|

ನೇರ ಸಂದರ್ಶನ ಆಹ್ವಾನ


ಬೀದರ.07.ಮೇ.25:- ಬೀದರ ವಿಶ್ವವಿದ್ಯಾಲಯ ಬೀದರನಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಹಾಗೂ ಹಣಕಾಸು ಲೆಕ್ಕಚಾರ ನಿರ್ವಹಣೆ ಮತ್ತು ಕಟ್ಟಡ ಕಾಮಗಾರಿ ಮೇಲ್ವಿಚಾರಣೆಗೆ ಸರ್ಕಾರಿ ನಿವೃತ್ತ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ನೇರ ಸಂದರ್ಶನವನ್ನು ಕರೆಯಲಾಗಿದೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಸಚಿವರು(ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹಣಕಾಸು ಲೆಕ್ಕ ನಿರ್ವಹಣಾ ಅಧಿಕಾರಿ ಹಣಕಾಸು ವಿಭಾಗ ಅರ್ಹತೆಗಳು: ಅಭ್ಯರ್ಥಿಯು ಅಕೌಂಟ್ ಸೂಪರಿಟೆಂಡೆAಟ್/ಆಡಿಟ್ ಆಫೀಸರ್ ನಿವೃತ್ತ ಸರ್ಕಾರಿ ಅಧಿಕಾರಿಯಾಗಿರಬೇಕು. ವಯೋಮಿತಿ 60 ರಿಂದ 67 ವರ್ಷದೊಳಗಿರಬೇಕು. ಹಣಕಾಸು ನಿರ್ವಹಣೆಯ ಅನುಭವ ಹೊಂದಿರಬೇಕು. 20000 ರೂ ಗೌರವಧನ ಪಾವತಿಸಲಾಗುವುದು.

ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು/ಸಹಾಯಕ ಅಭಿಯಂತರರು ಕಟ್ಟಡ ಕಾಮಗಾರಿ ವಿಭಾಗ ಅರ್ಹತೆಗಳು: ಅಭ್ಯರ್ಥಿಯು ನಿವೃತ್ತ ಸರ್ಕಾರಿ ಅಧಿಕಾರಿಯಾಗಿದ್ದು, ವಯೋಮಿತಿ 60 ರಿಂದ 67 ವರ್ಷದೊಳಗಿರಬೇಕು. 25000 ರೂ ಗೌರವಧನ ಪಾವತಿಸಲಾಗುವುದು.

ಅರ್ಹರು ದಿನಾಂಕ 08-05-2025 ರಂದು ಬೆಳ್ಳಿಗ್ಗೆ 10.30 ಗಂಟೆಗೆ ಬೀದರ ವಿಶ್ವವಿದ್ಯಾಲಯ ಬೀದರನಲ್ಲಿ ನಡೆಯುವ ನೇರ ಸಂದರ್ಶನಕ್ಕೆ ತಮ್ಮ ಸೇವಾ ಹಾಗೂ ಅರ್ಹತಾ ದಾಖಲೆಗಳೊಂದಿಗೆ ಹಾಜರಾಗಲು ಅವರು ತಿಳಿಸಿದ್ದಾರೆ.

Similar Posts

Leave a Reply

Your email address will not be published. Required fields are marked *