OPS ರಾಜ್ಯ ‘ಸರ್ಕಾರಿ ನೌಕರರಿಗೆ’ ಹಳೇ ಪಿಂಚಣಿ’ ಮರುಜಾರಿಗೊಳಿಸಿ ಸರ್ಕಾರ ಆದೇಶ.!

ಬೆಂಗಳೂರು.12.ಜೂನ್.25:- 2006ರ ಏಪ್ರಿಲ್ 4ಕ್ಕಿಂತ ಮೊದಲು ನೇಮಕಗೊಂಡ ರಾಜ್ಯದ 13 ಸಾವಿರ ಎನ್‌ಪಿಎಸ್ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಮರುಜಾರಿಗೊಳಿಸಿ ಸರ್ಕಾರ ಆದೇಶಿಸಿದೆ.

ಕರ್ನಾಟಕ ರಾಜ್ಯ ಸರ್ಕಾರವು ಉಲ್ಲೇಖ-(2) ಮತ್ತು (4) ರ ಆದೇಶದಲ್ಲಿ ದಿನಾಂಕ: 01.04.2006 ಮತ್ತು ತದನಂತರ ಸೇವೆಗೆ ಸೇರಿದ ನೌಕರರಿಗೆ ನೂತನ ಅಂಶದಾಯಿ ಕೊಡುಗೆ ಯೋಜನೆಗಳನ್ನು (ರಾಷ್ಟ್ರೀಯ ಪಿಂಚಣಿ ಯೋಜನೆ-ಎನ್.ಪಿ.ಎಸ್) ಜಾರಿಗೊಳಿಸಿರುತ್ತದೆ.

ಈ ಯೋಜನೆಯಲ್ಲಿ ಒಳಪಡುವ ನೌಕರರ ವೇತನದಲ್ಲಿ ಪ್ರತಿ ತಿಂಗಳು ಮೂಲ ವೇತನ ಮತ್ತು ತುಟ್ಟಿಭತ್ಯೆಯ ಮೇಲೆ ಶೇಕಡ 10 ರಷ್ಟು ವಂತಿಗೆಯನ್ನು ಕಟಾವಣೆಗೊಳಿಸಿ, ಸದರಿ ಮೊತ್ತಕ್ಕೆ ಸರ್ಕಾರದ ವತಿಯಿಂದ ವೇತನ ಮತ್ತು ತುಟ್ಟಿಭತ್ಯೆಯ ಮೇಲೆ ಶೇಕಡ 14 ರಷ್ಟು ವಂತಿಗೆಯನ್ನು ಕೊಡುಗೆಯಾಗಿ ನೀಡಿ, ಈ ಕ್ರೋಢೀಕೃತ ನಿಧಿಯನ್ನು (Employee & Govt Contribution) ಪೆನ್‌ಷನ್ ಫಂಡ್ ರೆಗ್ಯೂಲೆಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿಯ (ಪಿ.ಎಫ್.ಆರ್.ಡಿ.ಎ) ಅಧೀನದಲ್ಲಿರುವ ಎನ್.ಪಿ.ಎಸ್ ಟ್ರಸ್ಟ್, ಮುಂಬೈ, ರವರ ಮುಖಾಂತರ ಸಂಬಂಧಿಸಿದ ನೌಕರರ ಪ್ರಾನ್ ಖಾತೆಗಳಿಗೆ (ಪರ್ಮನೆಂಟ್ ರಿಟೈರ್ ಮೆಂಟ್ ಆಕೌಂಟ್ ನಂಬರ್) ಸರ್ಕಾರವು ಜಮೆ ಮಾಡಲಾಗುತ್ತಿದೆ.

