07/08/2025 12:39 PM

Translate Language

Home » ಲೈವ್ ನ್ಯೂಸ್ » ಅಗ್ನಿವೀರ ಸೇನಾ ನೇಮಕಾತಿ ರ‍್ಯಾಲಿ: ವಸತಿ
ವ್ಯವಸ್ಥೆಗೆ ಸ್ಥಾನಿಕ ವೀಕ್ಷಕರ ನೇಮಕ

ಅಗ್ನಿವೀರ ಸೇನಾ ನೇಮಕಾತಿ ರ‍್ಯಾಲಿ: ವಸತಿ
ವ್ಯವಸ್ಥೆಗೆ ಸ್ಥಾನಿಕ ವೀಕ್ಷಕರ ನೇಮಕ

Facebook
X
WhatsApp
Telegram

ರಾಯಚೂರು.07.ಆಗಸ್ಟ್.25: ಇಲ್ಲಿನ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಗಸ್ಟ್ 08ರಿಂದ ಆಗಸ್ಟ್ 26ರವರೆಗೆ ನಡೆಯುವ ಅಗ್ನಿವೀರ್ ಸೇನಾ ರ‍್ಯಾಲಿಗೆ ಸ್ಥಾನಿಕ ವೀಕ್ಷಕರನ್ನು ನೇಮಿಸಲಾಗಿದೆ.

ಈ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸುವ ರಾಜ್ಯದ ವಿವಿಧ ಜಿಲ್ಲೆಯ ಅಭ್ಯರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸೂಚನೆ ನೀಡಿದ್ದರಿಂದಾಗಿ ಈ ಅಭ್ಯರ್ಥಿಗಳಿಗೆ ಸಂತೋಷ ಹಬ್‌ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಗಾಂಧೀ ವೃತ್ತದಲ್ಲಿರುವ ಸಂತೋಷ ಹಬ್‌ನಲ್ಲಿ ಅಭ್ಯರ್ಥಿಗಳಿಗೆ ವಸತಿ ವ್ಯವಸ್ಥೆಯನ್ನು ಒದಗಿಸಿದ ಬಗ್ಗೆ ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಮತ್ತು ಸಾರಿಗೆ ಇಲಾಖೆ ಇವರೊಂದಿಗೆ ಸಮನ್ವಯ ಸಾಧಿಸಿ ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಲು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು, ತಮ್ಮ ಇಲಾಖೆಯ ವಿವಿಧ ವಸತಿ ನಿಲಯಗಳ ನಿಲಯಪಾಲಕರಿಗೆ ಸ್ಥಾನಿಕ ವೀಕ್ಷಕರನ್ನಾಗಿ ನೇಮಿಸಿದ್ದಾರೆ.

ಸ್ಥಾನಿಕ ವೀಕ್ಷಕರ ವಿವರ: ಆಗಸ್ಟ್ 7 ರಿಂದ 8ರವರೆಗೆ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ (ಉನ್ನತ್ತೀಕರಿಸಿದ) ಬಾಲಕರ ವಸತಿ ನಿಲಯದ ನಿಲಯಪಾಲಕರಾದ ಶಾಮಣ್ಣ ದೂರವಾಣಿ ಸಂಖ್ಯೆ: 9741199211,

ಆಗಸ್ಟ್ 10 ರಿಂದ 12ರವರೆಗೆ ರಾಯಚೂರಿನ ಜಹೀರಾಬಾದ್ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ನಿಲಯಪಾಲಕರಾದ ರವಿ ಮೊಬೈಲ್ ಸಂಖ್ಯೆ: 9845763768,

ಆಗಸ್ಟ್ 13 ರಿಂದ 15ವರೆಗೆ ಬೋಳಮಾನದೊಡ್ಡಿ ರಸ್ತೆಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಿಲಯಪಾಲಕರಾದ ರೇವಣ್ಣ ಸಿದ್ದಪ್ಪ ಮೊಬೈಲ್ ಸಂಖ್ಯೆ 8904118926,

ಆಗಸ್ಟ್ 16ರಿಂದ 18ವರೆಗೆ ರಾಯಚೂರಿನ ಡಾ.ಎಪಿಜೆ ಅಬ್ದುಲ್ ವಸತಿ ಶಾಲೆಯ ನಿಲಯಪಾಲಕರಾದ ಆದೇಶ ಮೊಬೈಲ್ ಸಂಖ್ಯೆ: 9964757896,

ಆಗಸ್ಟ್ 19ರಿಂದ 21ವರೆಗೆ ಗಿಲ್ಲೇಸೂಗೂರು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಿಲಯಪಾಲಕರಾದ ವಿಶ್ವನಾಥ ಮೊಬೈಲ್ ಸಂಖ್ಯೆ: 9916679390,

ಆಗಸ್ಟ್ 22ರಿಂದ 23ವರೆಗೆ ಯರಮರಸ್ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಿಲಯಪಾಲಕರಾದ ಗಂಗಣ್ಣ ಮೊಬೈಲ್ ಸಂಖ್ಯೆ: 9900494048,

ಆಗಸ್ಟ್ 24ರಿಂದ 25ವರೆಗೆ ಸಿಂಧನೂರಿನ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ನಿಲಯಪಾಲಕರಾದ ಚನ್ನರೆಡ್ಡಿ ಮೊಬೈಲ್ ಸಂಖ್ಯೆ: 9108296944,

ಆಗಸ್ಟ್ 26ರಂದು ಮಾನವಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹೆಚ್ಚುವರಿ ನಿಲಯಪಾಲಕರಾದ ರಮೇಶ ಮೊಬೈಲ್ ಸಂಖ್ಯೆ: 9632779401 ಇವರು ಸ್ಥಾನಿಕ ವೀಕ್ಷಕರಾಗಿದ್ದಾರೆ.

ಈ ಸಿಬ್ಬಂದಿಯು ಸೂಚಿಸಿದ ದಿನಾಂಕದoದು ಜಿಲ್ಲಾ ಕಚೇರಿಯಿಂದ ರಜಿಸ್ಟರ್ ಪಡೆದು ಅಭ್ಯರ್ಥಿಗಳ ನೋಂದಣಿ ಕಾರ್ಯ ಮಾಡಬೇಕು. ಈ ಕುರಿತು ಒಂದು ಕೌಂಟರ್ ಸ್ಥಳ ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD