04/07/2025 7:44 AM

Translate Language

Home » ಲೈವ್ ನ್ಯೂಸ್ » ಅತಿಥಿ ಅಧ್ಯಾಪಕರಿಗೆ ಸರ್ಕಾರ ₹5 ಲಕ್ಷ ಗ್ರಾಚ್ಯುಟಿ Gratuity ರಾಜ್ಯ ಸರ್ಕಾರ ಆದೇಶ. Formate

ಅತಿಥಿ ಅಧ್ಯಾಪಕರಿಗೆ ಸರ್ಕಾರ ₹5 ಲಕ್ಷ ಗ್ರಾಚ್ಯುಟಿ Gratuity ರಾಜ್ಯ ಸರ್ಕಾರ ಆದೇಶ. Formate

Facebook
X
WhatsApp
Telegram

Gratuity turm and conditions with Formate

ಬೆಂಗಳೂರು.02.ಜುಲೈ.25:-ಕರ್ನಾಟಕ ಸರ್ಕಾರವು ಪದವಿ ಕಾಲೇಜುಗಳಲ್ಲಿನ ಅತಿಥಿ ಅಧ್ಯಾಪಕರಿಗೆ 60 ವರ್ಷ ತುಂಬಿದ ನಂತರ ನಿವೃತ್ತಿ ಪ್ರಯೋಜನವಾಗಿ ₹5 ಲಕ್ಷ ಗ್ರಾಚ್ಯುಟಿಯನ್ನು ನೀಡುತ್ತಿದೆ. ಈ ಯೋಜನೆ ಜನವರಿ 1, 2024 ರಿಂದ ಜಾರಿಗೆ ಬರಲಿದೆ. ಇದು ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳೆರಡರಲ್ಲೂ ಅತಿಥಿ ಅಧ್ಯಾಪಕರಿಗೆ ಅನ್ವಯಿಸುತ್ತದೆ. ಈ ನಿರ್ಧಾರವು ಅತಿಥಿ ಉಪನ್ಯಾಸಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನಗಳ ಭಾಗವಾಗಿದೆ, ಇದರಲ್ಲಿ ನಿಯಮಿತೀಕರಣ, ವೇತನ ಹೆಚ್ಚಳ ಮತ್ತು ಇತರ ಪ್ರಯೋಜನಗಳ ಬೇಡಿಕೆಗಳು ಸೇರಿವೆ.

The ₹5 lakh gratuity is a one-time lump sum payment. This benefit is in addition to the salary hike announced for guest lecturers and other potential benefits like health insurance. The UGC norms mandate the HICO

ಅತಿಥಿ ಅಧ್ಯಾಪಕರ ಪ್ರಮುಖ ಬೇಡಿಕೆಯೆಂದರೆ ಅವರ ಸೇವೆಗಳನ್ನು ಕ್ರಮಬದ್ಧಗೊಳಿಸುವುದು, ಇದನ್ನು ಸರ್ಕಾರವೂ ಪರಿಗಣಿಸುತ್ತಿದೆ.

ಸರ್ಕಾರ ಆದೇಶ:

ಉಲ್ಲೇಖ-(1) ರ ಸರ್ಕಾರದ ಆದೇಶಗಳಲ್ಲಿ ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ವಿವಿಧ ಸೌಲಭ್ಯಗಳನ್ನು ದಿನಾಂಕ:01.01.2024 ರಿಂದ ಜಾರಿಗೆ ಬರುವಂತೆ ಮಂಜೂರು ಮಾಡಿ ಆದೇಶಿಸಲಾಗಿದೆ. ಆ ಪೈಕಿ ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ 60 ವರ್ಷ ಪೂರೈಸಿದ ಅತಿಥಿ ಉಪನ್ಯಾಸಕರುಗಳಿಗೆ ಭದ್ರತಾ ರೂಪದಲ್ಲಿ ವಾರ್ಷಿಕವಾಗಿ ರೂ.50,000/- ಗಳಂತೆ ಗರಿಷ್ಠ ರೂ.5.00 ಲಕ್ಷಗಳ ಮೊತ್ತದ ಇಡಿಗಂಟಿನ ಸೌಲಭ್ಯವನ್ನು ನೀಡಲು ಮಂಜೂರಾತಿ ನೀಡಲಾಗಿದೆ.

ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 9 ವೆಚ್ಚ-8/2024, ದಿನಾಂಕ:26.05.2025 ರಲ್ಲಿನ ಸಹಮತಿಯ ಮೇರೆಗೆ ಹೊರಡಿಸಲಾಗಿರುವ ಉಲ್ಲೇಖ-(2) ರ ಸರ್ಕಾರದ ಆದೇಶದಲ್ಲಿ ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, 60 ವರ್ಷ ವಯೋಮಿತಿ ಪೂರೈಸಿದ ಮತ್ತು ಮರಣ ಹೊಂದಿದ ಅತಿಥಿ ಉಪನ್ಯಾಸಕರಗಳಿಗೆ ಇಡಿಗಂಟು ಸೌಲಭ್ಯವನ್ನು ಈ ಕೆಳಕಂಡ ಮಾರ್ಗಸೂಚಿಗಳೊಂದಿಗೆ ಅನುಷ್ಠಾನಗೊಳಿಸಲು ಸರ್ಕಾರದ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿದೆ.

1. ಇಡಿಗಂಟು ಯೋಜನೆಯು ದಿನಾಂಕ:01-01-2024 ರಿಂದ ಜಾರಿಗೆ ಬಂದಿದ್ದು, ಸದರಿ ದಿನಾಂಕದಂದು ಅಥವಾ ನಂತರದಲ್ಲಿ 60 ವರ್ಷ ವಯೋಮಿತಿ ಪೂರೈಸಿದ ಅಥವಾ ಮರಣ ಹೊಂದಿದ ಅತಿಥಿ ಉಪನ್ಯಾಸಕರಿಗೆ ಮಾತ್ರ ಅನ್ವಯಿಸುತ್ತದೆ.

2. ಯೋಜನೆ ಜಾರಿಯಾಗುವ ದಿನಾಂಕ:01-01-2024ಕ್ಕೆ ಹಿಂದಿನ 5 ವರ್ಷಗಳಲ್ಲಿ ಕನಿಷ್ಠ 01 ವರ್ಷ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರಬೇಕು ಅಥವಾ ದಿ.01-01-2024ರ ನಂತರ 60 ವರ್ಷ ವಯೋಮಿತಿ ಪೂರೈಸಿದ ಅಥವಾ ಮರಣ ಹೊಂದಿದ ಅತಿಥಿ ಉಪನ್ಯಾಸಕರು, ಅವರುಗಳು 60 ವರ್ಷ ವಯೋಮಿತಿ ಪೂರೈಸಿದ ಅಥವಾ ಮರಣ ಹೊಂದಿದ ದಿನಾಂಕದಿಂದ ಹಿಂದಿನ 5 ವರ್ಷಗಳಲ್ಲಿ ಕನಿಷ್ಠ 01 ವರ್ಷ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರಬೇಕು.

3. ಇಡಿಗಂಟು ಸೌಲಭ್ಯವನ್ನು ಕೈಮು ಮಾಡುವ ಅತಿಥಿ ಉಪನ್ಯಾಸಕರು ಸರ್ಕಾರ ಅಥವಾ ಸರ್ಕಾರದ ಅನುದಾನಕ್ಕೊಳಪಟ್ಟ ಸಂಸ್ಥೆಗಳಲ್ಲಿ ನೇಮಕಾತಿ ಹೊಂದಿ ಸೇವೆ ಸಲ್ಲಿಸಿದಲ್ಲಿ ಅಂತಹ ಅತಿಥಿ ಉಪನ್ಯಾಸಕರಿಗೆ ಈ ಇಡಿಗಂಟು ಯೋಜನೆಯು ಅನ್ವಯವಾಗುವುದಿಲ್ಲ.

4. ಇಡಿಗಂಟು ಯೋಜನೆಗೆ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ ಅನುಭವವನ್ನು ಆಯಾ ಕಾಲೇಜು ಪ್ರಾಂಶುಪಾಲರು ನಿಗಧಿತ ನಮೂನೆಯಲ್ಲಿ ನೀಡಿದ ಸೇವಾ ಪ್ರಮಾಣ ಪತ್ರಗಳ ಆಧಾರದಲ್ಲಿ ಲೆಕ್ಕ ಹಾಕಲಾಗುವುದು.

5. ಇಡಿಗಂಟು ಯೋಜನೆಯು ಪ್ರತಿ ವರ್ಷಕ್ಕೆ ರೂ.50,000/- ದರದಲ್ಲಿದ್ದು, ಅತಿಥಿ ಉವನ್ಯಾಸಕರ ಸೇವೆಯ ವರ್ಷಗಳ ಸಂಖ್ಯೆಗೆ ಅನುಗುಣವಾಗಿದ್ದು ಗರಿಷ್ಠ ಮೌಲ್ಯ ರೂ.5,00,000/- ಆಗಿರುತ್ತದೆ.

