09/08/2025 3:20 PM

Translate Language

Home » ಲೈವ್ ನ್ಯೂಸ್ » ಅಗ್ನಿವೀರ್ ಸೇನಾ ಭರ್ತಿ: ಮೊದಲ‌ ದಿನ ಕೊಪ್ಪಳ ಜಿಲ್ಲೆಯ 518 ಯುವಕರು ಮುಂದಿನ ಹಂತಕ್ಕೆ ಆಯ್ಕೆ.

ಅಗ್ನಿವೀರ್ ಸೇನಾ ಭರ್ತಿ: ಮೊದಲ‌ ದಿನ ಕೊಪ್ಪಳ ಜಿಲ್ಲೆಯ 518 ಯುವಕರು ಮುಂದಿನ ಹಂತಕ್ಕೆ ಆಯ್ಕೆ.

Facebook
X
WhatsApp
Telegram

ರಾಯಚೂರು.09.ಆಗಸ್ಟ್ .25:- ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನದಲ್ಲಿ ಆಗಸ್ಟ್ 8ರಂದು ಅಗ್ನಿವೀರ್ ಸೇನಾ ನೇಮಕಾತಿ ಭರ್ತಿ ಕಾರ್ಯಕ್ರಮ ಮೊದಲ ದಿನ ಯಶಸ್ವಿಯಾಗಿ ನಡೆದಿದೆ.

ಈ ಸೇನಾ ನೇಮಕಾತಿಗೆ, ದೇಶಸೇವೆ ಬಯಸಿದ ಅನೇಕ ವಿವಿಧ ಜಿಲ್ಲೆಗಳ ಯುವಕರು ಉತ್ಸಾಹದಿಂದ ಭಾಗಿಯಾಗಲಿದ್ದು, ಮೊದಲ ದಿನ ಕೊಪ್ಪಳ ಜಿಲ್ಲೆಯಿಂದ ಒಟ್ಟು 587 ಅಭ್ಯರ್ಥಿಗಳು ವರದಿ ಮಾಡಿಕೊಂಡು ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.

ಶಾರೀರಿಕ ಪರೀಕ್ಷೆ, ಓಟ, ದೈಹಿಕ ಸಾಮರ್ಥ್ಯ ಪರೀಕ್ಷೆ ಸೇರಿದಂತೆ  ಕಠಿಣ ಪರೀಕ್ಷಾ ಹಂತಗಳನ್ನು ಯಶಸ್ವಿಯಾಗಿ ಪೂರೈಸಿ 518 ಯುವಕರು ಮುಂದಿನ ಹಂತಕ್ಕೆ ಆಯ್ಕೆಯಾದರು.
ಈ ಸೇನಾ ಭರ್ತಿ ಪ್ರಕ್ರಿಯೆಯನ್ನು ಮೊದಲನೇ ದಿನ ಸೇನಾ ನೇಮಕಾತಿ ಮಂಡಳಿ ಅಧಿಕಾರಿಗಳು ಶಿಸ್ತುಬದ್ಧವಾಗಿ ಮುನ್ನಡೆಸಿದರು.

ಅಗ್ನಿವೀರ್ ಸೇನೆಗಾಗಿ ಮುಂದಿನ ಹಂತಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಲಾಗಿದ್ದು, ಅವರು ಶೀಘ್ರದಲ್ಲೇ ತರಬೇತಿಗೆ ಹಾಜರಾಗಲಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದರು.

ಭಾವುಕರಾದ ಕುಟುಂಬಸ್ಥರು: ತಮ್ಮ ತಮ್ಮ ಕುಟುಂಬದ ಯುವಕರ ಸೇನಾ ಭರ್ತಿ ನೋಡಲು ಮತ್ತು ಅವರಿಗೆ ಸಹಾಯ ಮಾಡಲು ಕುಟುಂಬದವರು ಆಗಮಿಸಿದ್ದರು. ಶಾರೀರಿಕ ಪರೀಕ್ಷೆಯ ಹಂತದಲ್ಲಿ ಯುವಕರು ಪಾಸಾಗಿದ್ದನ್ನು ಕಂಡು ಕೆಲವರು ಭಾವುಕರಾದರು.

ಯುವಕರಿಗೆ ಅಭಿನಂದನೆ ತಿಳಿಸಿದರು. ದೇಶಸೇವೆಯ ಕನಸು ಹೊತ್ತು ಅದನ್ನು ಸಾಕಾರಗೊಳಿಸಲು ಸೇನಾ ಭರ್ತಿಗೆ ಆಗಮಿಸಿ, ಶಾರಿರೀಕ ಪರೀಕ್ಷಾ ಹಂತದಲ್ಲಿ ಯಶಸ್ವಿಯಾಗಿ ಮುಂದಿನ ಹಂತಕ್ಕೆ ಕಾಲಿಟ್ಟ ಯುವಕರ ಮೊಗದಲ್ಲಿ ಸಂತಷ ಮತ್ತು ದೇಸೆ ಸೇವೆಗೆ ತಾನು ಆಯ್ಕೆಯಾಗುತ್ತೇನೆ ಎನ್ನುವ ಹೆಮ್ಮೆಯ, ವಿಶ್ವಾಸದ ಭಾವ ಕಾಣಿಸಿತು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD