“GTTC COURSE” ಜಿಟಿಟಿಸಿ ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನ:

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದ್ದು, ಯುವ ಜನತೆ ಕೌಶಲಾಧಾರಿತ GTTC COURSE” ಜಿಟಿಟಿಸಿ ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನ .

ವಿದ್ಯಾರ್ಥಿಗಳು ಗಿಟಿಟಿಸಿ ಕೋರ್ಸ್ ಆಯ್ಕೆ ಮಾಡಿಕೊಳ್ಳುವ ಮೂಲಕ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ವಿದ್ಯಾರ್ಥಿಗಳು ತಮ್ಮ ಎಸ್‍ಎಸ್‍ಎಲ್‍ಸಿ ನಂತರ ವೃತ್ತಿ ಶಿಕ್ಷಣದತ್ತ ಹೊರಳುವ ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ತರಬೇತಿ ನೀಡುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಉದ್ಯೋಗ ಭರವಸೆಯ ಕೋರ್ಸ್‍ಗಳನ್ನು ನೀಡುವಲ್ಲಿ ಮುಂಚೂಣೆಯಲ್ಲಿದೆ.

ಚಿತ್ರದುರ್ಗ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ 2025-26ನೇ ಸಾಲಿಗೆ ಡಿಪ್ಲೋಮಾ ಪ್ರವೇಶಾತಿಯು ಪ್ರಾರಂಭವಾಗಿದ್ದು,

1. ಡಿಪ್ಲೋಮಾ ಇನ್‍ಟೂಲ್ ಅಂಡ್ ಡೈ ಮೇಕಿಂಗ್

2. ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್

3. ಡಿಪ್ಲೋಮಾ ಇನ್ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಬ ಮೂರು ಕೋರ್ಸ್‍ಗಳಿವೆ.

ಈ ಕೋರ್ಸ್‍ಗಳ ಅವಧಿ ಮೂರು ವರ್ಷ ಹಾಗೂ 1 ವರ್ಷ ಕಡ್ಡಾಯವಾಗಿ ಕೈಗಾರಿಕೆಗಳಿಗೆನಿಯೋಜಿಸಲಾಗುವುದು.


ಡಿಪ್ಲೋಮಾ ಆದ ನಂತರ ದೇಶ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆಗಳಿರುತ್ತವೆ. ಹಾಗೂ ಚಿತ್ರದುರ್ಗ ಜಿಟಿಟಿಸಿ ಕೇಂದ್ರದಲ್ಲಿ ಡಿಪ್ಲೋಮಾ ಕೋರ್ಸ್‍ಗಳಿಗೆ ಶೇ.70 ಪ್ರಾಯೋಗಿಕ ತರಬೇತಿ ಹಾಗೂ ಶೇ.30 ಥೇರಿ ಅನುಗುಣವಾಗಿ 20ಕ್ಕೂ ಹೆಚ್ಚು ಸುಸಜ್ಜಿತವಾಗಿರುವ ಪ್ರಯೋಗಾಲಗಳಿದ್ದು, ಉತ್ತಮವಾದ ತರಬೇತಿ ನೀಡಲಾಗುತ್ತದೆ.

ವಿಶೇಷವಾಗಿ ದ್ವೀತಿಯ ಪಿಯುಸಿ (ವಿಜ್ಞಾನ) ಹಾಗೂ ಐಟಿಐ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೇರವಾಗಿ ದ್ವೀತಿಯ ವರ್ಷಕ್ಕೆ ಜಿಟಿಟಿಸಿ ಡಿಪ್ಲೋಮಾಗೆ ದಾಖಲಾತಿ ಪಡೆಯಬಹುದು. ಅಲ್ಲದೇ ಡಿಪ್ಲೋಮಾ ಉತ್ತೀರ್ಣರಾದ ವಿದ್ಯಾರ್ಥಿಗಳು ನೇರವಾಗಿ ದ್ವೀತಿಯ ವರ್ಷದ ಇಂಜಿನಿಯರಿಂಗ್‍ಗೆ ಪ್ರವೇಶ ಪಡೆಯಬಹುದು. ಈಗಾಗಲೇ ಆನ್‍ಲೈನ್ ಪ್ರವೇಶ ಅರ್ಜಿಗಳು ಆರಂಭವಾಗಿದ್ದು “ಮೊದಲು ಬಂದವರಿಗೆ ಮೊದಲ ಆದ್ಯತೆ” ಮೇರೆಗೆ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ.

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು (ಜಿಟಿಟಿಸಿ) ಕರ್ನಾಟಕ ರಾಜ್ಯ ಸರ್ಕಾರ ಮತ್ತು ಡೆನ್ಮಾರ್ಕ್ ಸರ್ಕಾರದ ನಡುವಿನ ಒಂದು ಒಪ್ಪಂದಕ್ಕನುಗುಣವಾಗಿ 1972 ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭಿಸಲಾಯಿತು. ಈ ಕೇಂದ್ರದ ಮುಖ್ಯ ಉದ್ದೇಶವೆನೆಂದರೆ ನುರಿತ ಮಾನವ ಸಂಪನ್ಮೂಲವನ್ನು ಕೈಗಾರಿಕ ಕ್ಷೇತ್ರಕ್ಕೆ ಒದಗಿಸುವುದು ಹಾಗೂ ಕೈಗಾರಿಕ ಸಂಸ್ಥೆಗಳ ತಂತ್ರಜ್ಞಾನ ಮತ್ತು ತರಬೇತಿಗಳ ನೆರವು ನೀಡುವುದು.

ಕೈಗಾರಿಕ ಕ್ಷೇತ್ರದಲ್ಲಿ ಯುವಕರನ್ನು ಪ್ರೋತ್ಸಾಹಿಸಲು ಯಂತ್ರಗಳ ಬಗ್ಗೆ ಇನ್ನಷ್ಟೂ ಅರಿವು ಮೂಡಿಸುವ ಸಲುವಾಗಿ 2021ರಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವನ್ನು ಚಿತ್ರದುರ್ಗದಲ್ಲಿ ಸ್ಥಾಪಿಸಲಾಯಿತು. ಇಲ್ಲಿಯವರೆಗೆ ಹಲವಾರು ಬಡ ಹಿಂದುಳಿದ ರೈತರ ಮಕ್ಕಳು ತಾಂತ್ರಿಕ ತರಬೇತಿಯನ್ನು ಪಡೆದು ದೇಶ-ವಿದೇಶದ ದೊಡ್ಡದೊಡ್ಡ ಕಂಪನಿಗಳಲ್ಲಿ ದೊಡ್ಡ ಹುದ್ದೆಗಳನ್ನು ಅಲಂಕರಿಸುತ್ತಾರೆ.

ಏಕಕಾಲದಲ್ಲಿ ಉದ್ಯೋಗ ಕೇಂದ್ರಿತ, ಸ್ವಯಂ ಉದ್ಯೋಗಿಗಳಾಗಲು ತರಬೇತಿ: ಜಿಟಿಟಿಸಿ ಚಿತ್ರದುರ್ಗಕೇಂದ್ರದಲ್ಲಿ ಉತ್ತಮವಾದ ಕ್ಯಾಂಪಸ್ ವ್ಯವಸ್ಥೆ, ವಿಶಾಲವಾದ ಕಟ್ಟಡಗಳು, ಅತ್ಯುತ್ತಮ ಪ್ರಾಯೋಗಿಕ ಕಲಿಕೆಗೆ ಪೂರಕವಾದ ವರ್ಕ್‍ಶಾಪ್, ಲ್ಯಾಬೋರೇಟರಿ ಸೌಲಭ್ಯಗಳಿಂದ ಉದ್ಯೋಗಾಧಾರಿತ ಪ್ರಾಯೋಗಿಕತಾಂತ್ರಿಕ ಶಿಕ್ಷಣ ಕಲಿಕೆಗೆ ಗಡಿಭಾಗದ ಹಾಗೂ ಸುತ್ತಲಿನ ವಿದ್ಯಾರ್ಥಿಗಳಿಗೆ ವರದಾನವಾಗಿದೆ.

ಜಿಟಿಟಿಸಿ ಮುಖ್ಯ ಪರಿಕಲ್ಪನೆ ಯಂತ್ರೋಪಕರಣಗಳ ಚಾಲನೆ, ನಿರ್ವಹಣೆ ಉದ್ಯೋಗಾದಾರಿತ ತಾಂತ್ರಿಕ ತರಬೇತಿ ನೀಡುವುದೇ ಆಗಿರುವುದರಿಂದ ಇದು ಏಕ ಕಾಲದಲ್ಲಿ ಉದ್ಯೋಗ ಕೇಂದ್ರಿತವು ಸ್ವಯಂ ಉದ್ಯಮಿಗಳಾಗಲೂ ತರಬೇತಿ ನೀಡುವ ಶಿಕ್ಷಣವೂ ಆಗಿದೆ.

