ಬೀದರ.22.ಜೂನ್.25:- ಬೀದರ್ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) DCC BANK BIDAR ಬ್ಯಾಂಕ್ ವತಿಯಿಂದ ರೈತರಿಗೆ ಸಾಲ Loan ಸೌಲಭ್ಯ ಸಿಗುತ್ತಿಲ್ಲ. ಇಂದು ಅನೇಕ ಸಣ್ಣ. ಅತಿ ಸಣ್ಣ ಮತ್ತು ಅನೇಕ ರೈತರು ಕಂಗಾಲ ರಾಗಿದಾರೆ, ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಆರೋಪಿಸಿದರು.
ನಾನು ಕೇಂದ್ರ ಸಚಿವನಾಗಿದ್ದಾಗ ಜಿಲ್ಲೆಗೆ 600 ಕೋಟಿ ಫಸಲ್ ಬಿಮಾ ಪರಿಹಾರ ಹಣ ತಂದಿದ್ದೆ.
ಆದರೆ, 2023-24 ರಲ್ಲಿ 2 ಲಕ್ಷ 1 ಸಾವಿರ ಜನ ನೋಂದಣಿ ಮಾಡಿಸಿದ್ದು ಕೇವಲ 12.60 ಕೋಟಿ ಮಾತ್ರ ಬಂದಿದೆ. ಪಕ್ಕದ ಕಲಬುರಗಿ ಜಿಲ್ಲೆಯಲ್ಲಿ 2 ಲಕ್ಷ 4 ಸಾವಿರ ಜನ ನೊಂದಣಿ ಮಾಡಿಸಿದ್ದು 656 ಕೋಟಿ ಫಸಲ ಬಿಮಾ ಪರಿಹಾರ ಹಣ ನೀಡಲಾಗಿದೆ. ಇದು ಜಿಲ್ಲಾ ಉಸ್ತುವಾರಿ ಸಚಿವರಿಗೆ ನಾಚಿಕೆ ತರುವ ವಿಷಯ ಎಂದು ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಛೇಡಿಸಿದರು.
ಜಿಲ್ಲೆಯಲ್ಲಿ ಒಂದು ಸಾಚಾ ಕಂಪನಿಯಿದೆ. ಸಚಿವ ಈಶ್ವರ ಖಂಡ್ರೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರ ಖಂಡ್ರೆ ಮತ್ತು ಸಂಸದ ಸಾಗರ ಖಂಡ್ರೆ ಅದರ ಸದಸ್ಯರಾಗಿದ್ದಾರೆ. `ಸೌ ಚುಹೆ ಖಾಕೆ ಬಿಲ್ಲಿ ಹಜ್ ಕೋ ಗಯಾ’ ಎನ್ನುವಂತೆ ಈ ಮೂವರ ಹೇಳಿಕೆಗೂ ನಡವಳಿಕೆಗೂ ಸಂಬಂಧವೇ ಇಲ್ಲ. ರೈತರ ಹೆಸರು ಹೇಳಿ ರಾಜಕೀಯ ಮಾಡುವ ಸಚಿವರ ಕುಟುಂಬ ಅವರ ಶೋಷಣೆ ಮಾಡುತ್ತಿದೆ. ಡಿಸಿಸಿ ಬ್ಯಾಂಕ್ ನಿಂದ ವಿಮಾ ಹಣ ಕಟ್ಟುವುದಿಲ್ಲ ಎಂದು ಅಮರ ಖಂಡ್ರೆ ಘೋಷಣೆ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಎಂಜಿಎಸ್‌ಎಸ್‌ಕೆಯಿಂದ ಡಿಸಿಸಿ ಬ್ಯಾಂಕ್‌ಗೆ 478 ಕೋಟಿ ಸಾಲ ಇದೆ. ಈ ಖಂಡ್ರೆ ಕುಟುಂಬದ ರಾಕ್ಷಸ ಪ್ರವೃತ್ತಿ ಆಡಳಿತದಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಇದಕ್ಕೆ ಕೊನೆ ಹಾಕಬೇಕಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಫಸಲ್ ಬಿಮಾ ನಿರ್ವಹಣೆ ಸರಿಯಿಲ್ಲ. ಪೊಲೀಸ್ ವ್ಯವಸ್ಥೆ ದುರ್ಬಲವಾಗಿದೆ. ಯುವಕರು ಮಾರಕಾಸ್ತ್ರ ಇಟ್ಟಿಕೊಂಡು ಓಡಾಡುತಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹೋರಾಟಗಾರರ ಮೇಲೆ ಕೇಸ್ ದಾಖಲಾಗುತ್ತಿವೆ. ಎಟಿಎಂ ದರೋಡೆಕೋರರ ಸುಳಿವಿಲ್ಲ. ಅಸಮರ್ಥ ಅಧಿಕಾರಿಗಳ ವರ್ಗಾವಣೆ ಇಲ್ಲ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಬಿಜೆಪಿಯಿಂದ ಹೋರಾಟ ಅನಿವಾರ್ಯ ಎಂದು ಹೇಳಿದರು.
