ರಾಯಚೂದು.13.ಆಗಸ್ಟ್.25:- ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ಆಯೋಜನೆ ಮಾಡಿದ ಅಗ್ನಿವೀರ್ ಸೇನಾ ಭರ್ತಿಗೆ 6ನೇ ದಿನವಾದ ಆಗಸ್ಟ್ 13ರಂದು ಒಟ್ಟು 779 ಅಭ್ಯರ್ಥಿಗಳು ವರದಿ ಮಾಡಿಕೊಂಡರು.
ಈ ಪೈಕಿ, 1600 ಮೀಟರ್ ಓಟದ ಸ್ಪರ್ಧೆಯಲ್ಲಿ 492 ಅಭ್ಯರ್ಥಿಗಳು ತೇರ್ಗಡೆಯಾಗಿ ಮುಂದಿನ ವೈದ್ಯಕೀಯ ಪರೀಕ್ಷೆಗೆ ಪ್ರವೇಶ ಪಡೆದುಕೊಂಡರು.
ಮಳೆಯಿoದ ಮೈದಾನ ಕೆಸರು: ಆಗಸ್ಟ್ 12ರಂದು ರಾತ್ರಿ ವೇಳೆಯಲ್ಲಿ ಜಿಟಿಜಿಟಿ ಮಳೆಯು ನಿರಂತರ ಸುರಿದ ಪರಿಣಾಮ ಆಗಸ್ಟ್ 13ರಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣವು ಕೇಸರಿನಿಂದ ಆವೃತವಾಗಿದ್ದು ಕಂಡು ಬಂದಿತು.
ಆಗಸ್ಟ್ 14ರಂದು ಬೆಳಗಾವಿ ಅಭ್ಯರ್ಥಿಗಳು: ವೇಳಾಪಟ್ಟಿಯಂತೆ ಆಗಸ್ಟ್ 14ರಂದು ಬೆಳಗಾವಿ ಜಿಲ್ಲೆಯಿಂದ ಅಂದಾಜು 860 ಅಭ್ಯರ್ಥಿಗಳು ಸೇನಾ ಭರ್ತಿಗೆ ವರದಿ ಮಾಡಿಕೊಳ್ಳಲಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.