ಈ ಮೇಲ್ಕಾಣಿಸಿದ ಡಿಪ್ಲೋಮಾ ಕೋರ್ಸ್‍ಗಳ ವಿಶೇಷತೆಗಳೆಂದರೆ ಡಿಪ್ಲೋಮಾ ಇನ್‍ಟೂಲ್ ಅಂಡ್‍ಡೈ ಮೇಕಿಂಗ್ ಒಂದು ಕಾರಿನ ಬಾಡಿ ಪಾಟ್ರ್ಸ್ ತಯಾರಿಸಲಿಕ್ಕೆ ಏನೇನು ಬೇಕೋ ಅಂತ ಮೌಲ್ಡ್ ಡಿಸೈನ್ ಮತ್ತಿತರೆ ಸಂಗತಿಗಳನ್ನು ಕಲಿಯುತ್ತಾರೆ. ಡಿಪ್ಲೋಮಾ ಇನ್ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಹಾಗೂ ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್ ಈ 2 ಕೋರ್ಸ್‍ಗಳಲ್ಲಿ ಆಟೋಮೇಶನ್ ಹಾಗೂ ರೋಬೋಟಿಕ್ ಮಾಡೋದು ಹೇಗೆ? ಅವುಗಳಿಗೆ ಕೋಡಿಂಗ್ ಮಾಡುವುದು ಹೇಗೆ? ಅನ್ನೋದನ್ನು ಕಲಿಯುತ್ತಾರೆ. ಪಠ್ಯದಲ್ಲಿ ಓದಿದ್ದನ್ನು ಪ್ರಾಯೋಗಿಕವಾಗಿ ಕಲಿತಾಗ ಮಾತ್ರ ಕೌಶಲ್ಯ ಕಲಿಕೆಯಲ್ಲಿ ನಿಖರತೆ ಬರುತ್ತದೆ.

ಕಡಿಮೆ ವೆಚ್ಚದಲ್ಲಿ ಜಿಟಿಟಿಸಿ ಶಿಕ್ಷಣ: ಇನ್ನಿತರ ಖಾಸಗಿ ಕಾಲೇಜಿಗಳಿಗೆ ಹೋಲಿಸಿದಾಗ ಜಿಟಿಟಿಸಿ ಶಿಕ್ಷಣವನ್ನು ಕಡಿಮೆ ವೆಚ್ಚದಲ್ಲಿ ಮಾಡಬಹುದು. ಜಿಟಿಟಿಸಿಯಲ್ಲಿ ವಿದ್ಯಾರ್ಥಿಗೆ ವಾರ್ಷಿಕ ಕೇವಲ 34 ಸಾವಿರದಷ್ಟು ಖರ್ಚು ಬರುತ್ತದೆ. ಕರ್ನಾಟಕ ಸರ್ಕಾರ ಪ್ರತಿ ವಿದ್ಯಾರ್ಥಿಗೂ 26 ಸಾವಿರದಿಂದ 28 ಸಾವಿರದ ತನಕ ವಿದ್ಯಾರ್ಥಿಗೆ ವೇತನ ರೂಪದಲ್ಲಿ ವಾಪಸ್ ಕೊಡುತ್ತದೆ ಬೇರೆ ಬೇರೆ ಯೋಜನೆಗಳಡಿ ಈ ಸಹಾಯ ಸಿಗಲಿದೆ ಯೂನಿಫಾರಂ, ಕ್ಯಾಲುಕೇಲಟರ್, ಸೇಫ್ಟಿ ಶೂ ನಂತರ ಸಣ್ಣ ಪುಟ್ಟ ಖರ್ಚುಗಳು ಮಾತ್ರ ಬರುತ್ತವೆ.

ಡಿವೈಡಿಂಗ್ ಸಿಸ್ಟಂ ಹಾಸ್ಟೆಲ್ ಸೌಲಭ್ಯವಿದೆ. SC ಎಸ್ಸಿ, ST  ಎಸ್ಟಿ, OBC ಒಬಿಸಿ ವಿದ್ಯಾರ್ಥಿಗಳು ಆಯಾ ಇಲಾಖೆ ವಿದ್ಯಾರ್ಥಿ ನಿಲಯಗಳಿಗೆ ಸೇರಬಹುದು.

ಇಲಾಖೆ ಹಾಸ್ಟೆಲ್‍ಗಳು ದೂರವಾಗುತ್ತವೆ. ಓಡಾಟ ಕೂಡದು ಬಾರಿ ಎನ್ನುವ ಕಾರಣಕ್ಕೆ ಜಿಟಿಟಿಸಿ ಹಾಸ್ಟೆಲ್‍ಗೆ ಬಹುತೇಕರು ಸೇರುತ್ತಾರೆ. ಇಲ್ಲಿ ವಿದ್ಯಾರ್ಥಿಗಳೇ ಹಾಸ್ಟೆಲ್ ಆಗು ಹೋಗುಗಳನ್ನು ನಿರ್ವಹಿಸುತ್ತಾರೆ. ಬಡ ಹಾಗೂ ಮಧ್ಯಮವರ್ಗದ ವಿದ್ಯಾರ್ಥಿಗಳು ಈ ಜಿಟಿಟಿಸಿಗಳ ಮೂಲಕ ತಾಂತ್ರಿಕ ಶಿಕ್ಷಣ ಪಡೆಯುವುದು ಅತ್ಯಂತ ಸುಲಭದ ಮಾರ್ಗವಾಗಿದೆ.

