ಬೀದರ.07.ಜೂನ್.6:- ರೈತರು ತಮ್ಮ ಹೋಲಗಳಲ್ಲಿ ಉದ್ದು, ಹೆಸರು, ತೋಗರಿ, ಸೋಯಾಅವರೆ, ಮಿಶ್ರ ಬೆಳೆ ಬೆಳೆಸಿದಲ್ಲಿ ಭೂಮಿಯ ಫಲವತತ್ತೆ ಹಾಗೂ ರೈತರ ಆದಾಯವನ್ನು ಹೆಚ್ಚಿಗೆ ಪಡೆಯಬಹುದಾಗಿದೆ. ಹಾಗೆಯೇ ಕೇವಲ ಡಿ.ಎ.ಪಿ ರಸಗೊಬ್ಬರ ಬದಲಿಗೆ ಸಂಯುಕ್ತ ರಸಗೊಬ್ಬರಗಳಾದ 12:32:16, 10:26:26, 20:20:0:13, ಇತರೆ ಬಳಸಿದಲ್ಲಿ ಬೆಳೆಗಳಿಗೆ ಸಮತೋಲನೆಯ ಪೋಶಕಾಂಶ ದೊರೆತು ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ ಎಂದು ಬೀದರ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀದರ ತಾಲ್ಲೂಕಿನ ಮುಂಗಾರು ಹಂಗಾಮಿನ ಬೆಳೆ ವಿಸ್ತೀರ್ಣ 54000 ಹೆಕ್ಟರ್ ಪ್ರದೇಶವಿದ್ದು, ಪ್ರಮುಖ ಬೆಳೆಗಳಾದ ಸೂಯಾ ಅವರೆ (25900 ಹೇಕ್ಟರ್), ತೋಗರಿ (17350 ಹೇಕ್ಟರ್), ಹೆಸರು (5461 ಹೇಕ್ಟರ್), ಉದ್ದು (2650 ಹೇಕ್ಟರ್), ಹೈಬ್ರೀಡ್ ಜೋಳ (980 ಹೇಕ್ಟರ್), ಇತರೆ ಕಬ್ಬು ಮತ್ತು ಹತ್ತಿ ಬೆಳೆಯಲಾಗುತ್ತಿದ್ದು, ಮೇ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು ತೋಗರಿ, ಉದ್ದು, ಮತ್ತು ಹೆಸರು ಬೆಳೆಗಳಿಗೆ ಬಿತ್ತನೆ ಮಾಡಲು ಸೂಕ್ತವಾಗಿರುತ್ತದೆ, ಮುಂದುವರೆದು ಭೂಮಿ ಉಳುಮೆ ಮಾಡಿ ಬಿತ್ತನೆ ಮಾಡಲು ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಬಿತ್ತನೆ ಮಾಡುವ ಮುಂಚೆ ತೋಗರಿ, ಉದ್ದು, ಮತ್ತು ಹೆಸರು ಬೆಳೆಗಳಿಗೆ ಪ್ರತಿ ಎಕರೆಗೆ ರೈಜೋಬಿಯಂ-200 ಗ್ರಾಂ, ಟೈಕೋಡರ್ಮ-20 ಗ್ರಾಂ ಮತ್ತು ಸೋಯಾ ಅವೆರೆಗೆ ಇಮ್ಮಿಡಾಕ್ಲೋಪ್ರಿಡ್ 600-ಎಸ್ ಎಲ್ (ಗೌಚ್) 10 ಎಮ್ ಎಮ್ ಪ್ರತಿ ಕೆ.ಜಿ ಬೀಜಕ್ಕೆ ಲೇಪನೆ ಮಾಡಿ, ಬಿತ್ತನೆ ಮಾಡಿದಲ್ಲಿ ರೋಗ ನಿರೋಧಕ ಶಕ್ತಿಯಿಂದ ರೋಗಗಳನ್ನು ಬರದಂತೆ ತಡೆಗಟ್ಟಬಹುದಾಗಿದೆ.
ಸೊಯಾ ಅವರೆ ಬಿತ್ತನೆಯನ್ನು 80-100 ಮೀ.ಮೀ ಮಳೆ ಬಂದಲ್ಲಿ ಭೂಮಿಯ ತೇವಾಂಶವನ್ನು ನೋಡಿ ಬಿತ್ತನೆ ಮಾಡುವುದು ಸೂಕ್ತವಾಗಿರುತ್ತದೆಂದು ಅವರು ತಿಳಿಸಿದ್ದಾರೆ.
ಕೊಪ್ಪಳ.03.ಆಗಸ್ಟ್.25: ಕೊಪ್ಪಳ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ವಿಕಲಚೇತನರ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ…
ಕೊಪ್ಪಳ.03.ಆಗಸ್ಟ್.25:- ಮುನಿರಾಬಾದ್ ಪವರ್ ಹೌಸ್‌ನಲ್ಲಿ 220 ಕೆ.ವಿ ಲಿಂಗಾಪುರ-ಮುನಿರಾಬಾದ್ ಲೈನ್-2 ರ ಹಾನಿಗೊಳಗಾದ ಇನ್ಸುಲೇಟರ್ ಸ್ಟ್ರಿಂಗ್‌ಗಳನ್ನು ತುರ್ತು ಆಧಾರದ ಮೇಲೆ…
ಕೊಪ್ಪಳ.03.ಆಗಸ್ಟ್.25: ಕೊಪ್ಪಳ ನಗರಕ್ಕೆ ನೀರು ಸರಬರಾಜು ಆಗುವ ಮೂಲ ಕೇಂದ್ರವಾದ ಮುನಿರಾಬಾದ್ ಜಾಕವೆಲ್‌ನಲ್ಲಿ ಪೈಪ್‌ಲೈನ್ ಹಾಗೂ ಇನ್ನಿತರೇ ದುರಸ್ಥಿ ಕಾರ್ಯವನ್ನು…
ಬೆಂಗಳೂರು.03.ಆಗಸ್ಟ್.25:- ಮಾಹಿತಿ ಹಕ್ಕು ಅಧಿನಿಯಮ 2005 ಸಂಬಂಧಿಸಿತ್ ಇಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಪೊಲೀಸ್ ಇಲಾಖೆ ವತಿಯಿಂದ ಇಲ್ಲಿನ ಜಿಲ್ಲಾ…
ಬೀದರ.02.ಆಗಸ್ಟ.25:- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2025-26ನೇ ಸಾಲಿಗೆ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಯು.ಪಿ.ಎಸ್.ಸಿ ನಾಗರೀಕ ಸೇವೆ. ಕೆ.ಎ.ಎಸ್ ಗೆಜೆಟೆಡ್…
ಬೆಂಗಳೂರಿನ ವಿಶೇಷ ನ್ಯಾಯಾಲಯ ಬೆಂಗಳೂರು.02.ಆಗಸ್ಟ್.25:- ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಮತ್ತು ಅಮಾನತುಗೊಂಡ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಅವರಿಗೆ…