77 ಶೇ. ಹೈಕೋರ್ಟ್ ನ್ಯಾಯಾಧೀಶರು ಮೇಲ್ಜಾತಗೆ ಸೇರಿದವರು.

ಹೊಸ ದಿಲ್ಲಿ.27.ಮಾರ್ಚ್.25:- ಹೈಕೋರ್ಟ್‌ಗಳಿಗೆ 2018 ನೇಮಕಗೊಂಡಿರುವ ನ್ಯಾಯಾಧೀಶರ ಪೈಕಿ 77%  ಮೇಲ್ಜಾತಿಗಳಿಗೆ ಸೇರಿದವರು ಈ ಶೇಕಡ ಹೋಲಿಸಿದರೆ, ಪರಿಶಿಷ್ಟ ಜಾತಿಯ 3 ಶೇಕಡ, ಪರಿಶಿಷ್ಟ ಪಂಗಡದ 2 ಶೇಕಡ, ಮತ್ತು  ಇತರ ಹಿಂದುಳಿದ ವರ್ಗ OBC ಒಬಿಸಿ 12 ಶೇಕಡ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಂದ 5 ಶೇಕಡ ನ್ಯಾಯಾಧೀಸರು ನೇಮಕಗೊಂಡಿದ್ದಾರೆ ಎಂದು ಕಾನೂನು ಸಚಿವಾಲಯ ಬುಧವಾರ ಸಂಸತ್‌ ಗೆ ಮಾಹಿತಿ ನೀಡಿದಾರೆ.

2018ರ ಬಳಿಕ, ಹೈಕೋರ್ಟ್ ನ್ಯಾಯಾಧೀಶ ಹುದ್ದೆಗಳಿಗೆ ನೇಮಕಗೊಳ್ಳುವವರು ತಮ್ಮ ಸಾಮಾಜಿಕ ಹಿನ್ನೆಲೆಗೆ ಸಂಬಂಧಿಸಿದ ವಿವರಗಳನ್ನು ಸಲ್ಲಿಸಬೇಕಾಗಿದೆ.

ನ್ಯಾಯಾಂಗದಲ್ಲಿ ವೈವಿಧ್ಯತೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳದ ಸಂಸದ ಮನೋಜ್ ಕುಮಾರ್ ಝಾ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಾನೂನು ಸಚಿವ ಅರ್ಜುನ್ ಕುಮಾರ್ ಮೇಘವಾಲ್, ”2018ರ ಬಳಿಕ ನೇಮಕಗೊಂಡಿರುವ 715 ಹೈಕೋರ್ಟ್ ನ್ಯಾಯಾಧೀಶರ ಪೈಕಿ 551 ಮಂದಿ ಮೇಲ್ಜಾತಿಗಳಿಗೆ ಸೇರಿದವರಾಗಿದ್ದಾರೆ.

ಉಳಿದಂತೆ, 22 ಮಂದಿ ಪರಿಶಿಷ್ಟ ಜಾತಿ, 16 ಮಂದಿ ಪರಿಶಿಷ್ಟ ಪಂಗಡ, 89 ಮಂದಿ ಒಬಿಸಿ ವರ್ಗ ಮತ್ತು 37 ಮಂದಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ್ದಾರೆ” ಎಂದು ತಿಳಿಸಿದರು.

ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯನ್ನು ನಡೆಸುವ ಜವಾಬ್ದಾರಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳದ್ದಾಗಿದೆ ಎಂದು ಹೇಳಿದ ಸಚಿವರು, ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿಯಲ್ಲಿ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದರು.

ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮತ್ತು ಹೈಕೋರ್ಟ್‌ಗಳ ಮುಖ್ಯ ನ್ಯಾಯಾಧೀಶರನ್ನು ನೇಮಿಸುವ ಜವಾಬ್ದಾರಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಹೊಂದಿದ್ದಾರೆ ಎಂದು ಸಚಿವರು ತಿಳಿಸಿದರು.

ನ್ಯಾಯಾಧೀಶರ ನೇಮಕಾತಿಯಲ್ಲಿ ವೈವಿಧ್ಯತೆಯನ್ನು ಕಾಪಾಡಿಕೊಂಡು ಬರುವ ಹೊಣೆ ಸುಪ್ರೀಂ ಕೋರ್ಟ್‌ನದ್ದಾಗಿದೆ ಎಂದು ಹೇಳಿದ ಅವರು, ”ಸುಪ್ರೀಂ ಕೋರ್ಟ್ ಕೊಲೀಜಿಯಮ್‌ನಿಂದ ಶಿಫಾರಸುಗೊಂಡಿರುವ ನ್ಯಾಯಾಧೀಶರು ಮಾತ್ರ ಸುಪ್ರೀಂ ಕೋಟ್ ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರಾಗುತ್ತಾರೆ” ಎಂದರು.

prajaprabhat

Recent Posts

ಆಧಾರ್ ಸೀಡಿಂಗ್ ಮಾಡಿಸುವಂತೆ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಸೂಚನೆ.

ರಾಯಚೂರು.11.ಆಗಸ್ಟ್.25: ಇಲ್ಲಿನ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಿಂದ ಜಿಲ್ಲೆಯ ಎಸ್.ಎಸ್.ಎಲ್.ಸಿ ಪ್ರೋತ್ಸಾಹಧನಕ್ಕಾಗಿ 2020 ರಿಂದ 2025ರವರೆಗೆ ಆಧಾರ್…

1 hour ago

ಪರೀಕ್ಷೆಯ ಫಲಿತಾಂಶ ಕಡಿಮೆ ಬಂದಿದ್ರೆ ‘ಶಾಲೆ’ಗಳ ವಿರುದ್ಧ ಕ್ರಮ ರಾಜ್ಯ ಸರ್ಕಾರ ಆದೇಶ

ಬೆಂಗಳೂರು.11.ಆಗಸ್ಟ್.25:- ರಾಜ್ಯದ ಸರ್ಕಾರಿ ಹಾಗೂ ಅನುದಾನಿತ್ ಶಾಲೆಗಳ SSLC ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಪಡೆದ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಾಜ್ಯ…

1 hour ago

ಯೂರಿಯಾ, ಡಿಎಪಿ ರಸಗೊಬ್ಬರ ಲಭ್ಯ: ಪ್ರಕಾಶ್ ಚೌಹಾಣ್

ರಾಯಚೂರು.11.ಆಗಸ್ಟ್.25:- ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದಿಂದ 2025-26 ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಗೆ ನಿಗದಿಪಡಿಸಿದ ಗುರಿಯಂತೆ ಯೂರಿಯಾ, ಡಿ.ಎ.ಪಿ ರಸಗೊಬ್ಬರ…

2 hours ago

ಅಗ್ನಿವೀರ್ ಸೇನಾ ಭರ್ತಿ: ನಾಲ್ಕನೇ ದಿನ 764 ಅಭ್ಯರ್ಥಿಗಳು ಭಾಗಿ

ರಾಯಚೂರು.11.ಆಗಸ್ಟ್.25:- ಅಗ್ನಿವೀರ್ ಸೇನಾ ಭರ್ತಿಗೆ ಆಗಸ್ಟ್ 11 ರಂದು ಒಟ್ಟು 764 ಅಭ್ಯರ್ಥಿಗಳು ವರದಿ ಮಾಡಿಕೊಂಡರು. ಆಗಸ್ಟ್ 11 ರಂದು…

2 hours ago

ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೇರಿಗೆ ಮಾಡಿ ಜನ ಸಾಮಾನ್ಯರಿಂದ ಹಣ ವಸೂಲಿ

ಬೀದರ.11.ಆಗಸ್ಟ್.25:- ಬೀದರ್ ಜಿಲ್ಲೆಯ ಔರಾದ ಬಾ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೇರಿಗೆ ಮಾಡಿ ಜನ ಸಾಮಾನ್ಯರಿಂದ ಹಣ ವಸೂಲಿ…

2 hours ago

ಒಳಮೀಸಲಾತಿ ತೀರ್ಮಾನ ನಂತರ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ  ಮಾಡಲಾಗುವುದು.

ಬೆಂಗಳೂರು.11.ಆಗಸ್ಟ್.25:- ರಾಜ್ಯದಲ್ಲಿ ಒಳಮೀಸಲಾತಿ ಸಂಬಂಧ ರಾಜ್ಯಸರ್ಕಾರ ಸ್ಪಷ್ಟವಾದ ತೀರ್ಮಾನ ತೆಗೆದುಕೊಂಡ ಮೇಲೆ ರಾಜ್ಯಾದ್ಯಂತ ಕಾಲೇಜುಗಳಲ್ಲಿ ಖಾಲಿಯಿರುವ ಗುಡ್ಡೆಗಳು ಭರ್ತಿ ಮಾಡಲಾಗುವುದು…

2 hours ago