2024-25ನೇ ಸಾಲಿನ ವಿವಿಧ ವಿಷಯಗಳಿಗೆ ಅತಿಥಿ ಉಪನ್ಯಾಸಕರ ನೇಮಕ.

ಬೆಂಗಳೂರು.11.ಮೇ .25:-  ಕಾಲೇಜು ಶಿಕ್ಷಣ ಇಲಾಖೆಯು 2024-25ನೇ ಸಾಲಿನ ಬಾಕಿ ಉಳಿದ 997 ಅತಿಥಿ ಉಪನ್ಯಾಸಕರ ನೇಮಕ  ಅವಧಿಗೆ ತಾತ್ಕಾಲಿಕವಾಗಿ 997 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿದೆ.

ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಕಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ನಂತರ ಉಳಿಕೆಯಾಗುವ ಬೋಧನಾ ಕಾರ್ಯಭಾರಕ್ಕೆ ಅನುಗುಣವಾಗಿ ಅತಿಥಿ ಉಪನ್ಯಾಸಕರನ್ನು ಆನ್‌ಲೈನ್‌ ಕೌನ್ಸೆಲಿಂಗ್‌ ಮೂಲಕ ನೇಮಕ ಮಾಡಿಕೊಳ್ಳಲಾಗಿದೆ.

ಹಿಂದಿನ ಸಾಲಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದವರನ್ನು ಈಗಾಗಲೇ ಲಭ್ಯವಿರುವ ಹೆಚ್ಚುವರಿ ಕಾರ್ಯಭಾರಕ್ಕೆ ಅನುಗುಣವಾಗಿ ಮುಂದುವರಿಸಲಾಗಿದೆ.

ಆಯ್ಕೆಯಾದ ಅಭ್ಯರ್ಥಿಗಳ ವಿಷಯವಾರು ಆಯ್ಕೆಪಟ್ಟಿಯನ್ನು ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಆಯ್ಕೆಯಾದವರು 3 ದಿನದೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಆಗಸ್ಟ್ 2ರವರೆಗೆ ಮಾತ್ರ ಇವರನ್ನು ಮುಂದುವರಿಸಲು ತಿಳಿಸಲಾಗಿದೆ.

prajaprabhat

Recent Posts

ವಿದ್ಯಾರ್ಥಿ ವೇತನ ಕೈಪಿಡಿ: ಮಿರೇ ಅಸೆಟ್ ಫೌಂಡೇಷನ್‌

ಮಿರೇ ಅಸೆಟ್ ಫೌಂಡೇಷನ್‌ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹತೆ: ಅರ್ಜಿದಾರರು ಹಿಂದಿನ…

1 hour ago

AllA ಅವರ “ಯೋಗ ಸಮಾವೇಶ” ಕಾರ್ಯಾಗಾರ ಇಂದು ಪ್ರಾರಂಭವಾಗಿದೆ

ಹೊಸ ದೆಹಲಿ.09.ಜೂನ.25:- ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಅಖಿಲ ಭಾರತ ಆಯುರ್ವೇದ ಸಂಸ್ಥೆ (AIIA) ಇಂದಿನಿಂದ ಯೋಗ ಸಮಾವೇಶ ಎಂಬ…

2 hours ago

ಸಿಕ್ಕಿಂನ ಭೂಕುಸಿತ ಪ್ರದೇಶಗಳಿಂದ 28 ನಾಗರಿಕರು ಮತ್ತು 20 ಸೈನಿಕರನ್ನು ವಿಮಾನದ ಮೂಲಕ ರಕ್ಷಿಸಲಾಗಿದೆ.

ಹೊಸ ದೆಹಲಿ.09.ಜೂನ್.25:- ಭಾರೀ ಮಳೆಯಿಂದಾಗಿ ಉಂಟಾದ ಹಲವಾರು ಭೂಕುಸಿತಗಳಿಂದಾಗಿ ಈ ಪ್ರದೇಶದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಉತ್ತರ ಸಿಕ್ಕಿಂನ ಚಾಟೆನ್‌ನಲ್ಲಿ…

2 hours ago

ಪ್ರತ್ಯೇಕತೆಯಿಂದ ನಾವೀನ್ಯತೆಯವರೆಗೆ – ಸೇವಾ, ಸುಶಾಸನ್, ಗರೀಬ್ ಕಲ್ಯಾಣ್ ಅಡಿಯಲ್ಲಿ ಒಂದು ದಶಕದ ಪರಿವರ್ತನೆ.

ಹೊಸ ದೆಹಲಿ.09.ಜೂನೆ.25:- ಸೇವಾ, ಸುಶಾಸನ ಮತ್ತು ಗರೀಬ್ ಕಲ್ಯಾಣ್ ತತ್ವಗಳಿಂದ ನಡೆಸಲ್ಪಡುವ ಭಾರತವು ಒಂದು ದಶಕದ ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ.…

2 hours ago

ಗ್ರಾ.ಪಂ.ಗಳಲ್ಲಿ ಅರ್ಹ ಆಸ್ತಿಗಳಿಗೆ ಇ-ಸ್ವತ್ತು ಅಭಿಯಾನ : ರಾಜ್ಯ ಸರ್ಕಾರ ಆದೇಶ.!

ಬೆಂಗಳೂರು.09.ಜೂನ್.25:- ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕನ ಹೆಸರು, ಸೇರ್ಪಡೆ, ಬದಲಾವಣೆ ಶುಲ್ಕವನ್ನು ನಮೂನೆ 9…

2 hours ago

ರಾಜ್ಯದಲ್ಲಿ ನಾಳೆಯಿಂದ ಭಾರೀ ಮಳೆ’ ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ

ಈ ಜಿಲ್ಲೆಗಳಲ್ಲಿ Yellow Alert ಬಳ್ಳಾರಿ, ದಾವಣಗೆರೆ, ಕೊಡಗು ಯಲ್ಲೋ ಅಲರ್ಟ್ ಬೆಂಗಳೂರು.09.ಜೂನ್.25:- ಕರ್ನಾಟಕದಲ್ಲಿ (Karnataka Rain) ಮೇ ಅಂತ್ಯದಿಂದ…

5 hours ago