ಹೊಸ ದೆಹಲಿ.19.ಏಪ್ರಿಲ್.25:- ಭಾರತ ಸರ್ಕಾರದ್ ಹಣಕಾಸು ಸಚಿವಾಲಯ ವತಿಯಿಂದ ರೂ.2,000 ಕ್ಕಿಂತ ಹೆಚ್ಚಿನ UPI ಪಾವತಿಗಳ ಮೇಲೆ ಕೇಂದ್ರವು 18% GST ವಿಧಿಸಲಿದೆ ಎಂದು ಕೆಲವು ರಾಷ್ಟ್ರೀಯ ಮಾಧ್ಯಮಗಳು ಪ್ರಕಟಿಸಿದ ವರದಿಗಳಿಗೆ ಕೇಂದ್ರ ಹಣಕಾಸು ಸಚಿವಾಲಯ ಪ್ರತಿಕ್ರಿಯಿಸಿದೆ. ಅಂತಹ ಎಲ್ಲಾ ಸುದ್ದಿಗಳನ್ನು ಆಧಾರರಹಿತ ಮತ್ತು ಸುಳ್ಳು ಎಂದು ಅದು ತಳ್ಳಿಹಾಕಿದೆ.
ಪ್ರಸ್ತುತ ಅಂತಹ ಯಾವುದೇ ಯೋಜನೆಗಳಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಎರಡು ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಏಕೀಕೃತ ಪಾವತಿ ಇಂಟರ್ಫೇಸ್(UPI) ವಹಿವಾಟುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (GSt) ವಿಧಿಸಲು ಸರ್ಕಾರ ಮುಂದಾಗಿದೆ ಎಂದು ಕೆಲ ವರದಿಗಳು ಅನೇಕ ಕಡೆ ಹರಿದಾಡಿದ್ದವು. ಇದಕೆಲ್ಲಾ ಕೇಂದ್ರ ಸರ್ಕಾರ ಪೂರ್ಣವಿರಾಮ ಇಟ್ಟಿದ್ದು,ಕೇಂದ್ರ ಹಣಕಾಸು ಇಲಾಖೆ ತಳ್ಳಿಹಾಕಿದೆ. ಅಂತಹ ಯಾವುದೇ ಪ್ರಸ್ತಾವನೆಗಳು ನಮ್ಮ ಮುಂದೆ ಇಲ್ಲ ಎಂದು ಸ್ವಷ್ಟನೆ ಕೊಟ್ಟಿದ್ದಾರೆ.
ಯುಪಿಐ (ಏಕೀಕೃತ ಪಾವತಿ ಇಂಟರ್ಫೇಸ್) (Unified payments interface) ವಹಿವಾಟುಗಳ ಮೇಲೆ ಜಿಎಸ್‌ಟಿ ವಿಧಿಸಲಾಗುವುದು ಎಂಬ ವರದಿಗಳನ್ನು ಕೇಂದ್ರ ಹಣಕಾಸು ಸಚಿವಾಲಯ ನಿರಾಕರಿಸಿದೆ. ರೂ. 2000 ಗಳಿಗಿಂತ ಹೆಚ್ಚಿನ ವಹಿವಾಟುಗಳ ಮೇಲೆ ಜಿಎಸ್‌ಟಿ ವಿಧಿಸಲು ಕೇಂದ್ರ ಸಿದ್ಧತೆ ನಡೆಸುತ್ತಿದೆ ಎಂಬ ಸುದ್ದಿಯನ್ನು ಸಂಪೂರ್ಣ ಸುಳ್ಳು ಎಂದು ಹೇಳಿದೆ.
ಕೇಂದ್ರ ಹಣಕಾಸು ಇಲಾಖೆ ಪಿಐಬಿ ಈ ಕುರಿತು ಮಾಹಿತಿ ಹಂಚಿಕೊಂಡಿದೆ.ಕೇಂದ್ರ ಸರ್ಕಾರ ಇನ್ಮುಂದೆ 2000 ಮೀರಿದ ಯುಪಿಐ ವಹಿವಾಟುಗಳಿಗೆ ಜಿಎಸ್‌ಟಿ ವಿಧಿಸುತ್ತದೆ ಎಂದು ಕೆಲ ವರದಿಗಳು ಹೇಳಿದ್ದಾವೆ. ಇದು ಸುಳ್ಳು. ಸದ್ಯಕ್ಕೆ ಅಂತಹ ಯಾವುದೇ ಪ್ರಸ್ತಾವಗಳು ಇಲಾಖೆಯ ಮುಂದೆ ಇಲ್ಲ’ ಎಂದು ತಳ್ಳಿಹಾಕಿದೆ.
