09/06/2025 7:28 PM

Translate Language

Home » ಲೈವ್ ನ್ಯೂಸ್ » ಅಂಗವಿಕಲರಿಗೆ ವಿಮಾ ಮೊತ್ತ 5 ಲಕ್ಷಕ್ಕೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಅಂಗವಿಕಲರಿಗೆ ವಿಮಾ ಮೊತ್ತ 5 ಲಕ್ಷಕ್ಕೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Facebook
X
WhatsApp
Telegram

ಬೆಂಗಳೂರು.14.ಮಾರ್ಚ.25:- ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ ವಿಕಲಚೇತನರಿಗೆ1ಲಕ್ಷ ವಿಮೆ ಸೌಲಭ್ಯವಿದೆ. ಈ 1 ಲಕ್ಷ ವಿಮಾ ಈಗ 5ಲಕ್ಷಕ್ಕೆ ಮುಂಬರುವ ದಿನಗಳಲ್ಲಿ 5 ಲಕ್ಷಕ್ಕೆ  ಏರಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಮಾಹಿತಿ ನೀಡಿದರು.

ಇಂದು ವಿಧಾನಪರಿಷತ್ ನಲ್ಲಿ ಎಲ್ಲ ರೀತಿಯ ಅಂಗವೈಕಲ್ಯ ಒಳಗೊಂಡ ವಿಮೆ ಯೋಜನೆಗಳಿವೆಯೇ? ವಿಶೇಷವೇತನರಿಗೆ ಯಾವ ರೀತಿಯ ಸೌಲಭ್ಯಗಳಿವೆ ಎಂದು ವೈ.ಎಂ ಸತೀಶ ಪ್ರಶ್ನಿಸಿದರು.ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರ ನೀಡಿದ್ದು ಅಂಗವಿಕಲತಾ ನಿವಾರಣ ವೈದ್ಯಕೀಯ ಪರಿಹಾರ ನಿಧಿ ಹಾಗು ನಿರಾಮಯ ಆರೋಗ್ಯ ವಿಮಾ ಯೋಜನೆ ಇದೆ. ಆದರೆ ಈ ಯೋಜನೆಯನ್ನು ಇನ್ನಷ್ಟು ವಿಸ್ತರಿಸುವ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

ವಿಮೆ ಮೊತ್ತವನ್ನು 5 ಲಕ್ಷ ರೂಪಾಯಿಗೆ ಹೆಚ್ಚಿಸಿ ಎಂದು ಇದೆ ವೇಳೆ ವೈ.ಎಂ ಸತೀಶ್ ಕೇಳಿದಾಗ ಬಿಪಿಎಲ್ ಕಾರ್ಡ್ ಹೊಂದಿದ ವಿಕಲಚೇತನರಿಗೆ 1 ಲಕ್ಷದವರೆಗೆ ವಿಮೆ ಸೌಲಭ್ಯವಿದೆ. 1 ವರ್ಷಕ್ಕೆ 1 ಲಕ್ಷದವರೆಗೂ ವಿಮೆ ಸೌಲಭ್ಯವಿದೆ ಮುಂಬರುವ ದಿನಗಳಲ್ಲಿ 5 ಲಕ್ಷಕ್ಕೆ ವಿಮೆ ಮೊತ್ತ ಏರಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!