P.U.C ಪಿಯು ಕಾಲೇಜು ಪ್ರಾಂಶುಪಾಲ, ಉಪನ್ಯಾಸಕರ ವರ್ಗಾವಣೆಗೆ ಆದೇಶ.!

ಬೆಂಗಳೂರು.29.ಮೇ.25:- 2025-26ನೇ ಸಾಲಿನ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ / ಉಪನ್ಯಾಸಕರ ವೃಂದದ ವರ್ಗಾವಣೆಗಳನ್ನು ಗಣಕೀಕೃತ ಕೌನ್ಸೆಲಿಂಗ್ ಮೂಲಕ ನಿರ್ವಹಿಸುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮಗಳು 2020″ ಮತ್ತು ಉಲ್ಲೇಖ (03) ರ ನಿಯಮಗಳನ್ವಯ ಪ್ರಾಂಶುಪಾಲರ/ ಉಪನ್ಯಾಸಕರ ವರ್ಗಾವಣೆಗಳನ್ನು ಗಣಕೀಕೃತ ಕೌನ್ಸೆಲಿಂಗ್‌ ಮೂಲಕ ನಡೆಸಲು ಅವಕಾಶ ಕಲ್ಪಿಸಲಾಗಿದೆ.

ಅದರಂತೆ, 2025-26 ನೇ ಸಾಲಿಗೆ ಪ್ರಾಂಶುಪಾಲರ /ಉಪನ್ಯಾಸಕರ ವರ್ಗಾವಣೆಗಳನ್ನು ಗಣಕೀಕೃತ ಕೌನ್ಸೆಲಿಂಗ್ ಮೂಲಕ ನಡೆಸಲಾಗುವುದು. ಈ ವರ್ಗಾವಣೆಗೆ ಅರ್ಜಿಗಳನ್ನು ಆನ್ ಲೈನ್ ಮೂಲಕ ಮಾತ್ರ ಸಲ್ಲಿಸತಕ್ಕದು. ಖುದ್ದಾಗಿ ಅಥವಾ ಪತ್ರ ಮುಖೇನ ಲಿಖಿತವಾಗಿ ಸಲ್ಲಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಮತ್ತು ಪರಿಗಣಿಸಲಾಗುವುದಿಲ್ಲ.

ಸಾಮಾನ್ಯ ಸೂಚನೆಗಳು:

1) ವರ್ಗಾವಣಾ ಅಧಿನಿಯಮ ಮತ್ತು ನಿಯಮಗಳಲ್ಲಿ ನಿಗಧಿಪಡಿಸಿರುವ ವಿಧಿ ವಿಧಾನಗಳನ್ವಯ ಪ್ರಾಂಶುಪಾಲರ / ಉಪನ್ಯಾಸಕರ ವರ್ಗಾವಣೆಗಳನ್ನು ಗಣಕೀಕೃತ ಕೌನ್ಸೆಲಿಂಗ್ ಮೂಲಕ ನಡೆಸಲಾಗುವುದು.

2) ಉಪನ್ಯಾಸಕರ ವರ್ಗಾವಣೆಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡಂತೆ ವರ್ಗಾವಣೆ ವಿಧಗಳಿವೆ:

ವರ್ಗಾವಣಾ ನಿಯಮ 10ರನ್ವಯ ಹೆಚ್ಚುವರಿ ವರ್ಗಾವಣೆಗಳು.
ಕೋರಿಕೆ ವರ್ಗಾವಣೆಗಳು.
ಪರಸ್ಪರ ವರ್ಗಾವಣೆಗಳು.

ಸಾರ್ವಜನಿಕ ಹಿತದೃಷ್ಠಿಯ ಮೇರೆಗೆ ವರ್ಗಾವಣೆ.
(ಪ್ರಸುತ ಸಾಲಿನಲ್ಲಿ ಹೆಚ್ಚುವರಿ ವರ್ಗಾವಣೆಗಳು ಇರುವುದಿಲ್ಲ)

3) ವರ್ಗಾವಣೆಗಳಿಗೆ ನಿಗದಿಪಡಿಸಿರುವ ಮಿತಿಗಳು:

4) ವರ್ಗಾವಣಾ ಅಧಿನಿಯಮದಂತೆ ಪರಿಭಾಷೆಗಳು:

“ಕನಿಷ್ಠ ಅವಧಿ” ಎಂದರೆ, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸತತವಾಗಿ ಮೂರು ವರ್ಷಗಳ ដ ថ (“minimum period” means a continuous service of three years in a government Pre university College) ಎಂಬುದಾಗಿ ವ್ಯಾಖ್ಯಾನಿಸತಕ್ಕದ್ದು.
ಉಪನ್ಯಾಸಕರ ಕಾರ್ಯಭಾರ: ಪ್ರಾಯೋಗಿಕ ವಿಷಯಗಳಿಗೆ ಸಂಬಂಧಿಸಿದಂತೆ, ವಿದ್ಯಾರ್ಥಿ-ಉಪನ್ಯಾಸಕರ ಅನುಪಾತವು ಪ್ರಾಯೋಗಿಕ ವಿಷಯಗಳಿಗೆ 160:1 ರಷ್ಟಿರಬೇಕು ಮತ್ತು ಪ್ರಾಯೋಗಿಕವಲ್ಲದ ವಿಷಯಗಳಿಗೆ (ಭಾಷಾ ವಿಷಯಗಳನ್ನೊಳಗೊಂಡಂತೆ) ಈ ಅನುಪಾತವು 320:1 ರಷ್ಟಿರಬೇಕು.
III. ಕಾರ್ಯಭಾರ ಅಂದರೆ, ವಾರದಲ್ಲಿ ಉಪನ್ಯಾಸಕರು ಪಾಠ ಮಾಡಬೇಕಿರುವ ಅವಧಿ, ಪ್ರಾಯೋಗಿಕ ವಿಷಯಗಳಿಗೆ ಸಂಬಂಧಿಸಿದಂತೆ ವಾರವೊಂದರಲ್ಲಿ 24 ಗಂಟೆಗಳು.

ಉದಾಹರಣೆಗೆ: ಎಂಭತ್ತು ವಿದ್ಯಾರ್ಥಿಗಳನ್ನು ಒಳಗೊಂಡು ಮತ್ತು ಎರಡು ವಿಭಾಗಗಳನ್ನು ಹೊಂದಿದ ವಿಜ್ಞಾನ ವಿಷಯಗಳಿಗೆ 08 ಗಂಟೆಗಳು ಪಾಠಕ್ಕೆ ಮತ್ತು 16 ಗಂಟೆಗಳು ಪ್ರಯೋಗಗಳಿಗೆ ನಿಗದಿಯಾಗಿರುತ್ತವೆ (ಪ್ರಾಯೋಗಿಕ ತರಗತಿಯಲ್ಲಿ 20 ವಿದ್ಯಾರ್ಥಿಗಳ ತಂಡಕ್ಕೆ 02 ಗಂಟೆಗಳು).

5) 2025-26 ನೇ ಸಾಲಿಗೆ ವರ್ಗಾವಣೆ ಬಯಸುವ ಪ್ರಾಂಶುಪಾಲರು / ಉಪನ್ಯಾಸಕರು ಅಂತರ್ಜಾಲದ (on-line) (https://pue.karnataka.gov.in/) . ಪರೀಕ್ಷಾರ್ಥ ಅವಧಿ [ಸೇವಾವಧಿ] ತೃಪ್ತಿಕರವಾಗಿ ಪೂರೈಸಿ ಘೋಷಿಸಲ್ಪಟ್ಟ ಉಪನ್ಯಾಸಕರು ಮಾತ್ರ ಅರ್ಹರಿರುತ್ತಾರೆ (ಪ್ರಾಂಶುಪಾಲರಿಗೆ ಅನ್ವಯಿಸುವುದಿಲ್ಲ).

6) ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸುವ ದಿನಾಂಕವನ್ನು ವೇಳಾಪಟ್ಟಿಯಲ್ಲಿ ಪ್ರಕಟಿಸಲಾಗುವುದು.