ಇದಕ್ಕೂ ಮೊದಲು ಯುಪಿಐ ಮೂಲಕ ವ್ಯಾಪಾರಿಗಳು ಎಂಡಿಆರ್ (Merchant Discount Rate) ನೀಡುವಾಗ ಅದಕ್ಕೆ ಜಿಎಸ್‌ಟಿ ವಿಧಿಸಲಾಗುತ್ತಿತ್ತು. 2020 ರಲ್ಲಿ ಅದನ್ನೂ ತೆಗೆದುಹಾಕಲಾಗಿದೆ. ಹೀಗಾಗಿ ಯುಪಿಐ ವಹಿವಾಟುಗಳಿಗೆ ಯಾವುದೇ ಜಿಎಸ್‌ಟಿ ಇರುವುದಿಲ್ಲ’ ಎಂದು ಕೇಂದ್ರ ಹಣಕಾಸು ಇಲಾಖೆ ಪಿಐಬಿ ಹೇಳಿದೆ.
ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ಯುಪಿಐ (UPI) ವಹಿವಾಟುಗಳಿಗೆ ಉತ್ತೇಜನ ನೀಡುವ ಮೂಲಕ ಸರ್ಕಾರ ಎಚ್ಚರಿಕೆಯನ್ನು ನೀಡಿದೆ. ಅವುಗಳು ಈ ಕೆಳಗಿನಂತೆ ಇದೆ.
ಯುಪಿಐ ಬಳಕೆಯ ಹೆಚ್ಚಳ: ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಸಾಮಾನ್ಯ ಜನರಿಗೆ ಸುಲಭವಾಗಿ ಅರ್ಥಮಾಡಿಸಿಕೊಡುವ ಹಾಗೂ ನಗದುರಹಿತ ಆರ್ಥಿಕ ವ್ಯವಸ್ಥೆಗೆ ಉತ್ತೇಜನ ನೀಡುವ ಒಂದು ದಿಕ್ಕಿನೆಂದು ಸರ್ಕಾರ ಯುಪಿಐಗೆ ಉತ್ತೇಜನ ನೀಡುತ್ತಿದೆ.
ಗಾಳಿಸುದ್ದಿಗಳಿಗೆ ಕಿವಿಗೊಡಬೇಡಿ: ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ವಾಟ್ಸಾಪ್ ಮುಂತಾದವುಗಳಲ್ಲಿ ಹರಡುವ ಸುಳ್ಳು ಸುದ್ದಿಗಳ ವಿರುದ್ಧ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಇದು ಯುಪಿಐ ಸೇವೆಗಳ ಬಗ್ಗೆ ತಪ್ಪು ಮಾಹಿತಿಯನ್ನು ತಡೆಗಟ್ಟುವ ಉದ್ದೇಶದಿಂದ ಅವರು ಈ ಮಾಹಿತಿಯನ್ನು ತಿಳಿಸಿದ್ದಾರೆ.
ಜನವರಿ 2020 ರಿಂದ ಜಾರಿಗೆ ಬರುವಂತೆ, ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಡಿಸೆಂಬರ್ 30, 2019 ರ ಗೆಜೆಟ್ ಅಧಿಸೂಚನೆಯ ಮೂಲಕ ವ್ಯಕ್ತಿಯಿಂದ ವ್ಯಾಪಾರಿಗೆ (P2M) UPI ವಹಿವಾಟುಗಳ ಮೇಲಿನ MDR ಅನ್ನು ತೆಗೆದುಹಾಕಿದೆ.
ಪ್ರಸ್ತುತ UPI ವಹಿವಾಟುಗಳ ಮೇಲೆ ಯಾವುದೇ MDR ವಿಧಿಸದ ಕಾರಣ, ಈ ವಹಿವಾಟುಗಳಿಗೆ GST ಅನ್ವಯಿಸುವುದಿಲ್ಲ.
ಡಿಜಿಟಲ್ ಪಾವತಿಗಳಿಗೆ ಉತ್ತೇಜನ: ಸರ್ಕಾರದ ಬದ್ಧತೆ
ಯುಪಿಐ ಮೂಲಕ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ತನ್ನ ಬದ್ಧತೆಯನ್ನು ಸರ್ಕಾರ ಮರುಹೊರತಂದಿದೆ. 2021-22 ರಿಂದ ಚಾಲನೆಗೊಂಡಿರುವ ಯುಪಿಐ ಪ್ರೋತ್ಸಾಹಕ ಯೋಜನೆವು, ಕಡಿಮೆ ಮೌಲ್ಯದ ವ್ಯಕ್ತಿಯಿಂದ ವ್ಯಾಪಾರಿಗೆ (P2M) ವಹಿವಾಟುಗಳಿಗೆ ಬೆಂಬಲ ನೀಡಲು ಉದ್ದೇಶಿತವಾಗಿದೆ.