ಈ ಸಂಬಂಧ, ರಾಜ್ಯ ಸರ್ಕಾರದ ಮಾದರಿಯಂತೆ ಮೇಲಿನ ಎನ್.ಪಿ.ಎಸ್ ಯೋಜನೆಯನ್ನು ಉಲ್ಲೇಖ-(3) ಮತ್ತು (5) ರಲ್ಲಿ ಮಂಡಳಿಯಲ್ಲಿಯೂ ಸಹಾ ಯಥಾವತ್ತಾಗಿ ಅಳವಡಿಸಿಕೊಳ್ಳಲಾಗಿತ್ತು.

ಹಾಗೂ ಉಲ್ಲೇಖ-(3)ರಲ್ಲಿ ಎನ್.ಪಿ.ಎಸ್ ಯೋಜನೆಗೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರವು ಕಾಲಕಾಲಕ್ಕೆ ನೀಡುವ ಮಾರ್ಗಸೂಚಿಗಳನ್ನು ಯಥಾವತ್ತಾಗಿ ಮಂಡಳಿಯಲ್ಲಿ ಅಳವಡಿಸಿಕೊಳ್ಳಲು ಆದೇಶವಾಗಿರುತ್ತದೆ.

ಮುಂದುವರೆದು, ರಾಜ್ಯ ಸರ್ಕಾರವು ಉಲ್ಲೇಖ-(6)ರ ಆದೇಶದಲ್ಲಿ ದಿನಾಂಕ: 01.04.2006ರ ಪೂರ್ವದಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗಾಗಿ ಹೊರಡಿಸಿದ ನೇಮಕಾತಿ ಅಧಿಸೂಚನೆಗಳ ಮೇರೆಗೆ ಆಯ್ಕೆ ಹೊಂದಿ ದಿನಾಂಕ: 01.04.2006 ರಂದು ಅಥವಾ ಆ ದಿನಾಂಕದ ನಂತರ ಸೇವೆಗೆ ಸೇರಿರುವ ಕಾರಣದಿಂದ ಎನ್.ಪಿ.ಎಸ್ ಯೋಜನೆಗೆ ವ್ಯಾಪ್ತಿಗೊಳಪಟ್ಟಿರುವ ನೌಕರರನ್ನು ಸರ್ಕಾರವು ಅವರ ಅಭಿಮತದ ಮೇರೆಗೆ ಕೆಲವು ಷರತ್ತುಗಳಿಗೊಳಪಟ್ಟು ಒಂದು ಬಾರಿಯ ಕ್ರಮವಾಗಿ ಹಿಂದಿನ ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆಗೆ (ಓ.ಪಿ.ಎಸ್) ವ್ಯಾಪ್ತಿಗೊಳಪಡಿಸಲು ಒಪ್ಪಿಗೆ ನೀಡಿ ಆದೇಶಿಸಲಾಗಿರುತ್ತದೆ. ತತ್ಸಂಬಂಧದಲ್ಲಿ, ಮಂಡಳಿಯಲ್ಲಿ ಸದರಿ ಆದೇಶವನ್ನು ಯಥಾವತ್ತಾಗಿ ಉಲ್ಲೇಖ-(7)ರಲ್ಲಿ ಅಳವಡಿಸಿಕೊಳ್ಳಲಾಗಿರುತ್ತದೆ.

