ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ:


ಆಕ್ಷೇಪಣೆಗಳು ಸಲ್ಲಿಸಲು ರೈತಬಾಂಧವರಿಗೆ ಅವಕಾಶ:

ಬೀದರ.01.ಮಾರ್ಚ.25:-ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಏಖS-Pಒಈಃಙ) ಅಡಿಯ 2023-24ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಬೆಳೆ ಸಮೀಕ್ಷೆಯ ದತ್ತಾಂಶಗಳನ್ನು ರೈತರ ಬೆಳೆ ವಿಮೆಗೆ ನೋಂದಣಿಯಾದ ಪ್ರಸ್ತಾವನೆಗಳೊಂದಿಗೆ ಹೋಲಿಕೆ ಮಾಡಿ ಸರ್ಕಾರದಿಂದ ಅನುಮೋದನೆಯಾದ ವಿನಾಯಿತಿಗಳನ್ನು ಅಳವಡಿಸಿ ತಾಳೆ ಆಗಿರುವ ಪ್ರಸ್ತಾವನೆಗಳಿಗೆ ಸಂರಕ್ಷಣೆ ತಂತ್ರಾAಶದಲ್ಲಿ ವಿಮಾ ಪರಿಹಾರ ಲೆಕ್ಕ ಹಾಕಲಾಗಿದೆ.


ತಾಳೆಯಾಗದೆ ಇರುವ ಪ್ರಸ್ತಾವನೆಗಳನ್ನು ಸಂರಕ್ಷಣೆ ತಂತ್ರಾಶದಲ್ಲಿ ಪರಿಶೀಲಿಸಲಾಗಿ ಮುಂಗಾರು ಹಂಗಾಮಿನಲ್ಲಿ ತಿರಸ್ಕçತಗೊಂಡ 540, ಹಿಂಗಾರು ಹಂಗಾಮಿನಲ್ಲಿ 31 ಪ್ರಸ್ತಾವನೆಗಳನ್ನು ಈಗಾಗಲೆ ರೈತ ಸಂಪರ್ಕ ಕೇಂದ್ರಗಳಿಗೆ ಕಳುಹಿಸಲಾಗಿದ್ದು, ಪ್ರಸ್ತುತ ತಿರಸ್ಕçತಗೊಂಡ ಪ್ರಸ್ತಾವನೆಗಳ ರೈತರ ಪಟ್ಟಿಯನ್ನು ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಗ್ರಾಮ ಪಂಚಾಯತಗಳಲ್ಲಿ ಪ್ರದರ್ಶಿಸಲಾಗುವುದು.


ಲಗತ್ತಿಸಬೇಕಾದ ದಾಖಲಾತಿಗಳು: 2023-24ರ ಪಹಣಿ ಪತ್ರಿಕೆಯಲ್ಲಿ (ಖಖಿಅ) ವಿಮೆಗೆ ನೊಂದಾಯಿಸಿದ ಬೆಳೆ ನಮೂದಾಗಿರಬೇಕು. ಬೆಂಬಲ ಬೆಲೆ ಪ್ರಯೋಜನ ಪಡೆದಿದಲ್ಲಿ, ರಶೀದಿ ಸಲ್ಲಿಸುವುದು. ವಿಮೆಗೆ ನೋಂದಾಯಿತ ಬೆಳೆಯ ಉತ್ಪನ್ನವನ್ನು ಂPಒಅ ಮಾರುಕಟ್ಟೆಗೆ ಮಾರಾಟ ಮಾಡಿದ್ದಲ್ಲಿ ಸದರಿ ದಾಖಲೆ ಸಲ್ಲಿಸುವುದು.


ಕಾರಣ ಸಂಬAಧಪಟ್ಟ ರೈತರು ಆಕ್ಷೇಪಣೆ ಇದ್ದಲ್ಲಿ ಮಾತ್ರ ಮಾಹಿತಿಯನ್ನು ಪ್ರಕಟಿಸಿದ ದಿನಾಂಕದಿAದ 15 ದಿನದೊಳಗಾಗಿ ತಮ್ಮ ಮನವಿಯನ್ನು ಸಲ್ಲಿಸಲು ಹಾಗೂ ಮರು ಪರಿಶೀಲಿಸಲು, ಸದರಿ ಮನವಿಯೊಂದಿಗೆ ಬೆಳೆ ವಿಮೆಗೆ ನೊಂದಣಿಯಾಗಿರುವ ಬೆಳೆಯನ್ನು ಬೆಳೆದಿರುವ ಕುರಿತು ಈ ಮೇಲಿನ ದಾಖಲಾತಿಗಳನ್ನು ಸಂಬAಧಪಟ್ಟ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ದಾಖಲಾತಿಗಳು ಸಲ್ಲಿಸಬೇಕೆಂದು ಬೀದರ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

prajaprabhat

Recent Posts

ಎನ್‌ಡಿಎಯ 11 ವರ್ಷಗಳ ಪ್ರಯಾಣದ ಪ್ರಮುಖ ಆಧಾರಸ್ತಂಭ ಮಹಿಳಾ ನೇತೃತ್ವದ ಅಭಿವೃದ್ಧಿ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.

