ಬೀದರ.11.ಏಪ್ರಿಲ.25:- ಶ್ರೀ.ರವೀಂದ್ರ ಪಾಟೀಲ್, ಅಂದಿನ ಅಬಕಾರಿ ನಿರೀಕ್ಷಕರು, ಅಬಕಾರಿ ಉಪ ಅಧೀಕ್ಷಕರ ಕಚೇರಿ, ಬೀದರ ಉಪ ವಿಭಾಗ ರವರು ದಿನಾಂಕ 07.05.2023 ರಂದು ಬೆಳಗ್ಗೆ 9:30 ಗಂಟೆಗೆ ಬೀದರ ತಾಲೂಕಿನ ಕಮಠಾಣ ಗ್ರಾಮದ ಅನಿಲ್ ತಂದೆ ಘಾಳಪ್ಪ ಕೊಡೇನೋರ್ ಇವರ ಖಾನಾವಳಿಯಲ್ಲಿ ಅಬಕಾರಿ ದಾಳಿ ಮಾಡಿದಾಗ ಸದರಿ ಧಾಬಾದಲ್ಲಿ ಅಕ್ರಮವಾಗಿ ಮಾರಾಟದ ಉದ್ದೇಶಕ್ಕಾಗಿ ಸಂಗ್ರಹಿಸಿದ 30.240 ಲೀಟರ್ ಮದ್ಯ ಮತ್ತು ರೂ. 4,000/- ಗಳನ್ನು ಜಪ್ತಿಪಡಿಸಿಕೊಂಡು ಆರೋಪಿತನ ವಿರುದ್ಧ ಗುನ್ನೆ ಸಂಖ್ಯೆ: 134/2022-23 ರಂತೆ ಪ್ರಕರಣವನ್ನು ದಾಖಲಿಸಿದ್ದು ಕೃತ್ಯ ನಡೆದ ಸಮಯದಲ್ಲಿ ಆರೋಪಿಯು ಪರಾರಿಯಾಗಿರುತ್ತಾನೆ.
ಮುಂದುವರೆದು ಶ್ರೀ. ದಿಲೀಪ್ ಸಿಂಗ್ ಠಾಕೂರ್, ಅಂದಿನ ಅಬಕಾರಿ ಉಪ ನಿರೀಕ್ಷಕರು (ವಭಾರ), ಬೀದರ ಉಪ ವಿಭಾಗ ಇವರು ಸದರಿ ಪ್ರಕಾರಣದ ತನಿಖೆಯನ್ನು ಮುಂದುವರಿಸಿ, ಪ್ರಕರಣದಲ್ಲಿ ಭಾಗಿಯಾದ ಆರೋಪಿಯ ವಿರುದ್ಧ ದಿನಾಂಕ: 23.08.2023 ರಂದು ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿರುತ್ತಾರೆ.
ಇಂದು ದಿನಾಂಕ 08.04.2025 ರಂದು ಮಾನ್ಯ ನಾಯಧೀಶರು, ಎರಡನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯ, ಬೀದರ ರವರು ಸದರಿ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸಿ, ಪ್ರಕರಣದಲ್ಲಿನ ಆರೋಪಿಯಾದ ಅನಿಲ್ ತಂದೆ ಘಾಳಪ್ಪಾ, ಸಾ: ಕಮಠಾಣ ಗ್ರಾಮ, ತಾ & ಜಿ। ಬೀದರ ಇವರಿಗೆ ಎರಡು (02) ತಿಂಗಳುಗಳ ಕಠಿಣ ಶಿಕ್ಷೆ ಹಾಗೂ ರೂ. 10,000/- ಗಳ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ.
ಸರ್ಕಾರದ ಪರವಾಗಿ ಸದರಿ ಪ್ರಕರಣದ ವಾದವನ್ನು ಸರ್ಕಾರಿ ಸಹಾಯಕ ಅಭಿಯೋಜಕರಾದ ಶ್ರೀ. ಸುನಿಲ್ ಕಾಂಬಳೆ ರವರು ಘನ ನ್ಯಾಯಾಲಯದಲ್ಲಿ ಮಂಡಿಸಿರುತ್ತಾರೆ.