ದೇಶದಲ್ಲಿ ತುರ್ತು ಪರಿಸ್ಥಿತಿ ವಿಧಿಸಿ ಜೂ.25ಕ್ಕೆ 25 ವರ್ಷಗಳು ತುಂಬುವ ಹಿನ್ನಲೆ ಅಂದು ನಗರದ ಮೈಲೂರ ಕ್ರಾಸ್ ಹತ್ತಿರ ಕರಾಳ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಪಕ್ಷದ ಜಿಲ್ಲೆಯ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ರಾಜಶೇಖರ ನಾಗಮೂರ್ತಿ, ಜ್ಞಾನೇಶ್ವರ ಪಾಟೀಲ, ಶ್ರೀನಿವಾಸ ಚೌಧರಿ, ಬಸವರಾಜ ಪವಾರ್, ಶಶಿಧರ ಹೊಸಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕೊಪ್ಪಳ.13.ಆಗಸ್ಟ್.25: ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶಗಳನ್ನು ಪರಿಚಯಿಸುವ ಉದ್ದೇಶದಿಂದ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ…
ಅಲ್ಪಸಂಖ್ಯಾತರ ಯೋಜನೆಗಳ ಅನುಷ್ಠಾನಕ್ಕೂ ಒತ್ತು ನೀಡಿ- ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳಕೊಪ್ಪಳ.13.ಆಗಸ್ಟ್.25: ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ…
ಕೊಪ್ಪಳ.13.ಆಗಸ್ಟ್.25:- ವ್ಯಾಪಾರ ವ್ಯವಹಾರ ಮಾಡುವವರು ಅಂಗಿ ಕಳೆದು ಹಮಾಲಿ ಮಾಡಲು ಸಿದ್ಧರಿದ್ದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ವಾಣಿಜ್ಯ…
ರಾಯಚೂರು.13.ಆಗಸ್ಟ್.25: ನಶಾ ಮುಕ್ತ ಭಾರತ ಅಭಿಯಾನದ 5ನೇ ವಾರ್ಷಿಕೋತ್ಸವದ ಕಾರ್ಯಕ್ರಮಗಳು ರಾಯಚೂರ ಜಿಲ್ಲೆಯಾದ್ಯಂತ ಆಗಸ್ಟ್ 13ರಂದು ವಿವಿಧೆಡೆ ನಡೆದವು. ಜಿಲ್ಲಾಡಳಿತ,…
ರಾಯಚೂರು.13.ಆಗಸ್ಟ.25: ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಇಚ್ಛಿಸುವ ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶವನ್ನು ಪರಿಚಯಿಸುವ ಉದ್ದೇಶದಿಂದ ಸ್ಟಡಿ ಅಬ್ರಾಡ್…
ರಾಯಚೂದು.13.ಆಗಸ್ಟ್.25:- ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ಆಯೋಜನೆ ಮಾಡಿದ ಅಗ್ನಿವೀರ್ ಸೇನಾ ಭರ್ತಿಗೆ 6ನೇ ದಿನವಾದ ಆಗಸ್ಟ್ 13ರಂದು…