ದಿನಾಂಕ: 01.04.2006ರ ಪೂರ್ವದಲ್ಲಿ ಮಂಡಳಿಯಲ್ಲಿ ಉಲ್ಲೇಖ-(1)ರ ಬ್ಯಾಕ್‌ಲಾಗ್ ನೇಮಕಾತಿ ಅಧಿಸೂಚನೆ ಮೂಲಕ 104 ನೌಕರರು ಆಯ್ಕೆ ಹೊಂದಿ ದಿನಾಂಕ: 01.04.2006ರ ನಂತರದಲ್ಲಿ ಮಂಡಳಿಯ ಸೇವೆಗೆ ಸೇರಿದವರಾಗಿರುತ್ತಾರೆ. ಸದರಿ 104 ನೌಕರರ ಪೈಕಿ 102 ನೌಕರರು ಮಾತ್ರ ಮಂಡಳಿಯ ಸೇವೆಯಲ್ಲಿರುತ್ತಾರೆ. ಉಳಿದ 02 ನೌಕರರು ಮಂಡಳಿಯ ಸೇವೆಯಿಂದ ವಯೋಮಿತಿ ಮೇರೆಗೆ ನಿವೃತ್ತಿ ಹೊಂದಿರುತ್ತಾರೆ (ಶ್ರೀ ಹೆಚ್ ತಿಮ್ಮಪ್ಪ, ರವರ ನಿವೃತ್ತಿ ದಿನಾಂಕ: 31.05.2022 ಮತ್ತು ಶ್ರೀ ಬರಡ್ಡಿ ಶಿವಪ್ಪ ರವರ ನಿವೃತ್ತಿ ದಿನಾಂಕ: 31.01.2023). ಈ ಸಂಬಂಧ, ಉಲ್ಲೇಖ-(6) ಮತ್ತು (7)ರ ಆದೇಶಗಳನ್ವಯ ಎನ್.ಪಿ.ಎಸ್ ನಿಂದ ಓ.ಪಿ.ಎಸ್ ಗೆ ಒಳಪಡುವ ಮಂಡಳಿಯ 104 ನೌಕರರಿಂದ ದಿನಾಂಕ: 30.06.2024 ರೊಳಗೆ ಅಭಿಮತವನ್ನು ಪಡೆಯಲಾಗಿತ್ತು.

ಈ ಕುರಿತು ಉಲ್ಲೇಖ-(8)ರ ಪತ್ರದಲ್ಲಿ ನಗರಾಭಿವೃದ್ಧಿ ಇಲಾಖೆಯು ಎನ್.ಪಿ.ಎಸ್ ನಿಂದ ಓ.ಪಿ.ಎಸ್ ಗೆ ಒಳಪಡುವ ನೌಕರರ ಮಾಹಿತಿನ್ನೊಳಗೊಂಡಂತೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ನಿರ್ದೇಶಿಸಿತ್ತು. ಅದರಂತೆ ಮಂಡಳಿಯ 104 ನೌಕರರನ್ನು ಎನ್.ಪಿ.ಎಸ್ ನಿಂದ ಓ.ಪಿ.ಎಸ್ ಗೆ ಒಳಪಡಿಸುವ ಬಗ್ಗೆ ಪ್ರಸ್ತಾವನೆಯನ್ನು ಉಲ್ಲೇಖ-(9)ರಲ್ಲಿ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಾಗಿತ್ತು.

ತತ್ಸಂಬಂಧ, ಉಲ್ಲೇಖ-(9)ರ ಪ್ರಸ್ತಾವನೆಗೆ ಪ್ರತ್ಯುತ್ತರವಾಗಿ ನಗರಾಭಿವೃದ್ಧಿ ಇಲಾಖೆಯು ಉಲ್ಲೇಖ-(13) ಮತ್ತು (14) ರ ಪತ್ರದಲ್ಲಿ ಎನ್.ಪಿ.ಎಸ್ ನಿಂದ ಓ.ಪಿ.ಎಸ್ ಗೆ ಒಳಪಡುವ ಅರ್ಹ ನೌಕರರ ಪ್ರಾನ್ ಖಾತೆಯಲ್ಲಿರುವ ಎನ್.ಪಿ.ಎಸ್ ವಂತಿಗೆಗಳನ್ನು ಹಿಂಪಡೆದು ಇತ್ಯರ್ಥಪಡಿಸಲು ಸರ್ಕಾರದ ಉಲ್ಲೇಖ-(10)ರಲ್ಲಿನ ಅಂಶಗಳನ್ನು ಪರಿಶೀಲಿಸಿ ನಿಯಮಾನುಸಾರ ಮಂಡಳಿಯ ಹಂತದಲ್ಲಿಯೇ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿರುತ್ತದೆ.


ಈ ಬಗ್ಗೆ ಮಂಡಳಿಯ ನೌಕರರ ಸಂಘ ಹಾಗೂ ಎನ್.ಪಿ.ಎಸ್ ನೌಕರರ ಸಂಘದವರು ಉಲ್ಲೇಖ-(11) ಮತ್ತು (12) ರಲ್ಲಿ ಪ್ರತ್ಯೇಕ ಮನವಿಗಳನ್ನು ಸಲ್ಲಿಸಿ ಸರ್ಕಾರದ ಆದೇಶಗಳಂತೆ ಮಂಡಳಿಯ ಅರ್ಹ ನೌಕರರಿಗೂ ಎನ್.ಪಿ.ಎಸ್ ನಿಂದ ಓ.ಪಿ.ಎಸ್ ಯೋಜನೆಗೆ ಒಳಪಡಿಸಲು ಕೋರಿರುತ್ತಾರೆ.

ಈ ಹಿನ್ನೆಲೆಯಲ್ಲಿ ದಿನಾಂಕ: 01.04.2006ರ ಪೂರ್ವದಲ್ಲಿ ಉಲ್ಲೇಖ-(1)ರ ಬ್ಯಾಕ್‌ಲಾಗ್ ನೇಮಕಾತಿ ಅಧಿಸೂಚನೆ ಮೂಲಕ ಆಯ್ಕೆ ಹೊಂದಿ ದಿನಾಂಕ: 01.04.2006ರ ನಂತರದಲ್ಲಿ ಮಂಡಳಿಯ ಸೇವೆಗೆ ಸೇರಿರುವ ಮಂಡಳಿಯ ಒಟ್ಟು 104 ನೌಕರರನ್ನು ಉಲ್ಲೇಖ-(6)ರ ಸರ್ಕಾರದ ಆದೇಶದನ್ವಯ ಓ.ಪಿ.ಎಸ್ ಯೋಜನೆಗೆ ವ್ಯಾಪ್ತಿಗೊಳಪಡಿಸಲು ಹಾಗೂ ಸದರಿ ನೌಕರರ ಪ್ರಾನ್ ಖಾತೆಯಲ್ಲಿರುವ ಎನ್.ಪಿ.ಎಸ್ ವಂತಿಗೆಗಳನ್ನು ಹಿಂಪಡೆದು ಇತ್ಯರ್ಥಪಡಿಸಲು ಉಲ್ಲೇಖ-(10)ರ ಸರ್ಕಾರದ ಆದೇಶದಲ್ಲಿನ ಮಾರ್ಗಸೂಚಿಗಳನ್ನು ಯಥಾವತ್ತಾಗಿ ಮಂಡಳಿಯಲ್ಲಿ ಅಳವಡಿಸಿಕೊಳ್ಳಲು ದಿನಾಂಕ: 25.04.2025 ರಂದು ನಡೆದ ಮಂಡಳಿ ಸಭೆಯಲ್ಲಿ ನಿರ್ಣಯವಾಗಿರುತ್ತದೆ. ಆದ್ದರಿಂದ, ಈ ಕೆಳಕಂಡಂತೆ ಆದೇಶಿಸಲಾಗಿದೆ.

ಆದೇಶ:-

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಪಿಂಚಣಿ ಯೋಜನೆಗೊಳಪಟ್ಟ ಈ ಕೆಳಕಂಡ ಅಧಿಕಾರಿ/ ನೌಕರರು ದಿನಾಂಕ: 01.04.2006ರ ಪೂರ್ವದಲ್ಲಿನ ಉಲ್ಲೇಖ (1)ರ ಬ್ಯಾಕ್‌ ಲಾಗ್ ನೇಮಕಾತಿ ಅಧಿಸೂಚನೆ ಮೂಲಕ ಆಯ್ಕೆ ಹೊಂದಿ ದಿನಾಂಕ: 01.04.2006ರ ನಂತರದಲ್ಲಿ ಮಂಡಳಿಯ ಸೇವೆಗೆ ಸೇರಿರುವುದರಿಂದ ಉಲ್ಲೇಖ-(6)ರ ಸರ್ಕಾರದ ಆದೇಶದನ್ವಯ ಅವರನ್ನು ಹಿಂದಿನ ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆಗೆ (ಓ.ಪಿ.ಎಸ್) ವ್ಯಾಪ್ತಿಗೊಳಪಡಿಸಿ ಆದೇಶಿಸಿದೆ.

