ಬೆಂಗಳೂರು.17.ಮಾರ್ಚ್.26: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವು ವರ್ಷ ಕೆಲಸ ಮಾಡಿ ಯುಜಿಸಿ ಅರ್ಹತೆ ಇಲ್ಲವೆಂಬ ಕಾರಣಕ್ಕೆ 2025ಗೆ 26ನೇ ಸಾಲಿನ ಕೆಲಸ ಕಳೆದುಕೊಂಡ ಅತಿಥಿ ಉಪನ್ಯಾಸಕರಿಗೆ ಮುಂಬರುವ 2026-27ನೇ ಶೈಕ್ಷಣಿಕ ಸಾಲಿನಿಂದಲೇ ಪರ್ಯಾಯ ಕೆಲಸ ನೀಡಲು ಚಿಂತನೆ ನಡೆದಿದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಹೇಳಿದರು.
ವಿಧಾನಪರಿಷತ್ನಲ್ಲಿ ಜೆಡಿಎಸ್ ನ ಎಸ್.ಎಲ್.ಭೋಜೇಗೌಡ ಅವರು ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ‘ಪ್ರಥಮ ದರ್ಜೆ ಕಾಲೇಜುಗಳಲ್ಲಿ ಬೋಧಕರಾಗಿ ಕೆಲಸ ಮಾಡುವ ಎಲ್ಲರೂ ಸ್ನಾತಕೋತ್ತರ ಪದವಿಯ ಜತೆಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್ಇಟಿ) ಇಲ್ಲವೇಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್) ತೇರ್ಗಡೆಯಾಗಿರಬೇಕು, ಪಿಎಚ್.ಡಿ ಪಡೆದಿರಬೇಕು ಎನ್ನುವುದು ಯುಜಿಸಿ ನಿಯಮ. ಕೋರ್ಟ್ ಸಹ ನಿಯಮವನ್ನು ಎತ್ತಿಹಿಡಿದ ಕಾರಣ ಅರ್ಹತೆ ಇಲ್ಲದ ಸುಮಾರು 5,000 ಅತಿಥಿ ಉಪನ್ಯಾಸಕರನ್ನು ಕೈಬಿಡಲಾಗಿತ್ತು’ ಎಂದರು.
‘ಅರ್ಹತೆ ಇದ್ದವರು ಸಿಗದೇ ಇದ್ದಾಗ ನೇಮಕಾತಿ ಮಾಡಿಕೊಳ್ಳಲು ಕೋರ್ಟ್ ಅವಕಾಶ ನೀಡಿದೆ. ಆದರೆ, ಪ್ರತಿಬಾರಿಯೂ ಸರ್ಕಾರ ಅನುಮತಿ ಪಡೆದು-ಕೊಳ್ಳಬೇಕು. ಎರಡು ದಶಕ ಅತಿಥಿ ಉಪನ್ಯಾಸಕಾರಿ ಬೋಧನೆ ಮಾಡಿದ ಅವರ ಸೇವೆಯನ್ನು ಸಹಾನುಭೂತಿ, ಮಾನವೀಯ ನೆಲೆಯಲ್ಲಿ ಪರಿಗಣಿಸಿ, ಗೌರವಯುತವಾದ ಪರ್ಯಾಯ ಕೆಲಸಗಳಿಗೆ ಬಳಸಿಕೊಳ್ಳಲಾಗುವುದು. ಈ ಕುರಿತು ಶೀಘ್ರ ನಿರ್ಧಾರ ಪ್ರಕಟಿಸಲಾಗುವುದು ಎಂದು ಹೇಳಿದರು.






Any questions related to ಅತಿಥಿ’ಗಳಿಗೆ ಪರ್ಯಾಯ ಕೆಲಸ ನೀಡಲು ಚಿಂತನೆ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್.?