ಹೊಸ ದೆಹಲಿ.08.ಜೂನ್.25:-ಅಭಿವೃದ್ಧಿ ಹೊಂದಿದ ಭಾರತದತ್ತ ಮಹಿಳೆಯರು ವಹಿಸಿರುವ ಪರಿವರ್ತನಾತ್ಮಕ ಪಾತ್ರವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಎತ್ತಿ ತೋರಿಸಿದರು, ಕಳೆದ…

5 hours ago

ರಾಜ್ಯ ‘ಸರ್ಕಾರಿ ನೌಕರರಿಗೆ ‘ಆರೋಗ್ಯ ಸಂಜೀವಿನಿ ಯೋಜನೆ’ ಲಾಭ ಪಡೆಯಲು ಈ ದಾಖಲೆಗಳು ಕಡ್ಡಾಯ |

ಬೆಂಗಳೂರು.08.ಜೂನ್.25:- ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಕುಟುಂಬದವರಿಗೂ ಉಚಿತ ಆರೋಗ್ಯ ವಿಮಾ'ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿದೆ.ಎಂಬುದಾಗಿ ಕರೆಯುವಂತ ಯೋಜನೆಯಡಿ…

6 hours ago

ಕರ್ಣಾಟಕ ರಾಜ್ಯದ ಈ 7 ಜಿಲ್ಲೆಗಳಲ್ಲಿ ಜನನಕ್ಕಿಂತ ಮರಣ ಪ್ರಮಾಣ ಭಾರಿ ಏರಿಕೆ! ಕೇಂದ್ರದಿಂದ ಆತಂಕಕಾರಿ ವರದಿ!

ಹೊಸ ದೆಹಲಿ.08.ಜೂನ್.25:-ದೇಶದಲ್ಲಿ 49 ಜಿಲ್ಲೆಗಳಲ್ಲಿ ಜನಿಸಿದ ಮಕ್ಕಳ ಸಂಖ್ಯೆಗಿಂತ ಸಾವಿನ ಸಂಖ್ಯೆ ಹೆಚ್ಚಾಗಿದೆ. 2021 ರ ಭಾರತದ ನಾಗರಿಕ ನೋಂದಣಿ…

10 hours ago

ತೋಟಗಾರಿಕೆ ವಿಶ್ವವಿದ್ಯಾಲಯ ಘಟಿಕೋತ್ಸವ ಜೂನ್ 10ರಂದು ನಡೆಯಲಿದೆ.

ಬಾಗಲಕೋಟೆ.07.ಜೂನ್.25:- ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಬಾಗಲಕೋಟ  ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಸಮಾರಂಭ ಇದೇ ತಿಂಗಳು ಜೂನ್ 10 ರಂದು ಬೆಳಿಗ್ಗೆ…

19 hours ago

ಫ್ರೆಂಚ್ ಓಪನ್ ಟೆನಿಸ್: ಮಹಿಳಾ ಸಿಂಗಲ್ಸ್ ಪ್ರಶಸ್ತಿ ಪಂದ್ಯದಲ್ಲಿ ವಿಶ್ವದ ನಂ. 1 ಆಟಗಾರ್ತಿ ಅರಿನಾ ಸಬಲೆಂಕಾ ವಿಶ್ವದ ನಂ. 2 ಆಟಗಾರ್ತಿ ಕೊಕೊ ಗೌಫ್ ಅವರನ್ನು ಎದುರಿಸಲಿದ್ದಾರೆ.

ಫ್ರೆಂಚ್ ಓಪನ್ ಟೆನಿಸ್‌ನಲ್ಲಿ, ವಿಶ್ವದ ನಂ. 1 ಆಟಗಾರ್ತಿ ಅರಿನಾ ಸಬಲೆಂಕಾ ಇಂದು ಸಂಜೆ ನಡೆಯಲಿರುವ ಬಹುನಿರೀಕ್ಷಿತ ಮಹಿಳಾ ಸಿಂಗಲ್ಸ್…

20 hours ago

ಪಹಲ್ಗಾಮ್ ದಾಳಿಯನ್ನು ಖಂಡಿಸಿದ ಬ್ರಿಕ್ಸ್ ರಾಷ್ಟ್ರಗಳು, ಭಯೋತ್ಪಾದನೆ ಕುರಿತು ಶೂನ್ಯ ಸಹಿಷ್ಣುತೆ ನೀತಿಯನ್ನು ಬೆಂಬಲಿಸಿವೆ.

"ಭಾರತವು ಯಾವಾಗಲೂ ಕಾನೂನಿನ ನಿಯಮ, ಜಾಗತಿಕ ಸಹಕಾರ ಮತ್ತು ವಿಶ್ವ ವೇದಿಕೆಯಲ್ಲಿ ಸಂವಾದದ ಅಗತ್ಯವನ್ನು ಬೆಂಬಲಿಸಿದೆ" ಎಂದು ಲೋಕಸಭಾ ಸ್ಪೀಕರ್…

20 hours ago