prajaprabhat

Recent Posts

ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತರಬೇತಿ: ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ.

ಬೀದರ.02.ಆಗಸ್ಟ.25:- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2025-26ನೇ ಸಾಲಿಗೆ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಯು.ಪಿ.ಎಸ್.ಸಿ ನಾಗರೀಕ ಸೇವೆ. ಕೆ.ಎ.ಎಸ್ ಗೆಜೆಟೆಡ್…

2 hours ago

ಪ್ರಜ್ವಲ್ ರೇವಣ್ಣ  ಅವರಿಗೆ ಜೀವಾವಧಿ ಶಿಕ್ಷೆ.

ಬೆಂಗಳೂರಿನ ವಿಶೇಷ ನ್ಯಾಯಾಲಯ ಬೆಂಗಳೂರು.02.ಆಗಸ್ಟ್.25:- ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಮತ್ತು ಅಮಾನತುಗೊಂಡ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಅವರಿಗೆ…

7 hours ago

ಅರಿವು ಶೈಕ್ಷಣಿಕ ಸಾಲ ಯೋಜನೆಯುಡಿ ಅರ್ಜಿ ಆಹ್ವಾನ

ಬೀದರ.02.ಆಗಸ್ಟ್.25- ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸಾಲ-ಸೌಲಭ್ಯಕ್ಕಾಗಿ ಅರ್ಜಿ…

8 hours ago

ಆಗಸ್ಟ್.8 ರಿಂದ 25 ರವರೆಗೆ ಅಗ್ನಿವೀರ ನೇಮಕಾತಿ ರ‍್ಯಾಲಿ

ಬೀದರ.02. ಆಗಸ್ಟ್.25:- ಅಗ್ನಿವೀರ ನೇಮಕಾತಿ ರ‍್ಯಾಲಿಯು ರಾಯಚೂರಿನ ಕರ್ನಾಟಕ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮೈದಾನದಲ್ಲಿ ಆಗಸ್ಟ್.8 ರಿಂದ 25 ರವರೆಗೆ…

8 hours ago

ರಾಜ್ಯದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : ‘ವಿದ್ಯಾಸಿರಿ’ ವಿದ್ಯಾರ್ಥಿವೇತನ ಸೇರಿ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಬೆಂಗಳೂರು.02.ಆಗಸ್ಟ್.25:- 2025-26 ನೇ ಸಾಲಿಗೆ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯ…

8 hours ago

ಅತಿಥಿ ಉಪನ್ಯಾಸಕರ  ಸಮಸ್ಯೆಗಳನ್ನು (ಕಾನೂನು ತಿದ್ದುಪಡಿ) ಸರಿಪಡಿಸಲು. ಡಾ. ಹನಮಂತ್ ಗೌಡ ಕಲ್ಮನಿ ಮನವಿ.

ಗದಗ.02.ಆಗಸ್ಟ್.25:- ಇಂದು..ಬೆಳಗ್ಗೆ ಹುಲಕೋಟಿ ಯಲ್ಲಿ. ಕಾನೂನು .ಶಾಸನ ರಚನೆ.ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಮಾನ್ಯ ಶ್ರೀ ಡಾ.ಎಚ್.ಕೆ.ಪಾಟೀಲ ಸರ್ ಅವರನ್ನು…

8 hours ago