳನ್ನು ಮರುಕಳಿಸಿದರೆ ಆಯಾ ವಲಯದ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ಸೂಕ್ತ ದಾಖಲೆಗಳೊಂದಿಗೆ ವಿವರವಾದ ವರದಿಯನ್ನು ಸಲ್ಲಿಸತಕ್ಕದ್ದು.
24. ಜಂಟಿ ನಿರ್ದೇಶಕರು, ಅತಿಥಿ ಉಪನ್ಯಾಸಕರ ವಿರುದ್ಧ ಪ್ರಾಂಶುಪಾಲರುಗಳಿಂದ ಸ್ವೀಕೃತವಾಗುವ ದೂರು/ವರದಿಗಳನ್ನು ವಿಳಂಬಕ್ಕೆ ಆಸ್ಪದ ನೀಡದೆ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಕಾಲೇಜಿಗೆ ಭೇಟಿ ನೀಡಿ, ಒಂದು ವೇಳೆ ದೂರು/ವರದಿಯಲ್ಲಿನ ಆರೋಪಗಳು ಸಾಬೀತಾದಲ್ಲಿ ಅಂತಹ ಅತಿಥಿ ಉಪನ್ಯಾಸಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲು జంటి ನಿರ್ದೇಶಕರೇ ಪ್ರಾಂಶುಪಾಲರುಗಳಿಗೆ ಸೂಚಿಸುವುದು ಹಾಗೂ ವರದಿಯನ್ನು ಈ ಕಛೇರಿಗೆ ಸಲ್ಲಿಸುವುದು.
25. ಅತಿಥಿ ಉಪನ್ಯಾಸಕರು ಸಲ್ಲಿಸಿರುವ ದಾಖಲೆಗಳು ನಕಲಿ ಎಂದು ತಿಳಿಸಿ ಸೂಕ್ತ ದಾಖಲೆಗಳೊಂದಿಗೆ ಪತ್ರ/ದೂರುಗಳು ಸ್ವೀಕೃತವಾದಲ್ಲಿ (ಅನಾಮದೇಯ ಪತ್ರ/ದೂರುಗಳನ್ನು ಪರಿಗಣಿಸುವಂತಿಲ್ಲ) ಪ್ರಾಂಶುಪಾಲರು ಆಯಾ ವಲಯದ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ಅಂತಹ ಅತಿಥಿ ಉಪನ್ಯಾಸಕರ ದಾಖಲೆಗಳನ್ನು ಕಳುಹಿಸತಕ್ಕದ್ದು ಹಾಗೂ ಪರಿಶೀಲನಾ ಅವಧಿಯಲ್ಲಿ ಗೌರವಧನ ಪಾವತಿಯನ್ನು ತಡೆಹಿಡಿಯುವುದು. Page 5 of 7
26. ಜಂಟಿ ನಿರ್ದೇಶಕರು, ಅತಿಥಿ ಉಪನ್ಯಾಸಕರು ಸಲ್ಲಿಸುವ ಅಂಕಪಟ್ಟಿ/ಪ್ರಮಾಣ ಪತ್ರಗಳು, ಅಂಗವಿಕಲ ಪ್ರಮಾಣ ಪತ್ರ, ಕಲ್ಯಾಣ ಕರ್ನಾಟಕ ಮೀಸಲಾತಿ ಪ್ರಮಾಣ ಪತ್ರ ಹಾಗೂ ಇತರೆ ದಾಖಲೆಗಳು ‘ನಕಲಿ’ ಎಂದು ತಿಳಿಸಿ ಸೂಕ್ತ ದಾಖಲೆಗಳೊಂದಿಗೆ ಪತ್ರ/ದೂರುಗಳು ಸ್ವೀಕೃತವಾದಲ್ಲಿ (ಅನಾಮದೇಯ ಪತ್ರ/ದೂರುಗಳನ್ನು ಪರಿಗಣಿಸುವಂತಿಲ್ಲ) ಅಂತಹ ಅತಿಥಿ ಉಪನ್ಯಾಸಕರ ಅಂಕಪಟ್ಟಿ/ಪ್ರಮಾಣ ಪತ್ರಗಳನ್ನು ಸಂಬಂಧಿಸಿದ ವಿಶ್ವವಿದ್ಯಾಲಯಗಳಿಂದ ಹಾಗೂ ಇತರ ದಾಖಲೆಗಳ ಕುರಿತಂತೆ ಸಂಬಂಧಪಟ್ಟ ಪ್ರಾಧಿಕಾರಗಳಿಂದ ನೈಜತೆ ವರದಿಯನ್ನು ಪಡೆಯತಕ ಹಾಗೂ ನೈಜತೆ ವರದಿಗೆ ಸಂಬಂಧಿಸಿದ ಶುಲ್ಕವನ್ನು ಸಂಬಂಧಪಟ್ಟ ಅತಿಥಿ ಉಪನ್ಯಾಸ ಪಾವತಿಸುವಂತೆ ಸೂಚಿಸುವುದು.
ಒಂದು ವೇಳೆ ನೈಜತೆ ವರದಿಯು ನಕಲಿ ಎಂದು ಸಾಬೀತಾದಲ್ಲಿ ಅಂತಹ ಅತಿಥಿ ಉಪನ್ಯಾಸಕರ ವಿರುದ್ಧ ಸ್ಥಳಿಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಕಾಲೇಜಿನ ಪ್ರಾಂಶುಪಾಲರಿಗೆ ಸೂಚಿಸುವುದು.
27. ಪ್ರಸ್ತುತ ಸಾಲಿಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ಅತಿಥಿ ಉಪನ್ಯಾಸಕರು ಪ್ರಾಂಶುಪಾಲರ ಗಮನಕ್ಕೆ ತಾರದೆ ಸತತವಾಗಿ 08 ದಿನಗಳಿಗಿಂತಲೂ ಹೆಚ್ಚಿನ ಅವಧಿಗೆ ಗೈರು ಹಾಜರಾದಲ್ಲಿ ಅಂತಹ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಕೈಬಿಡಲು ಸಂಬಂಧಪಟ್ಟ ಪ್ರಾಂಶುಪಾಲರು E.M.I.S. ನಲ್ಲಿ ‘Long Absent’ ಎಂದು ನಮೂದಿಸಿ upload ಮಾಡುವುದು..
28. ದಿನಾಂಕ:24.01.2022 ರಲ್ಲಿ ನೀಡಿರುವ ಷರತ್ತುಗಳು ಮತ್ತು ಮಾರ್ಗಸೂಚಿಗಳನ್ನು ಹಾಗೂ ಸರ್ಕಾರ/ ಇಲಾಖೆಯಿಂದ ಅತಿಥಿ ಉಪನ್ಯಾಸಕರ ಸಂಬಂಧ ಹೊರಡಿಸಲಾಗಿರುವ ಹಾಗೂ ಕಾಲ ಕಾಲಕ್ಕೆ ಹೊರಡಿಸಲಾಗುವ ಸುತ್ತೋಲೆ/ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
Website Link:
https://dce.karnataka.gov.in/info-3/Online+Application+for+the+selection+of+Guest+Faculty+2024-25/en