ಡಿಜಿಟಲ್ ಪಾವತಿ ಯೋಜನೆಯ ಪ್ರಮುಖ ಉದ್ದೇಶಗಳು
ವ್ಯವಹಾರ ವೆಚ್ಚಗಳನ್ನು ಕಡಿಮೆ ಮಾಡುವುದು
ಡಿಜಿಟಲ್ ಪಾವತಿಯ ಅಳವಡಿಕೆಯನ್ನು ಹೆಚ್ಚಿಸುವುದು
ಸಣ್ಣ ವ್ಯಾಪಾರಿಗಳಿಗೆ ಉಪಯುಕ್ತ ನೆರವಿನ ವ್ಯವಸ್ಥೆ ಕಲ್ಪಿಸುವುದು
ಡಿಜಿಟಲ್ ಪಾವತಿ ಪ್ರೋತ್ಸಾಹಕ್ಕೆ ಸರ್ಕಾರದಿಂದ ವರ್ಷವಾರು ಹಂಚಿಕೆಗಳ ವಿವರ
ಹಣಕಾಸು ವರ್ಷ ಸರ್ಕಾರದ ಹಂಚಿಕೆ
2021-22 1,389 ಕೋಟಿ
2022-23 2,210 ಕೋಟಿ
2023-24 3,631 ಕೋಟಿ
ಈ ನಿರಂತರ ಪ್ರೋತ್ಸಾಹಕ್ಕೆ ಭಾರತದಲ್ಲಿ ಡಿಜಿಟಲ್ ಪಾವತಿ ಹೆಚ್ಚಾಗಿ ನಡೆಯುತ್ತಿದೆ. ಇದು ಸಣ್ಣ ವ್ಯಾಪಾರಿಗಳು, ಗ್ರಾಹಕರು ಮತ್ತು ಇಡೀ ಆರ್ಥಿಕ ವ್ಯವಸ್ಥೆನಲ್ಲಿ ಡಿಜಿಟಲೀಕರಣವನ್ನು ಅನುಕೂಲ ಮಾಡುತ್ತಿದೆ.
ಯುನೈಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಬಳಸುವ ವಹಿವಾಟು ಮೌಲ್ಯಗಳು 2019-20 ರಲ್ಲಿ 21.3 ಲಕ್ಷ ಕೋಟಿ ರೂಪಾಯಿಗಳಿಂದ 2025ರ ಮಾರ್ಚ್ ವೇಳೆಗೆ 260.56 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಇದು 12 ಪಟ್ಟು ಹೆಚ್ಚಿನ ಅಭಿವೃದ್ಧಿಯನ್ನು ಸೂಚಿಸುತ್ತದೆ.P2M ವಹಿವಾಟುಗಳ ಮೌಲ್ಯ ಮಾತ್ರವೇ 59.3 ಲಕ್ಷ ಕೋಟಿ ರೂ. ಆಗಿದ್ದು, ಇದು ವ್ಯಾಪಾರಿಗಳಿಗೆ ಯುಪಿಐ ಸೇವೆಗಳ ಅಳವಡಿಕೆಯಲ್ಲಿ ಕಂಡುಬರುವ ಬದಲಾವಣೆಯನ್ನು ಮತ್ತು ಗ್ರಾಹಕರ ನಂಬಿಕೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ.
ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…
ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…
ರಷ್ಯಾದ ಕುರಿಲ್ ದ್ವೀಪಗಳಲ್ಲಿ ಇಂದು ಬೆಳಿಗ್ಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ರಷ್ಯಾದ ಕಮ್ಚಟ್ಕಾ ಪರ್ಯಾಯ…
ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಇಂದಿನಿಂದ ಶ್ರೀ ಅಮರನಾಥ ಜಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು…
ಡುರಾಂಡ್ ಕಪ್: ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ, ಎರಡು ಜಯಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾದ…
ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿರುವ ಕ್ರಾಶೆನ್ನಿನಿಕೋವ್ ಜ್ವಾಲಾಮುಖಿ ಇಂದು ದಾಖಲಾದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಫೋಟಗೊಂಡಿದೆ, ಇದು 600 ವರ್ಷಗಳಲ್ಲಿ…