6. ಪ್ರತಿ ಶೈಕ್ಷಣಿಕ ವರ್ಷದ 8 ತಿಂಗಳು ಮತ್ತು ಹೆಚ್ಚಿನ ಅವಧಿಯ (ಅಂದರೆ, ಶೈಕ್ಷಣಿಕ ವರ್ಷದಲ್ಲಿ 240 ದಿನಗಳ) ಸೇವೆಯನ್ನು ಒಂದು ವರ್ಷ ಎಂದು ಪರಿಗಣಿಸಲಾಗುವುದು. ಶೈಕ್ಷಣಿಕ ವರ್ಷದಲ್ಲಿನ 8 ತಿಂಗಳಿಗಿಂತ ಕಡಿಮೆ ಅವಧಿಯ ಸೇವೆಯನ್ನು ಭಾಗಶಃ ವರ್ಷವೆಂದೂ ಪರಿಗಣಿಸಿ ಒಟ್ಟು ಸೇವಾವಧಿಗೆ ಪರಿಗಣಿಸಲಾಗುವುದು.

7. ಮೇಲಿನ ನಿಯಮಗಳಂತೆ ಅತಿಥಿ ಉಪನ್ಯಾಸಕರು ಇಡಿಗಂಟು ಯೋಜನೆಗೆ ಅರ್ಹರಿದ್ದು ಮರಣ ಹೊಂದಿದ್ದಲ್ಲಿ ಅವರಿಂದ ನಾಮನಿರ್ದೇಶನಗೊಂಡಿರುವ ವ್ಯಕ್ತಿಗೆ ಇಡಿಗಂಟಿನ ಮೊತ್ತವನ್ನು ನೀಡಲಾಗುವುದು ಅಥವಾ ಅಂತಹ ಅರ್ಹ ಅತಿಥಿ ಉಪನ್ಯಾಸಕರ ಕುಟುಂಬದ ಕಾನೂನುಬದ್ಧ ವಾರಸುದಾರರ (Legal Heirs) ಬ್ಯಾಂಕ್ ಖಾತೆಗೆ ಇಡಿಗಂಟು ಮೊತ್ತವನ್ನು ವರ್ಗಾಯಿಸುವುದು.

8. ಈ ಮೇಲಿನ ನಿಯಮಗಳನ್ವಯ ಅರ್ಹ ಅತಿಥಿ ಉಪನ್ಯಾಸಕರು ಇಡಿಗಂಟು ಕೈಮು ಪ್ರಸ್ತಾವನೆಯನ್ನು ಸಂಬಂಧಪಟ್ಟ ಕಾಲೇಜಿನ (ಅಂದರೆ 60 ವರ್ಷ ಪೂರೈಸುವ ವರ್ಷದಲ್ಲಿ/ಪೂರ್ವದಲ್ಲಿ ಕರ್ತವ್ಯ ನಿರ್ವಹಿಸಿದ ಕಾಲೇಜು) ಪ್ರಾಂಶುಪಾಲರ ಮೂಲಕ ಸಲ್ಲಿಸುವುದು.

ಈ ಹಿನ್ನೆಲೆಯಲ್ಲಿ, ಉಲ್ಲೇಖ-(2) ರ ಸರ್ಕಾರದ ಆದೇಶದಲ್ಲಿ ಹೊರಡಿಸಿರುವ ಮಾರ್ಗಸೂಚಿಗಳನ್ವಯ ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಪುಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, 60 ವರ್ಷ ವಯೋಮಿತಿ ಪೂರೈಸಿದ ಅಥವಾ ಮರಣ ಹೊಂದಿದ ಅತಿಥಿ ಉಪನ್ಯಾಸಕರ ಪರವಾಗಿ ಅವರಿಂದ ನಾಮನಿರ್ದೇಶನಗೊಂಡಿರುವ ಕುಟುಂಬ ಸದಸ್ಯರಿಂದ ಪ್ರಸ್ತಾವನೆಯನ್ನು ಈ ಸುತ್ತೋಲೆಯೊಂದಿಗೆ ಲಗತ್ತಿಸಿರುವ ನಮೂನೆಯಲ್ಲಿ ಸಂಬಂಧಪಟ್ಟ ಕಾಲೇಜಿನ (ಅಂದರೆ 60 ವರ್ಷ ಪೂರೈಸುವ ವರ್ಷದಲ್ಲಿ/ಪೂರ್ವದಲ್ಲಿ ಕರ್ತವ್ಯ ನಿರ್ವಹಿಸಿದ ಕಾಲೇಜು) ಪ್ರಾಂಶುಪಾಲರ ಮೂಲಕ ಸಲ್ಲಿಸುವಂತೆ ಸೂಚಿಸಲಾಗಿದೆ.

ಈಗಾಗಲೇ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದಾಗ್ಯೂ ಸಹ ಮೇಲೆ ತಿಳಿಸಿದಂತೆ ಈ ಸುತ್ತೋಲೆಯೊಂದಿಗೆ ಲಗತ್ತಿಸಿರುವ ನಮೂನೆಯಲ್ಲಿ ಹೊಸದಾಗಿ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!