ಹೆಚ್ಚಿನ ಮಾಹಿತಿಗಾಗಿ :

ಚಿತ್ರದುರ್ಗ ಕುಂಚಿಗನಾಳ್ ಕಣಿವೆ ಮಾರಮ್ಮ ದೇವಸ್ಥಾನ ಹಿಂಭಾಗದ ಹಳೆಯ ಬೆಂಗಳೂರು ರಸ್ತೆಯ ಸರ್ವೇ ನಂ.44ರ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ,

ದೂರವಾಣಿ ಸಂಖ್ಯೆ :

9738465834, 9481866855, 9945616114ಗೆ ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಜಿಟಿಟಿಸಿ ಪ್ರಾಂಶುಪಾಲರಾದ ಬಿ.ಎಸ್.ಸುಹಾಸ್ ತಿಳಿಸಿದ್ದಾರೆ.

prajaprabhat

Recent Posts

ಅಮರೇಶ್ವರಮಹಾದ್ವಾರಕ್ಕೆಸಂಸದರಿಂದ #1ಕೋಟಿರೂಪಾಯಿಘೋಷಣೆ

ಔರಾದ.04.ಆಗಸ್ಟ್.25:- ಔರಾದ ಪಟ್ಟಣದ ಉಧ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನವು ಐತಿಹಾಸಿಕ ಹಿನ್ನೆಲೆಯಿಂದ ಕೂಡಿದೆ. ಹಿಂದೆ ಮಹಾನ್ ಸಂತರೊಬ್ಬರ ಭಕ್ತಿಗೆ ಮೆಚ್ಚಿ…

8 hours ago

ನಕಲಿ ಪಿಎಚ್ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮನವಿ.

ಇಂದು ಜಂಟಿ ನಿರ್ದೇಶಕರು. ಕಲಬುರಗಿ ರವರ ಮುಖಾಂತರ ನಕಲಿ ಪಿಎಚ್.ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು…

9 hours ago

ಆಗಸ್ಟ್ 5ರಂದು ನೇರ ಸಂದರ್ಶನ

ರಾಯಚೂರು.04.ಆಗಸ್ಟ್.25: ಇಲ್ಲಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಇಲಾಖೆ ಕಚೇರಿಯಲ್ಲಿ ಆಗಸ್ಟ್ 5ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ…

9 hours ago

ಆಗಸ್ಟ್ 6ರಂದು ಹಟ್ಟಿ ಚಿನ್ನದ ಕಂಪನಿ ನಿಯಮಿತ ಸಿಬ್ಬಂದಿ, ಕಾರ್ಮಿಕರ ವಸತಿ

ಸಮುಚ್ಚಯ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿoದ ಶಂಕುಸ್ಥಾಪನೆ. ರಾಯಚೂರು.04.ಆಗಸ್ಟ್.25: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ವತಿಯಿಂದ ಹಟ್ಟಿ ಗಣಿ ಕಂಪನಿಯ ಸಿಬ್ಬಂದಿ…

9 hours ago

ರಾಯಚೂರು | ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಪ್ರವಾಸ

ರಾಯಚೂರು.04.ಆಗಸ್ಟ್.25: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅoದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಹೆಚ್‌ಎಎಲ್…

10 hours ago

ಔರಾದ (ಬಿ) ತಾಲೂಕಿನಲ್ಲಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ಸತತ 3 ವರ್ಷಗಳಿಂದ ಭಾವಚಿತ್ರಗಳನ್ನು ಲಗತ್ತಿಸಿ ಹಣ ಲೂಟಿ.!

ಭ್ರಷ್ಟ ಅಧಿಕಾರಿಗಳು ಪ್ರತಿ ವರ್ಷ ದುರಸ್ಥಿ ಪಿಠೋಪಕರಣ ಸರಬರಾಜು ಹೆಸರಿನಲ್ಲಿ ಸತತ 3 ವರ್ಷಗಳಿಂದ ಇದೇ ಮಾಡಿ ಭಾವಚಿತ್ರಗಳನ್ನು ಲಗತ್ತಿಸಿ…

11 hours ago