7) ಅಮಾನತ್ತುಗೊಂಡ ನಂತರದಲ್ಲಿ ಶಿಸ್ತುಕ್ರಮ ಬಾಕಿ ಇರಿಸಿ ಅಮಾನತ್ತು ತೆರವುಗೊಳಿಸಿ ಸ್ಥಳನಿಯುಕ್ತಿಗೊಂಡ ಪ್ರಾಂಶುಪಾಲರು / ಉಪನ್ಯಾಸಕರು ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

prajaprabhat

Recent Posts

ದುಗನೂರು, ಬಿಚ್ಚಾಲಿ, ಗಿಲ್ಲೇಸೂಗೂರ ಗ್ರಾಮಗಳಲ್ಲಿ ಶಾಸಕರಾದ<br>ಬಸನಗೌಡ ದದ್ದಲ್ ಅವರಿಂದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ರಾಯಚೂರು.04.ಆಗಸ್ಟ.25: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರ ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು…

4 hours ago

ಅತಿಥಿ ಉಪನ್ಯಾಸಕರಿಲ್ಲದೆ ಮಂಗಳೂರು ವಿಭಾಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ತರಗತಿಗಳಿಗೆ ಸಂಕಷ್ಟ: ಮುಖಂಡರ ಆಕ್ರೋಶ

ಮಂಗಳೂರು.04.ಆಗಸ್ಟ್ .25:- ರಾಜ್ಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಜುಲೈ 25 ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದ್ದರೂ, ಅತಿಥಿ…

4 hours ago

Scholarship ಕೋಟಕ್ ಕನ್ಯಾ ಸ್ಕಾಲರ್‌ಷಿಪ್,

ಕೋಟಕ್ ಕನ್ಯಾ ಸ್ಕಾಲರ್‌ಷಿಪ್, ಕೋಟಕ್ ಮಹೀಂದ್ರಾ ಗ್ರೂಪ್‌ನಿಂದ ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ಯುವತಿಯರಿಗೆ ಉನ್ನತ ಶಿಕ್ಷಣಕ್ಕಾಗಿ ನೀಡಲಾಗುವ ವಿದ್ಯಾರ್ಥಿವೇತನವಾಗಿದೆ. ಈ…

5 hours ago

ಹಿಮಾಚಲ ಪ್ರದೇಶದಾದ್ಯಂತ ಮಾನ್ಸೂನ್ ಮಳೆ ನಿರಂತರವಾಗಿ ಸುರಿಯುತ್ತಿದೆ.

ಹೊಸ ದೆಹಲಿ.04.ಆಗಸ್ಟ್.25:- ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಸೇರಿದಂತೆ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಮಾನ್ಸೂನ್ ಮಳೆ ನಿರಂತರವಾಗಿ ಮುಂದುವರಿದಿದೆ. ನಿರಂತರ…

5 hours ago

ಬಾಗಲಕೋಟೆಯಲ್ಲಿ ಭಾರತೀಯ ರೆಡ್ಡಿ ಸಮಾಜದವರ ಸಮಾವೇಶ ಶೀಘ್ರ – ಪ್ರಭಾಕರರೆಡ್ಡಿ

ಕೊಪ್ಪಳ.04.ಆಗಸ್ಟ್ . 25ಕರ್ನಾಟಕ ತಮಿಳನಾಡು,ಆಂಧ್ರ, ಕೇರಳ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿರುವ ರೆಡ್ಡಿ ಸಮಾಜವರನ್ನು ಒಗ್ಗೂಡಿಸಿ ಬಾಗಲಕೋಟೆಯಲ್ಲಿ ಶೀಘ್ರದಲ್ಲಿಯೇ ಭಾರತೀಯ…

6 hours ago

2025–26ನೇ ಶೈಕ್ಷಣಿಕ ವರ್ಷಕ್ಕೆ ಕರ್ನಾಟಕದಾದ್ಯಂತ ಅತಿಥಿ ಉಪನ್ಯಾಸಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು.04.ಆಗಸ್ಟ್.25:- 2025–26ನೇ ಶೈಕ್ಷಣಿಕ ವರ್ಷಕ್ಕೆ ಹೊಸ ಅರ್ಜಿಗಳನ್ನು ಆಹ್ವಾನಿಸುವ ಕಾಲೇಜು ಶಿಕ್ಷಣ ಇಲಾಖೆ ಇತ್ತೀಚಿನ ಅಧಿಸೂಚನೆಯ ಬಗ್ಗೆ ಕರ್ನಾಟಕದಾದ್ಯಂತ ಅತಿಥಿ…

15 hours ago